ಬೀದಿಬೀದಿ ಅಲೆಯುತ್ತಿದ್ದ ಹೆಣ್ಣು ದೆವ್ವಕ್ಕೆ ಗುಂಡು ಹೊಡೆದು ಕೊಂದ ವ್ಯಕ್ತಿ !; ತಲೆ ಕೆಡಿಸಿಕೊಂಡ ಪೊಲೀಸರು

ಈ ಘಟನೆ ನಡೆದದ್ದು ಅಕ್ಟೋಬರ್​ 15ರಂದು. ಆದರೆ ತಡವಾಗಿ ಬೆಳಕಿಗೆ ಬಂದಿದೆ. ಅಂದು ಕೂಡ ಯುವತಿ ಬಿಳಿಬಣ್ಣದ ನಿಲುವಂಗಿ ಧರಿಸಿ, ಭಯಾನಕವಾಗಿ ಮುಖಕ್ಕೆಲ್ಲ ಬಣ್ಣಬಳಿದುಕೊಂಡು ಕೂಗುತ್ತ ಓಡಾಡುತ್ತಿದ್ದಳು.

ಬೀದಿಬೀದಿ ಅಲೆಯುತ್ತಿದ್ದ ಹೆಣ್ಣು ದೆವ್ವಕ್ಕೆ ಗುಂಡು ಹೊಡೆದು ಕೊಂದ ವ್ಯಕ್ತಿ !; ತಲೆ ಕೆಡಿಸಿಕೊಂಡ ಪೊಲೀಸರು
ಸಾಂಕೇತಿಕ ಚಿತ್ರ
Updated By: Lakshmi Hegde

Updated on: Oct 23, 2021 | 1:04 PM

ಜನರನ್ನು ಹೆದರಿಸಲು ದೆವ್ವದಂತೆ ವೇಷ ಹಾಕಿಕೊಂಡು, ಖಾಲಿ ರಸ್ತೆಯಲ್ಲಿ ತಿರುಗುತ್ತಿದ್ದ ಯುವತಿಯೊಬ್ಬಳು ವ್ಯಕ್ತಿಯ ಗುಂಡೇಟಿಗೆ ಬಲಿಯಾಗಿದ್ದಾಳೆ. ಈಕೆ 20-25ವರ್ಷದ ಯುವತಿಯಾಗಿದ್ದು, ಬಿಳಿಬಣ್ಣದ ಉಡುಪು ಧರಿಸಿ, ಭಯಾನಕವಾಗಿ ಮೇಕಪ್​ ಮಾಡಿಕೊಂಡು ಥೇಟ್​ ದೆವ್ವದಂತೆ ವೇಷ ಹಾಕಿಕೊಂಡು ಓಡಾಡುತ್ತಿದ್ದಳು. ಅನೇಕರು ಇವಳನ್ನು ನೋಡಿ ಭಯಬಿದ್ದಿದ್ದಾರೆ. ಆದರೆ ವ್ಯಕ್ತಿಯೊಬ್ಬರ ಗುಂಡು ಹಾರಿಸಿ ಅವಳನ್ನು ಹತ್ಯೆ ಮಾಡಿದ್ದಾನೆ.

ಮೆಕ್ಸಿಕೋದ ನೌಕ್‌ಚೋಟ್ ಡಿ ಜುವಾರೆಜ್‌ದಲ್ಲಿ ಘಟನೆ ನಡೆದಿದೆ. ಈ ಯುವತಿಯನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಈಕೆ ಲ್ಯಾಟಿನ್​ ಅಮೆರಿಕಾದಲ್ಲಿ ಹೆಸರಾದ ದೆವ್ಚ ಲಾ ಲೊರೊನಾಳಂತೆ ಉಡುಪು ಧರಿಸುತ್ತಿದ್ದಳು.  (ಲಾ ಲೊರೊನಾ ಎಂದರೆ ಸತ್ತುಹೋದ ತನ್ನ ಮಕ್ಕಳನ್ನು ಅರಸುತ್ತ ಬೀದಿಯಲ್ಲಿ ಅಲೆದಾಡುವ ದೆವ್ವ ಎಂದು ಲ್ಯಾಟಿನ್​ ಅಮೆರಿಕ ಜನರ ನಂಬಿಕೆ). ಈ ಯುವತಿ ಕೂಟ ಅಕ್ಟೋಬರ್​ 15ರಂದು ಓ ನನ್ನ ಮಕ್ಕಳೇ ಎಂದು ಬೀದಿಯಲ್ಲಿ ತಿರುಗುತ್ತಿರುವುದನ್ನು ನೋಡಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಘಟನೆ ನಡೆದದ್ದು ಅಕ್ಟೋಬರ್​ 15ರಂದು. ಆದರೆ ತಡವಾಗಿ ಬೆಳಕಿಗೆ ಬಂದಿದೆ. ಅಂದು ಕೂಡ ಯುವತಿ ಬಿಳಿಬಣ್ಣದ ನಿಲುವಂಗಿ ಧರಿಸಿ, ಭಯಾನಕವಾಗಿ ಮುಖಕ್ಕೆಲ್ಲ ಬಣ್ಣಬಳಿದುಕೊಂಡು ಕೂಗುತ್ತ ಓಡಾಡುತ್ತಿದ್ದಳು. ಅದನ್ನು ವ್ಯಕ್ತಿಯೊಬ್ಬ ಚಿತ್ರೀಕರಣ ಕೂಡ ಮಾಡಿದ್ದಾನೆ. ಆದರೆ ಅದಾದ ಕೆಲವೇ ಹೊತ್ತಲ್ಲಿ ಶೂಟರ್​ ಆಕೆಯನ್ನು ಗುಂಡುಹೊಡೆದು ಸಾಯಿಸಿದ್ದಾನೆ. ಕೃತ್ಯ ಎಸಗಿದ ಬಳಿಕ ಅವನು ಪರಾರಿಯಾಗಿದ್ದಾನೆ. ಸದ್ಯ ಆ ಯುವತಿ ಯಾರೆಂದೂ ಪೊಲೀಸರಿಗೆ ಗೊತ್ತಾಗುತ್ತಿಲ್ಲ ಮತ್ತು ಗುಂಡು ಹೊಡೆದವನು ಯಾರೆಂದೂ ತಿಳಿಯುತ್ತಿಲ್ಲ ಎನ್ನಲಾಗಿದ್ದು, ಯಾರನ್ನೂ ಇಲ್ಲಿಯವರೆಗೂ ಬಂಧಿಸಿಲ್ಲ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕುಖ್ಯಾತ ರೌಡಿ ಹೆಬ್ಬೆಟ್ ಮಂಜನ ಹೆಸರಿನಲ್ಲಿ ಬೆದರಿಕೆ! ಪೊಲೀಸರ ಬಲೆಗೆ ಬಿದ್ದ ಭಟ್ಕಳ ಮಹಿಳೆ

ಸಿದ್ದರಾಮಯ್ಯನ್ನ ತಾಲಿಬಾನ್ ಪ್ರದೇಶಕ್ಕೆ ಕಳಿಸಬೇಕು: ಕೇಂದ್ರಕ್ಕೆ ಮನವಿ ಮಾಡಿದ ಸಂಸದ ಶ್ರೀನಿವಾಸ್ ಪ್ರಸಾದ್

Published On - 1:02 pm, Sat, 23 October 21