ನಟಿ ಸಾನ್ಯಾ ಅಯ್ಯರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಆ್ಯಕ್ಟೀವ್ ಆಗಿದ್ದಾರೆ. ಫ್ಯಾನ್ಸ್ಗೋಸ್ಕರ ಅವರು ಆಗಾಗ ಫೋಟೋ ಹಂಚಿಕೊಳ್ಳುತ್ತಾರೆ. ಈಗ ಅವರು ಹಂಚಿಕೊಂಡಿರುವ ಕಲರ್ಫುಲ್ ಫೋಟೋ ವೈರಲ್ ಆಗಿದೆ.
ಸಾನ್ಯಾ ಅವರು ಹಂಚಿಕೊಂಡಿರುವ ಫೋಟೋ ಗ್ಲಾಮರಸ್ ಆಗಿದೆ. ಸ್ವಿಮ್ಮಿಂಗ್ ಪೂಲ್ ಎದುರು ನಿಂತು ಸಾನ್ಯಾ ಅವರು ಗಮನ ಸೆಳೆದಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. ‘ನೀವು ಸೂಪರ್ ಆಗಿ ಕಾಣಿಸುತ್ತೀರಿ’ ಎಂದು ಅನೇಕರು ಹೇಳಿದ್ದಾರೆ.
ಸಾನ್ಯಾ ಅಯ್ಯರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಇನ್ಸ್ಟಾಗ್ರಾಮನ್ನಲ್ಲಿ 2 ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ.
ಸಾನ್ಯಾ ಅಯ್ಯರ್ ಅವರು ಕಿರುತೆರೆ ಮೂಲಕ ಪರಿಚಯಗೊಂಡರು. ‘ಪುಟ್ಟಗೌರಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಆ ಬಳಿಕ ಅವರು ಬಿಗ್ ಬಾಸ್ ಒಟಿಟಿ ಹಾಗೂ ‘ಬಿಗ್ ಬಾಸ್ ಸೀಸನ್ 9’ರಲ್ಲಿ ಕಾಲಿಟ್ಟರು.
ಸಾನ್ಯಾ ಅಯ್ಯರ್ ಅವರು ಈಗ ಸಿನಿಮಾ ಒಪ್ಪಿಕೊಂಡಿದ್ದಾರೆ. ಅವರ ಮೊದಲ ಚಿತ್ರಕ್ಕೆ ‘ಗೌರಿ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಇಂದ್ರಜಿತ್ ಲಂಕೇಶ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಮರ್ಜಿತ್ ಈ ಸಿನಿಮಾಗೆ ಹೀರೋ.
ಹಲವು ಸಿನಿಮಾಗಳನ್ನು ಇಂದ್ರಜಿತ್ ನಿರ್ದೇಶನ ಮಾಡಿದ್ದಾರೆ.ಅವರ ನಿರ್ದೇಶನದಲ್ಲಿ ನಟಿಸೋಕೆ ಆಫರ್ ಸಿಕ್ಕಿರೋದಕ್ಕೆ ಸಾನ್ಯಾ ಅಯ್ಯರ್ ಸಖತ್ ಖುಷಿಯಲ್ಲಿದ್ದಾರೆ. ಅವರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
Published On - 1:42 pm, Sun, 10 September 23