ನಿರ್ದೇಶಕ, ಪರಿಸರವಾದಿ ಸ್ಟೀವನ್ ಸ್ಪೀಲ್ಬರ್ಗ್ ತಮ್ಮ ವಿಮಾನದಲ್ಲಿ ಹಾರಾಟ ನಡೆಸಿ 2 ತಿಂಗಳಲ್ಲಿ 179 ಟನ್ ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿಯಾಗಲು ಕಾರಣರಾಗಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 23, 2022 | 8:11 AM

2018ರಲ್ಲಿ ಅವರ ‘ರೆಡಿ ಪ್ಲೇಯರ್ ವನ್’ ಚಿತ್ರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತಾಡುವಾಗ ಅವರು ಜಾಗತಿಕ ತಾಪಮಾನ ತನ್ನಲ್ಲಿ ಹೆದರಿಕೆ ಹುಟ್ಟಿಸಿದೆ ಎಂದು ಹೇಳಿ ಪರಿಸರ ಸಮತೋಲನದ ಬಗ್ಗೆ ಒಂದಿಷ್ಟೂ ಕಾಳಜಿಯಿಟ್ಟುಕೊಳ್ಳದೆ ಅದರೊಂದಿಗೆ ಚೆಲ್ಲಾಟವಾಡುವ ಜನರ ವಿರುದ್ಧ ಬೆಂಕಿಯುಗುಳಿದ್ದರು.

ನಿರ್ದೇಶಕ, ಪರಿಸರವಾದಿ ಸ್ಟೀವನ್ ಸ್ಪೀಲ್ಬರ್ಗ್ ತಮ್ಮ ವಿಮಾನದಲ್ಲಿ ಹಾರಾಟ ನಡೆಸಿ 2 ತಿಂಗಳಲ್ಲಿ 179 ಟನ್ ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿಯಾಗಲು ಕಾರಣರಾಗಿದ್ದಾರೆ!
ಸ್ಟೀವನ್ ಸ್ಪೀಲ್ಬರ್ಗ್ ಮತ್ತು ಅವರ ಖಾಸಗಿ ವಿಮಾನ
Follow us on

ಫಾಕ್ಸ್ ನ್ಯೂಸ್ ವರದಿಯೊಂದರ ಪ್ರಕಾರ ವಿಖ್ಯಾತ ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ (Steven Spielberg) ಕಳೆದೆರಡು ತಿಂಗಳ ಅವಧಿಯಲ್ಲಿ ತಮ್ಮ ಖಾಸಗಿ ವಿಮಾನದ ಮೂಲಕ ನಡೆಸಿದ ಹಾರಾಟಗಳಿಗೆ ಸುಮಾರು 92 ಲಕ್ಷ ರೂ.ಗಳ ಇಂಧನ ಬಳಸಿದ್ದಾರಂತೆ! ವೈಮಾನಿಕ ಹಾರಾಟಗಳನ್ನು ಟ್ರ್ಯಾಕ್ ಮಾಡುವ ಎಡಿಎಸ್-ಬಿ ಎಕ್ಸ್ಚೇಂಜ್ ಡಾಟಾಬೇಸ್ ಒದಗಿಸಿದ ಮಾಹಿತಿಯನ್ನಾಧರಿಸಿ ಫಾಕ್ಸ್ ನ್ಯೂಸ್ ಈ ಸಂಗತಿಯನ್ನು ವರದಿ ಮಾಡಿದೆ. ಗಲ್ಫ್ ಸ್ಟ್ರೀಮ್ ಜಿ650 ವಿಮಾನವನ್ನು ಬಳಸುವ ಸ್ಪೀಲ್ಬರ್ಗ್ ಜೂನ್ 23 ರಿಂದ 16 ಬಾರಿ ಪ್ರಯಾಣ ಮಾಡಿದ್ದು ಈ ಅವಧಿಯಲ್ಲಿ 17,000 ಕ್ಕಿಂತ ಹೆಚ್ಚು ಮೈಲಿಗಳಷ್ಟು ಸುತ್ತಾಡಿದ್ದಾರೆ. ಸೆಲಿಬ್ರಿಟಿ ಜೆಟ್ಸ್ ಕ್ರೋಢೀಕರಿಸಿರುವ ಹಾರಾಟಗಳ ವಿವರಗಳಲ್ಲಿ ಸ್ಪೀಲ್ಬರ್ಗ್ ಅವರ ಇನ್ನೂ ಮೂರು ಟ್ರಿಪ್ ಗಳ ಮಾಹಿತಿ ಸೇರಿಸಿಲ್ಲವಂತೆ.

ಅವರ ಮಾಡಿದ ಪ್ರಯಾಣಗಳ ಬಗ್ಗೆ ಚರ್ಚೆಯಾಗುತ್ತಿರುವುದಕ್ಕೆ ಕಾರಣವಿದೆ. ಅದೇನೆಂದರೆ ನೇರ ಮತ್ತು ನಿಷ್ಠುರ ಸ್ವಭಾವದ ಸ್ಪೀಲ್ಬರ್ಗ್ ಒಬ್ಬ ಪರಿಸರವಾದಿ ಅಂತ ಎಲ್ಲರಿಗೂ ಗೊತ್ತಿದೆ. 2018ರಲ್ಲಿ ಅವರ ‘ರೆಡಿ ಪ್ಲೇಯರ್ ವನ್’ ಚಿತ್ರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತಾಡುವಾಗ ಅವರು ಜಾಗತಿಕ ತಾಪಮಾನ ತನ್ನಲ್ಲಿ ಹೆದರಿಕೆ ಹುಟ್ಟಿಸಿದೆ ಎಂದು ಹೇಳಿ ಪರಿಸರ ಸಮತೋಲನದ ಬಗ್ಗೆ ಒಂದಿಷ್ಟೂ ಕಾಳಜಿಯಿಟ್ಟುಕೊಳ್ಳದೆ ಅದರೊಂದಿಗೆ ಚೆಲ್ಲಾಟವಾಡುವ ಜನರ ವಿರುದ್ಧ ಬೆಂಕಿಯುಗುಳಿದ್ದರು.

ಹವಾಮಾನ ವೈಪರೀತ್ಯಗಳಿಗೆ ಜಗತ್ತಿನಲ್ಲಿ ವಾಸವಾಗಿರುವ ಪ್ರತಿಯೊಬ್ಬನನ್ನು ಹೊಣೆಗಾರರಾಗಿಸಬೇಕು ಅಂತಲೂ ಅವರು ಹೇಳಿದ್ದರು.

ಸೆಲಿಬ್ರಿಟಿ ಜೆಟ್ಸ್ ನೀಡಿರುವ ಮಾಹಿತಿ ಪ್ರಕಾರ ಸ್ಪೀಲ್ಬರ್ಗ್ ಜೂನ್ 29 ರಂದು ನ್ಯೂ ಯಾರ್ಕ್ ವೆಸ್ಟಾಂಪ್ಟನ್ ನಿಂದ 3589 ಮೈಲಿ ದೂರದ ನೆದರ್ಲ್ಯಾಂಡ್ಸ್ ರಾಜಧಾನಿ ಆಮ್ ಸ್ಟರ್ ಡ್ಯಾಮ್ ಗೆ ಪ್ರಯಾಣಿಸಿ, ಸುಮಾರು 17 ಲಕ್ಷ ರೂ. ಮೌಲ್ಯದ ಇಂಧನ ಸುಟ್ಟು 32 ಟನ್ಗಳಷ್ಟು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿಯಾಗಲು ಕಾರಣರಾಗಿದ್ದಾರೆ.

ಆಮೇಲೆ ಅವರು ನೆದರ್ಲ್ಯಾಂಡ್ಸ್ ನಲ್ಲಿ ಸುತ್ತಾಡಿದ ವಿವರಗಳನ್ನು ಸಹ ಸೆಲಿಬ್ರಿಟಿ ಜೆಟ್ಸ್ ನೀಡಿದ್ದು ಈ ಸುತ್ತಾಟಗಳಲ್ಲಿ 20 ಲಕ್ಷ ರೂ.ಗಳ ಇಂಧನ ವ್ಯಯಿಸಿ 38 ಟನ್ ಗಳಷ್ಟು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿಗೆ ಕಾರಣರಾಗಿದ್ದಾರೆ.

ಫಾಕ್ಸ್ ನ್ಯೂಸ್ ವರದಿಯ ಪ್ರಕಾರ ಎರಡು ತಿಂಗಳ ಅವಧಿಯಲ್ಲಿ ನಿರ್ದೇಶಕರ ಖಾಸಗಿ ವಿಮಾನ 179 ಟನ್ ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ ಮಾಡಿದೆ.

ಈ ತಿಂಗಳಾರಂಭದಲ್ಲಿ ಯುಕೆ ಮೂಲದ ಯಾರ್ಡ್ ಹೆಸರಿನ ಮಾರ್ಕೆಟಿಂಗ್ ಸಂಸ್ಥೆಯು ಸ್ಪೀಲ್ಬರ್ಗ್ ಸೇರಿದಂತೆ ಕೆಲ ಸೆಲಿಬ್ರಿಟಿಗಳನ್ನು ಖಾಸಗಿ ಜೆಟ್ ಗಳಲ್ಲಿ ಹಾರಾಟ ನಡೆಸುವುದಕ್ಕೆ ಆಮಂತ್ರಿಸಿತ್ತು. ಈ ಪಟ್ಟಿಯಲ್ಲಿದ್ದ ಇತರ ಸೆಲಿಬ್ರಿಟಿಗಳೆಂದರೆ ಟೇಲರ್ ಸ್ವಿಫ್ಟ್ ಮತ್ತು ಓಪ್ರಾ ವಿನ್ಫ್ರೀ ಎಂದು ನ್ಯೂಸ್ ವೀಕ್ ವರದಿ ಮಾಡಿದೆ.

ಆದರೆ ಪ್ರಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಪ್ರತಿನಿಧಿ ರೋಲಿಂಗ್ ಸ್ಟೋನ್ ಗೆ ನೀಡಿರುವ ಮಾಹಿತಿಯ ಪ್ರಕಾರ, ‘ಟೇಲರ್ ಅವರ ಖಾಸಗಿ ಜೆಟ್ ನಿಯಮಿತವಾಗಿ ಬೇರೆಯವರಿಗೆ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿದೆ. ಅವರು ಹಲವಾರು ಬಾರಿ ತಮ್ಮ ಜೆಟ್ ನಲ್ಲಿ ಪ್ರಯಾಣಿಸಿದ್ದಾರೆ ಅಂತ ಹೇಳುವುದು ಸರಿಯಲ್ಲ’ ಎಂದಿದ್ದಾರೆ.