ಮುಂದಿನ 24 ಗಂಟೆಗಳಲ್ಲಿ ಪಾಕಿಸ್ತಾನ ತನ್ನ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಭೂಕಂಪ(Earthquake)ವನ್ನು ಎದುರಿಸಬೇಕಾಗುತ್ತದೆ ಎಂದು ನೆದರ್ಲೆಂಡ್ನ ವಿಜ್ಞಾನಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯವನ್ನು ನೆದರ್ಲ್ಯಾಂಡ್ಸ್ ಮೂಲದ ಸಂಸ್ಥೆ ಸೋಲಾರ್ ಸಿಸ್ಟಂ ಜಿಯೋಮೆಟ್ರಿ ಸರ್ವೆ(SSGEOS) ನ ಡಚ್ ಸಂಶೋಧಕ ಫ್ರಾಂಕ್ ಹೂಗರ್ಬೀಟ್ಸ್ ನುಡಿದಿದ್ದಾರೆ. ಅಕ್ಟೋಬರ್ 1 ಮತ್ತು 3 ರ ನಡುವಿನ ಸಮಯವು ಪಾಕಿಸ್ತಾನಕ್ಕೆ ನಿರ್ಣಾಯಕ ಬಲೂಚಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಲಿದೆ ಎಂದು ಹೂಗರ್ಬೀಟ್ಸ್ ಹೇಳಿದ್ದಾರೆ.
ಪಾಕಿಸ್ತಾನದ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿತು, PMD ಈ ಊಹಾಪೋಹಗಳನ್ನು ತಿರಸ್ಕರಿಸಿದೆ ಮತ್ತು ಯಾವುದೇ ಭೂಕಂಪದ ಚಟುವಟಿಕೆಯನ್ನು ನಿಖರವಾಗಿ ಊಹಿಸಲು ಅಸಾಧ್ಯವೆಂದು ಹೇಳಿದೆ. ಭೂಮಿಯೊಳಗಿನ ಎರಡು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಗಡಿಗಳು ಪಾಕಿಸ್ತಾನದ ಮೂಲಕ ಹಾದುಹೋಗುತ್ತವೆ ಎಂದು ಪಾಕಿಸ್ತಾನದ ಹವಾಮಾನ ಕಚೇರಿ ತಿಳಿಸಿದೆ.
ಸೋನ್ಮಿಯಾನಿಯಿಂದ ದೇಶದ ಉತ್ತರ ಪ್ರದೇಶದವರೆಗೆ ವಿಸ್ತರಿಸಿದೆ. ಈ ಗಡಿ ರೇಖೆಗಳಲ್ಲಿ ಯಾವುದೇ ಹಂತದಲ್ಲಿ ಭೂಕಂಪ ಸಂಭವಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. 1892ರಲ್ಲಿ ರಿಕ್ಟರ್ ಮಾಪಕದಲ್ಲಿ 9ರಿಂದ 10ರಷ್ಟು ಪ್ರಮಾಣದ ಭೂಕಂಪ ಸಂಭವಿಸಿದಾಗ ಚಮನ್ ಫಾಲ್ಟ್ ಲೈನ್‌ನಲ್ಲಿ ಕೊನೆಯ ಬಾರಿಗೆ ಭಾರಿ ಭೂಕಂಪ ಸಂಭವಿಸಿತ್ತು.
ಮತ್ತಷ್ಟು ಓದಿ: New Zealand Earthquake: ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ 6.1 ತೀವ್ರತೆಯ ಭೂಕಂಪ
ಸಾಮಾನ್ಯವಾಗಿ 100 ವರ್ಷಗಳ ನಂತರ ಅದೇ ಗಡಿ ರೇಖೆಯಲ್ಲಿ ಮತ್ತೆ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ಹವಾಮಾನ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಇದುವರೆಗೆ ಭೂಕಂಪದ ಕುರಿತು ಯಾವುದೇ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಯಾವುದೇ ಎಚ್ಚರಿಕೆ ಅಥವಾ ಸೂಚನೆಗಳು ಬಂದಿಲ್ಲ ಎಂದು ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ