ತೈವಾನ್ ಈಶಾನ್ಯ ಭಾಗದಲ್ಲಿ 6.5ತೀವ್ರತೆಯ ಭೂಕಂಪ; 10 ಸೆಕೆಂಡ್ಗಳ ಕಾಲ ನಡುಗಿದ ಭೂಮಿ
ಭೂ ಕಂಪನದ ಕೇಂದ್ರ ಬಿಂದು ಯಿಲಾನ್ ಕೌಂಟಿಯಿಂದ ದಕ್ಷಿಣಕ್ಕೆ 22.7 ಕಿಮೀ ದೂರದಲ್ಲಿದ್ದು, ಸುಮಾರು 67 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂದು ಅಲ್ಲಿನ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ.
ತೈಪೆ: ಈಶಾನ್ಯ ತೈವಾನ್ನಲ್ಲಿ ಇಂದು ಪ್ರಬಲ ಭೂಕಂಪ ಉಂಟಾಗಿದೆ. ರಾಜಧಾನಿ ತೈಪೆಯಲ್ಲೂ ಸಹ ಇದರ ಪರಿಣಾಮ ಉಂಟಾಗಿದ್ದು, ಭೂಮಿ ಬಲವಾಗಿ ನಡುಗಿದೆ ಎಂದು ವರದಿಯಾಗಿದೆ. ಭೂಕಂಪದ ತೀವ್ರತೆ 6.5ರಷ್ಟಿತ್ತು ಎಂದು ತೈವಾನ್ನ ಕೇಂದ್ರೀಯ ಹವಾಮಾನ ಬ್ಯೂರೋ ವರದಿ ನೀಡಿದ್ದು, ಯುಎಸ್ನ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಇಲ್ಲಿ 6.2ರಷ್ಟು ತೀವ್ರತೆಯಲ್ಲಿ ಭೂಮಿ ನಡುಗಿದೆ. ಆದರೆ ಯಾವುದೇ ಆಸ್ತಿಪಾಸ್ತಿ ಹಾನಿ, ಜೀವ ಹೋದ ಬಗ್ಗೆ ವರದಿಯಾಗಿಲ್ಲ.
ಭೂ ಕಂಪನದ ಕೇಂದ್ರ ಬಿಂದು ಯಿಲಾನ್ ಕೌಂಟಿಯಿಂದ ದಕ್ಷಿಣಕ್ಕೆ 22.7 ಕಿಮೀ ದೂರದಲ್ಲಿದ್ದು, ಸುಮಾರು 67 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂದು ಅಲ್ಲಿನ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ಸುಮಾರು 10 ಸೆಕೆಂಡ್ಗಳ ಕಾಲ ಪ್ರಬಲವಾಗಿಯೇ ಭೂಮಿ ನಡುಗಿದೆ ಎಂದು ಹೇಳಲಾಗಿದೆ. ಇನ್ನು ತೈವಾನ್ನಲ್ಲಿ ಪದೇಪದೆ ಭೂಕಂಪನವಾಗುತ್ತಿದೆ. ಈ ದ್ವೀಪವು ಎರಡು ಟೆಕ್ಟೋನಿಕ್ ಪ್ಲೇಟ್ಗಳ ನಡುವೆ ಇರುವುದೇ ಹೀಗೆ ಪದೇಪದೆ ಭೂಕಂಪವಾಗಲು ಕಾರಣ ಎಂದು ಹೇಳಲಾಗಿದೆ. ಇಷ್ಟು ಗಟ್ಟಿ ಪ್ರಮಾಣದಲ್ಲಿ ಭೂಕಂಪನವಾದಾಗ ಸಹಜವಾಗಿಯೇ ಸಾವು, ಅಪಾರ ಹಾನಿ ಸಂಭವಿಸುತ್ತದೆ ಎಂದು ಹೇಳಲಾದರೂ, ಯಾವ ಪ್ರದೇಶದಲ್ಲಿ, ಎಷ್ಟು ಆಳದಲ್ಲಿ ಭೂಮಿ ನಡುಗಿದೆ ಎಂಬುದರ ಮೇಲೆಯೂ ಅದರ ಹಾನಿ, ಸಾವಿನ ಪ್ರಮಾಣ ಇರುತ್ತದೆ. ಇದೇ ತೈವಾನ್ನಲ್ಲಿ 1999ರಲ್ಲಿ 7.6 ತೀವ್ರತೆಯ ಭೂಕಂಪನ ಉಂಟಾಗಿತ್ತು. ಅದರಲ್ಲಿ 2400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.
ಇದನ್ನೂ ಓದಿ: ಜೈಲಲ್ಲಿ ರಾಮ-ಸೀತೆಯ ಪುಸ್ತಕ ಓದುತ್ತಿರುವ ಆರ್ಯನ್ ಖಾನ್; ಜಾಮೀನು ಸಿಗದೇ ಸ್ಟಾರ್ ಪುತ್ರ ಕಂಗಾಲು
Snehith: ಹಲ್ಲೆ ಆರೋಪ; ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲು