ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಸಂದಣಿ, ನೂಕಾಟಗಳು ಮುಂದುವರಿದಿದ್ದು ಮತ್ತೆ 7 ಮಂದಿ ಮೃತಪಟ್ಟಿದ್ದಾಗಿ ಇಂದು ಬ್ರಿಟಿಷ್ ಸೇನೆ ತಿಳಿಸಿದೆ. ತಾಲಿಬಾನ್ ಆಡಳಿತಕ್ಕೆ ಒಳಪಟ್ಟ ಅಫ್ಘಾನಿಸ್ತಾನದಿಂದ ಪಾರಾಗುವವರು ಇನ್ನೂ ಅಪಾಯದಲ್ಲೇ ಇದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದೂ ಹೇಳಿದೆ. ಅಫ್ಘಾನಿಸ್ತಾನದಿಂದ ಜನರನ್ನು ರಕ್ಷಿಸುವ ಕೆಲಸ ತುಂಬ ಸವಾಲಾಗಿ ಪರಿಣಮಿಸಿದೆ. ಈ ಮಧ್ಯೆಯೂ ನಾವು ಸುರಕ್ಷಿತವಾಗಿ ಜನರನ್ನು ಅಲ್ಲಿಂದ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದೇವೆ ಎಂದು ಯುಕೆ ಸೈನ್ಯ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಕಾಬೂಲ್ ಏರ್ಪೋರ್ಟ್ ಹೊರಗೆ ಅಪಾಯವಿದೆ. ಹಾಗಾಗಿ ಅಲ್ಲಿಂದ ಪಾರಾಗಬೇಕು ಎಂಬ ಕಾರಣಕ್ಕೆ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಡಿ ಎಂದು ಅಫ್ಘಾನಿಸ್ತಾನದಲ್ಲಿರುವ ಯುಎಸ್ ರಾಯಭಾರಿ ಕಚೇರಿ, ಅಲ್ಲಿರುವ ಅಮೆರಿಕನ್ನರಿಗೆ ಎಚ್ಚರಿಕೆ ನೀಡಿದ ಒಂದು ದಿನದಲ್ಲೇ ಹೀಗೊಂದು ಬೆಳವಣಿಗೆ ನಡೆದಿದೆ. ಕಾಬೂಲ್ ಏರ್ಪೋರ್ಟ್ ಸುತ್ತಲೂ ತಾಲಿಬಾನಿಗಳು ಇದ್ದಾರೆ. ಕೆಲವರನ್ನು ಬೆದರಿಸಿ ಕಳಿಸುತ್ತಿದ್ದಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ, ಕಾಬೂಲ್ ಏರ್ಪೋರ್ಟ್ನಲ್ಲಿ ಸಿಕ್ಕಾಪಟೆ ನೂಕುನುಗ್ಗಲು ಆಗುತ್ತಿರುವುದರಿಂದಲೂ ಜೀವ ಹಾನಿಯಾಗುತ್ತಿದೆ. ಈ ಮಧ್ಯೆ ಕಾಬೂಲ್ ಏರ್ಪೋರ್ಟ್ ಮೇಲೆ ಅಫ್ಘಾನಿಸ್ತಾನದಲ್ಲಿರುವ ಇಸ್ಲಾಮಿಕ್ ಸ್ಟೇಟ್ನ ಶಾಖೆಯಿಂದ ದಾಳಿಯಾಗಬಹುದು ಎಂಬ ಆತಂಕ ಯುಎಸ್ಗೆ ಶುರುವಾಗಿದೆ. ಹಾಗಾಗಿಯೇ ಅಲ್ಲಿರುವ ತಮ್ಮ ದೇಶದ ನಾಗರಿಕರಿಗೆ ಕಾಬೂಲ್ ಏರ್ಪೋರ್ಟ್ಗೆ ಬರಬೇಡಿ ಎನ್ನುತ್ತಿದೆ.
ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಮುಂದೆ ಮೈಮರೆತು ಬಳುಕಿದ ನೀರೆಯರು: ಇದು ಅಗೌರವ ಎಂದ ನೆಟ್ಟಿಗರು
ಅಫ್ಘಾನಿಸ್ತಾನದಿಂದ ಬಂದವರಿಗೆ ಭಾರತದಲ್ಲಿ ಉಚಿತ ಪೋಲಿಯೊ ಲಸಿಕೆ: ಕೇಂದ್ರ ಆರೋಗ್ಯ ಸಚಿವ