ವೈರಲ್ ಆಗಿರುವ ವಿಡಿಯೋದಲ್ಲಿ ಆರೋಪಿಯನ್ನು ಥಳಿಸುತ್ತಿರುವ ಅರ್ಕನಾಸ್ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ: ಶರೀಫ್, ಕ್ರಾಫೋರ್ಡ್ ಕೌಂಟಿ
ರವಿವಾರದಂದು ಸ್ಥಳೀಯ ಸಮಯ 10:40 ಕ್ಕೆ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ಪ್ರಾರಂಭಿಸಿರುವುದನ್ನು ಅರ್ಕನಾಸ್ ರಾಜ್ಯ ಪೊಲೀಸ್ ಖಚಿತಪಡಿಸಿದೆ. ರಾಜ್ಯ ಪೊಲೀಸ 27-ವರ್ಷ-ವಯಸ್ಸಿನ ಶಂಕಿತನ ಗುರುತು ಪತ್ತೆ ಮಾಡಿದ್ದು ಸೌತ್ ಕೆರೊಲಿನಾ ನಿವಾಸಿಯಾಗುರುವ ಅವನ ಹೆಸರು ಱಂಡಲ್ ವೋರ್ಸೆಸ್ಟರ್ ಅಲಿಯಾಸ್ ಗೂಸ್ ಕ್ರೀಕ್ ಆಗಿದೆ.
ಒಬ್ಬ ಪೊಲೀಸ ಅಧಿಕಾರಿ ಮತ್ತು ಅವರ ಇಬ್ಬರು ಸಹಾಯಕರು (deputies) ತಮ್ಮ ವಶದಲ್ಲಿದ್ದ ಶಂಕಿತನೊಬ್ಬನನ್ನು ಮನಬಂದಂತೆ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನೆಟ್ಟಿಗರಿಂದ ತೀವ್ರಸ್ವರೂಪ ಖಂಡನೆ ಎದುರಾದ ಬಳಿಕ ಹಲ್ಲೆ ನಡೆಸಿದ ಅಮೆರಿಕದ ಅರ್ಕನಾಸ್ ನ (Arkansas) ಇಬ್ಬರು ಸಹಾಯಕ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಲಿದೆ.
ಕ್ರಾಫೋರ್ಡ್ ಕೌಂಟಿ ಶರೀಫ್ ಜಿಮ್ಮಿ ದಮಾಂಟೆ ರವಿವಾರದಂದು ಬಿಡುಗಡೆ ಮಾಡಿರುವ ಹೇಳಿಕೆಯೊಂದರ ಪ್ರಕಾರ ಪ್ರಕರಣದ ತನಿಖೆಯನ್ನು ಅರ್ಕನಾಸ್ ಸ್ಟೇಟ್ಪೊಲೀಸರು ಮತ್ತು ಶರೀಫ್ ಕಚೇರಿಯ ಆಂತರಿಕ ತನಿಖೆ ನಡೆಸುವಾಗ ಕೌಂಟಿಯ ಇಬ್ಬರು ಡೆಪ್ಯುಟಿಗಳನ್ನು ಸಸ್ಪೆಂಡ್ ಮಾಡಲಾಗುವುದು.
‘ನನ್ನ ಕಚೇರಿಯ ಎಲ್ಲ ಉದ್ಯೋಗಿಗಳು ತಾವು ನಡೆಸುವ ಕೃತ್ಯಗಳಿಗೆ ಹೊಣೆಗಾರರು ಎಂದು ನಾನು ಪರಿಗಣಿಸುತ್ತೇನೆ, ಮತ್ತು ಸದರಿ ಪ್ರಕರಣದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುದು,’ ಎಂದು ದಮಾಂಟೆ ಹೇಳಿದ್ದಾರೆ.
#BREAKING: Arkansas State Police launch investigation into this incident, captured on camera, outside a convenience store in Crawford County. ASP says two county deputies and a Mulberry police officer were involved. #ARNews
**WARNING: GRAPHIC VIDEO / No audio** pic.twitter.com/dYE0htfAsf
— Mitchell McCoy (@MitchellMcCoy) August 21, 2022
ಮಲ್ಬರಿ ಪೊಲೀಸ ಮುಖ್ಯಸ್ಥ ಶ್ಯಾನನ್ ಗ್ರೆಗರಿ ಸಹ ರವಿವಾರದಂದೇ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ತಮ್ಮ ಇಲಾಖೆಯ ಒಬ್ಬ ಸಿಬ್ಬಂದಿ ವಿಡಿಯೋ ಕಾಣಿಸಿದ್ದು ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ರಜೆ ಮೇಲೆ ಕಳಿಸಲಾಗಿದೆ ಎಂದಿದ್ದಾರೆ.
ವಿಡಿಯೋದಲ್ಲಿನ ಮೂವರು ಪೊಲೀಸ್ ಅಧಿಕಾರಿಗಳು ತಮ್ಮ ವಶದಲ್ಲಿರುವ ಒಬ್ಬ ಆರೋಪಿಯನ್ನು ನೆಲದ ಮೇಲೆ ಬೀಳಿಸಿ ಮನಬಂದಣತೆ ಹೊಡೆಯುವುದು ಒದೆಯುವುದು ಕಾಣಿಸುತ್ತದೆ. ಒಬ್ಬ ಅಧಿಕಾರಿಯು ಆರೋಪಿಯ ತಲೆ ಮಲೆ ಬಲವಾಗಿ ಹಲವಾರು ಬಾರಿ ಗುದ್ದುತ್ತಿರುವುದು ಮತ್ತು ಇನ್ನೊಬ್ಬ ಅಧಿಕಾರಿ ಶಂಕಿತ ದೇಹದ ಮೇಲೆ ಮೊಣಕಾಲೂರಿರುವುದು, ಮತ್ತೊಬ್ಬ ಒದೆಯುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ರವಿವಾರದಂದು ಸ್ಥಳೀಯ ಸಮಯ 10:40 ಕ್ಕೆ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ಪ್ರಾರಂಭಿಸಿರುವುದನ್ನು ಅರ್ಕನಾಸ್ ರಾಜ್ಯ ಪೊಲೀಸ್ ಖಚಿತಪಡಿಸಿದೆ. ರಾಜ್ಯ ಪೊಲೀಸ 27-ವರ್ಷ-ವಯಸ್ಸಿನ ಶಂಕಿತನ ಗುರುತು ಪತ್ತೆ ಮಾಡಿದ್ದು ಸೌತ್ ಕೆರೊಲಿನಾ ನಿವಾಸಿಯಾಗುರುವ ಅವನ ಹೆಸರು ಱಂಡಲ್ ವೋರ್ಸೆಸ್ಟರ್ ಅಲಿಯಾಸ್ ಗೂಸ್ ಕ್ರೀಕ್ ಆಗಿದೆ.
ಪೊಲೀಸರ ವರದಿ ಪ್ರಕಾರ ರವಿವಾರ ಬೆಳಗ್ಗೆ ಒಬ್ಬ ವ್ಯಕ್ತಿ ಮಲ್ಬರಿಯಲ್ಲಿರುವ ಸ್ಟೋರ್ ಒಂದರ ಉದ್ಯೋಗಿಗೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದ. ಮಲ್ಬರಿಯು ಲಿಟ್ಲ್ ರಾಕ್ ನ ಆಗ್ನೇಯ ಭಾಗಕ್ಕೆ ಸುಮಾರು 137 ಮೈಲಿ (220 ಕಿಮೀ) ದೂರದಲ್ಲಿದೆ.
ಪೊಲೀಸ್ ವರದಿಯ ಪ್ರಕಾರ ಆ ವ್ಯಕ್ತಿಯನ್ನು ವಿಚಾರಿಸಲು ಅಧಿಕಾರಿಗಳು ಮುಂದಾದಾಗ ಅವನು ಒಬ್ಬ ಡೆಪ್ಯೂಟಿಯನ್ನು ನೆಲಕ್ಕೆ ತಳ್ಳಿ ತಲೆಗೆ ಬಲವಾಗಿ ಹೊಡೆದ ಬಳಿಕವೇ ಅವನನ್ನು ವಶಕ್ಕೆ ಪಡೆಯುವುದಕ್ಕೆ ಮುಂದಾಗುತ್ತಾರೆ. ಇದು ವಿಡಿಯೋನಲ್ಲಿ ಸೆರೆಯಾಗಿದೆ. ಅವನನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಅಲ್ಲಿಂದ ಬಿಡುಗಡೆ ಮಾಡಿಸಿಕೊಂಡು ಜೈಲಿಗೆ ತೆಗೆದುಕೊಂಡು ಹೋಗಲಾಗಿದೆ.
ವೊರ್ಸೆಸ್ಟರ್ ವಿರುದ್ಧ ಎರಡನೇ ಹಂತದ ಹಿಂಸಾ ಪ್ರವೃತ್ತಿ, ಬಂಧನಕ್ಕೆ ವಿರೋಧ, ಶರಣಾಗಲು ಪ್ರತಿಭಟನೆ, ಅಪರಾದ ಕೃತ್ಯಗಳಿಗೆ ಬಳಸುವ ಸಾಧನ ಹೊಂದಿದ್ದು, ಭಯೋತ್ಪಾದಕರಂತೆ ಬೆದರಿಕೆ ಹಾಕಿದ್ದು, ಎರಡನೇ ಹಂತದ ಹಲ್ಲೆ ಮೊದಲಾದ ಆರೋಪಗಳನ್ನು ಹೊರಿಸಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಪೊಲೀಸ್ ಅಧಿಕಾರಿಗಳ ಗುರುತನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡಿಲ್ಲ.