ಮೆಕ್ಸಿಕೋದಲ್ಲಿ ಟ್ರಕ್ ಪಲ್ಟಿಯಾಗಿ 10 ಜನ ಸಾವು, 17 ಜನರಿಗೆ ಗಾಯ
ಸರಕು ಸಾಗಣೆ ಟ್ರಕ್ ಅಪಘಾತಕ್ಕೀಡಾಗಿ 10 ಕ್ಯೂಬನ್ ವಲಸಿಗರು ಸಾವನ್ನಪ್ಪಿದ್ದು, 17 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ದಕ್ಷಿಣ ಮೆಕ್ಸಿಕನ್ ರಾಜ್ಯವಾದ ಚಿಯಾಪಾಸ್‌ಯಲ್ಲಿ ನಡೆದಿದೆ. ಚಿಯಾಪಾಸ್‌ನಲ್ಲಿನ ಪಿಜಿಜಿಯಾಪಾನ್-ಟೋನಾಲಾ ಹೆದ್ದಾರಿಯ ಪೆಸಿಫಿಕ್ ಕರಾವಳಿಯಲ್ಲಿ ಈ ಅಪಘಾತ ಸಂಭವಿಸಿದೆ
ಚಿಯಾಪಾಸ್, ಅ.2: ಸರಕು ಸಾಗಣೆ ಟ್ರಕ್ ಅಪಘಾತಕ್ಕೀಡಾಗಿ 10 ಕ್ಯೂಬನ್ ವಲಸಿಗರು ಸಾವನ್ನಪ್ಪಿದ್ದು, 17 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ದಕ್ಷಿಣ ಮೆಕ್ಸಿಕನ್ ರಾಜ್ಯವಾದ ಚಿಯಾಪಾಸ್‌ಯಲ್ಲಿ ನಡೆದಿದೆ. ಚಿಯಾಪಾಸ್‌ನಲ್ಲಿನ ಪಿಜಿಜಿಯಾಪಾನ್-ಟೋನಾಲಾ ಹೆದ್ದಾರಿಯ ಪೆಸಿಫಿಕ್ ಕರಾವಳಿಯಲ್ಲಿ ಈ ಅಪಘಾತ ಸಂಭವಿಸಿದೆ, ಗ್ವಾಟೆಮಾಲಾದಿಂದ ಮೆಕ್ಸಿಕೊಕ್ಕೆ ಉತ್ತರಕ್ಕೆ ಯುನೈಟೆಡ್ ಸ್ಟೇಟ್ಸ್ ಕಡೆಗೆ ಹೋಗುವ ಮಾರ್ಗದಲ್ಲಿ ವಲಸಿಗರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.
ಇನ್ನು ಅಪಘಾತ ಮಾಡಿದ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ವರದಿಗಳ ಪ್ರಕಾರ ಈ ಟ್ರಕ್ ಚಾಲಕ ವೇಗವಾಗಿ ಬಂದ ಕಾರಣ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ನಂತರ ಟ್ರಕ್ ಮರಕ್ಕೆ ಡಿಕ್ಕಿ ಹೊಡೆದಿದೆ. ಸಾವನ್ನಪ್ಪಿರುವವರನ್ನು ಇನ್ನು ಗುರುತಿಸಲಾಗಿಲ್ಲ, ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ: ಮೆಕ್ಸಿಕೋ; ಜೆಂಡರ್ ರಿವೀಲ್ ಪಾರ್ಟಿ, ಸ್ಟಂಟ್ ವಿಮಾನ ಪತನದಿಂದ ಪೈಲಟ್ ಸಾವು, ವಿಡಿಯೋ ವೈರಲ್
ಇನ್ನು ಈ ಪ್ರದೇಶಲ್ಲಿ ಇಂತಹ ಅನೇಕ ಘಟನೆಗಳು ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಡಿಸೆಂಬರ್ 2021ರಲ್ಲಿ, ಕೂಡ ಚಿಯಾಪಾಸ್‌ನಲ್ಲಿ ಟ್ರಕ್ ಪಲ್ಟಿಯಾಗಿ 54 ಜನ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ