Akshardham: ಅಮೆರಿಕದಲ್ಲಿ ಅಕ್ಷರಧಾಮ ನಿರ್ಮಾಣ, ಶುಭಾಶಯ ಕೋರಿದ ಪ್ರಧಾನಿ ಮೋದಿ, ಬ್ರಿಟನ್ ಪ್ರಧಾನಿ ರಿಷಿ ಸುನಕ್

|

Updated on: Oct 02, 2023 | 11:03 AM

ಅಮೆರಿಕದಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ದೇವಾಲಯ ಬಿಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮವು ನಿರ್ಮಾಣವಾಗಿದೆ. ಅಮೆರಿಕದ ಅತಿದೊಡ್ಡ ಹಿಂದೂ ದೇವಾಲಯವಾದ ಬಿಎಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮವು ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆಯಲ್ಲಿ ನಿರ್ಮಾಣವಾಗಿದೆ. ಅಕ್ಟೋಬರ್ 8 ರಂದು ಉದ್ಘಾಟನೆ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶುಭಾಶಯ ಕೋರಿದ್ದಾರೆ.

Akshardham: ಅಮೆರಿಕದಲ್ಲಿ ಅಕ್ಷರಧಾಮ ನಿರ್ಮಾಣ, ಶುಭಾಶಯ ಕೋರಿದ ಪ್ರಧಾನಿ ಮೋದಿ, ಬ್ರಿಟನ್ ಪ್ರಧಾನಿ ರಿಷಿ ಸುನಕ್
ನರೇಂದ್ರ ಮೋದಿ
Follow us on

ಅಮೆರಿಕದಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ದೇವಾಲಯ ಬಿಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮ(Akshardham)ವು ನಿರ್ಮಾಣವಾಗಿದೆ. ಅಮೆರಿಕದ ಅತಿದೊಡ್ಡ ಹಿಂದೂ ದೇವಾಲಯವಾದ ಬಿಎಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮವು ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆಯಲ್ಲಿ ನಿರ್ಮಾಣವಾಗಿದೆ. ಸೆಪ್ಟೆಂಬರ್ 30ರಂದೇ ಉದ್ಘಾಟನಾ ಕಾರ್ಯಕ್ರಮ ನೆರವೇರಿದ್ದು,  ಅಕ್ಟೋಬರ್ 8ರವರೆಗೆ ಉದ್ಘಾಟನಾ ಕಾರ್ಯಕ್ರಮ ಮುಂದುವರೆಯಲಿದೆ.  ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶುಭಾಶಯ ಕೋರಿದ್ದಾರೆ.

ಈ ದೇವಾಲಯವು ಸ್ವಾಮಿನಾರಾಯಣನಿಗೆ ಸಮರ್ಪಿತವಾಗಿದೆ. ಅವರ 5ನೇ ಆಧ್ಯಾತ್ಮಿಕ ಉತ್ತರಾಧಿಕಾರಿ ಮತ್ತು ಪ್ರಸಿದ್ಧ ಸಂತ ಪ್ರಮುಖ್ ಸ್ವಾಮಿ ಮಹಾರಾಜ್ ಅವರಿಂದ ಸ್ಫೂರ್ತಿ ಪಡೆದಿದೆ.

ಈ ಭವ್ಯ ದೇವಾಲಯದ ನಿರ್ಮಾಣವು 2015 ರಲ್ಲಿ ಪ್ರಾರಂಭವಾಯಿತು. ಇದನ್ನು 8 ಅಕ್ಟೋಬರ್ 2023 ರಂದು ಮಹಂತ್ ಸ್ವಾಮಿ ಮಹಾರಾಜ್ ಮತ್ತು ಇತರರು ಉದ್ಘಾಟಿಸಲಿದ್ದಾರೆ.

ಮತ್ತಷ್ಟು ಓದಿ: ಜಿ20 ಶೃಂಗಸಭೆ: ಅಕ್ಷರಧಾಮಕ್ಕೆ ಭೇಟಿಕೊಟ್ಟ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ

ಭಾರತದಲ್ಲೇ ವಿನ್ಯಾಸ
ಈ ದೇವಾಲಯವನ್ನು ಭಾರತದಲ್ಲಿಯೇ ವಿನ್ಯಾಸಗೊಳಿಸಲಾಗಿದೆ. ಯುರೋಪಿನ ಅನೇಕ ಭಾಗಗಳಿಂದ ಅನೇಕ ಮಾದರಿಯ ಕಲ್ಲುಗಳನ್ನು ಭಾರತಕ್ಕೆ ಕಳುಹಿಸಲಾಯಿತು, ಅಲ್ಲಿ ಅದನ್ನು ಕೆತ್ತಲಾಯಿತು. ನಂತರ ಅದನ್ನು ಅಮೆರಿಕಕ್ಕೆ ಕಳುಹಿಸಲಾಯಿತು. ದೇವಾಲಯವು ಪೂರ್ಣಗೊಳ್ಳುವ ಹಂತದಲ್ಲಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ದೇವಾಲಯವು ಇಲ್ಲಿಗೆ ಭೇಟಿ ನೀಡುವ ಎಲ್ಲರಿಗೂ ಶಾಂತಿಯನ್ನು ನೀಡುತ್ತದೆ. ಮಾನವೀಯತೆಯ ಸೇವೆಯ ಸಂದೇಶವನ್ನು ಸಾರುತ್ತದೆ ಎಂದು ಸ್ವಯಂ ಸೇವಕಿ ಸಾರಿಕಾ ಪಟೇಲ್ ಹೇಳಿದ್ದಾರೆ.

ವಿಶೇಷತೆ ಏನು?
ಈ ದೇವಾಲಯವು ಭಾರತದ ಹೊರಗೆ ಆಧುನಿಕ ಕಾಲದಲ್ಲಿ ನಿರ್ಮಿಸಲಾದ ಎರಡನೇ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಈ ದೇವಾಲಯವನ್ನು ನಿರ್ಮಿಸಲು ನಾಲ್ಕು ವಿಧದ ಕಲ್ಲುಗಳನ್ನು ಬಳಸಲಾಗಿದೆ. ಅದರಲ್ಲಿ ಸುಣ್ಣದ ಕಲ್ಲು, ಗುಲಾಬಿ ಮರಳುಗಲ್ಲು, ಮಾರ್ಬಲ್, ಗ್ರಾನೈಟ್ ಬಳಸಲಾಗಿದೆ. ಬಲ್ಗೇರಿಯಾ ಮತ್ತು ಟರ್ಕಿಯಿಂದ ಸುಣ್ಣದ ಕಲ್ಲು, ಗ್ರೀಸ್ ಮತ್ತು ಇಟಲಿಯಿಂದ ಅಮೃತಶಿಲೆ, ಭಾರತ ಮತ್ತು ಚೀನಾದಿಂದ ಗ್ರಾನೈಟ್ ತರಲಾಯಿತು. ಭಾರತದಿಂದ ಮರಳುಗಲ್ಲನ್ನೂ ತರಲಾಗಿದೆ. ದೇವಾಲಯದ ಸಂಕೀರ್ಣದಲ್ಲಿ ಬ್ರಹ್ಮಕುಂಡ ಕೂಡ ಇದೆ, ಇದು ಭಾರತದ ಪವಿತ್ರ ನದಿಗಳು ಮತ್ತು ಅಮೆರಿಕದ ನದಿಗಳ ನೀರನ್ನು ಒಳಗೊಂಡಿದೆ.

ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ಸರಿಸುಮಾರು 185 ಎಕರೆಗಳಷ್ಟು ವಿಸ್ತಾರವಾಗಿದೆ. ಈ ದೇವಾಲಯವನ್ನು ನಿರ್ಮಿಸಲು ಒಗ್ಗೂಡಿದ 12,500 ಕ್ಕೂ ಹೆಚ್ಚು ಸ್ವಯಂಸೇವಕರ ಪ್ರೀತಿ, ಸಮರ್ಪಣೆ ಮತ್ತು ಕೌಶಲ್ಯಕ್ಕೆ ಇದು ಸಾಕ್ಷಿಯಾಗಿದೆ. ಭಾರತದ ಇತರ ಅಕ್ಷರಧಾಮ ದೇವಾಲಯಗಳಂತೆ, ಈ ಧಾರ್ಮಿಕ ರಚನೆಯನ್ನು BAPS ಮಾಸ್ಟರ್ಸ್ ಮತ್ತು ಭಾರತದಲ್ಲಿನ ಸ್ವಯಂಸೇವಕರ ತಂಡದಿಂದ ವಿನ್ಯಾಸಗೊಳಿಸಲಾಗಿದೆ.
ನವದೆಹಲಿಯ ಅಕ್ಷರಧಾಮ ದೇಗುಲ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿರುವುದು ಕುತೂಹಲಕಾರಿ ಸಂಗತಿ.

ಈ ದೇವಾಲಯವು 100 ಎಕರೆಗಳಷ್ಟು ವಿಸ್ತಾರವಾಗಿದೆ. ಅದೇ ಹೊತ್ತಿಗೆ ಅಮೆರಿಕದ ಅಕ್ಷರಧಾಮ ದೇವಾಲಯವೂ ದಾಖಲೆ ಮುರಿಯಲು ಸಿದ್ಧವಾಗಿದೆ. BAPS ಸ್ವಾಮಿನಾರಾಯಣ ಸಂಸ್ಥೆಯು ಭಾರತ, UK, USA, ಕೆನಡಾ, ಕೀನ್ಯಾ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಸುಮಾರು 1,400 ದೇವಾಲಯಗಳನ್ನು ನಿರ್ಮಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:55 am, Mon, 2 October 23