- Kannada News Photo gallery G20 Summit: Rishi Sunak offers prayers at Akshardham temple in Delhi, and PM Modi Welcomes world Leaders At Rajghat See in Pics
ಜಿ20 ಶೃಂಗಸಭೆ: ಅಕ್ಷರಧಾಮಕ್ಕೆ ರಿಷಿ ಸುನಕ್, ರಾಜ್ಘಾಟ್ಗೆ ವಿಶ್ವ ನಾಯಕರ ಭೇಟಿಯ ಚಿತ್ರಗಳು ಇಲ್ಲಿವೆ
ದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿ20 ಶೃಂಗಸಭೆಗೆ ವಿಶ್ವ ನಾಯಕರು ಭಾಗವಹಿಸಿದ್ದಾರೆ. ಬ್ರಿಟನ್ ಪ್ರಧಾನಿ ಭಾರತದ ಅಳಿಯ ರಿಷಿ ಸುನಕ್ ದಂಪತಿ ಅಕ್ಷರಧಾಮಕ್ಕೆ ಭೇಟಿ ನೀಡಿದರು, ಹಾಗೆಯೇ ವಿಶ್ವ ನಾಯಕರು ರಾಜ್ಘಾಟ್ಗೆ ಭೇಟಿ ನೀಡಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು ಕೆಲವು ಚಿತ್ರಗಳು ಇಲ್ಲಿವೆ.
Updated on: Sep 10, 2023 | 10:41 AM

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ ದಂಪತಿ ದೆಹಲಿಯಲ್ಲಿರುವ ಅಕ್ಷರಧಾಮಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ತಮಗೆ ಹಿಂದೂ ಎಂದು ಕರೆದುಕೊಳ್ಳಲು ಸಂತೋಷವಾಗುತ್ತದೆ. ಪ್ರಧಾನಿ ಮೋದಿಯವರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಜಿ20ಯು ಅಗಾಧ ಯಶಸ್ಸನ್ನು ನೀಡಲಿ ಎಂದು ರಿಷಿ ಸುನಕ್ ಹೇಳಿದ್ದಾರೆ.

ರಿಷಿ ಸುನಕ್ ಜಿ20 ಶೃಂಗಸಭೆಗಾಗಿ ಆಗಮಿಸಿದ್ದಾಗ, ದೇವಸ್ಥಾನಗಳಿಗೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಈ ಬಾರಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಸಾಧ್ಯವಾಗಿಲ್ಲ ಎಂದರು.

ನಾನು ಹೆಮ್ಮೆಯ ಹಿಂದೂ, ನಾನೂ ಬೆಳದಿದ್ದು ಹೀಗೆ, ನಾನು ಹಾಗೆಯೇ ಇದ್ದೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ.

ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಆತ್ಮೀಯತೆಯಿಂದ ರಾಜ್ಘಾಟ್ಗೆ ಸ್ವಾಗತಿಸಿದರು. ಮಹಾತ್ಮ ಗಾಂಧಿಗೆ ನಮನ ಸಲ್ಲಿಸಿದರು.

ಮಾರಿಷಸ್ ಪ್ರಧಾನಿ ಪ್ರವಿಂದ್ ಅವರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು, ಅವರಿಗೂ ಕೂಡ ಶಾಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದರು.

ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅವರನ್ನು ಪ್ರಧಾನಿ ಮೋದಿ ರಾಜ್ಘಾಟ್ಗೆ ಸ್ವಾಗತಿಸಿದರು. ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು.

ಬ್ರಿಟನ್ ಪ್ರಧಾನಿ ರಿಷಿ ಸುನಕ್ ರಾಜ್ಘಾಟ್ಗೆ ಆಗಮಿಸಿದರು. ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು.ನರೇಂದ್ರ ಮೋದಿ ಸಂತಸದಿಂದ ಅವರನ್ನು ಬರಮಾಡಿಕೊಂಡರು.




