ಅಮೆರಿಕದಲ್ಲಿ ಉಬರ್​ ಚಾಲಕನಾಗಿರುವ ಅಫ್ಘಾನ್ ಮಾಜಿ ಹಣಕಾಸು ಸಚಿವ; ಜೀವನೋಪಾಯಕ್ಕಾಗಿ ಈ ಕೆಲಸ

| Updated By: Lakshmi Hegde

Updated on: Mar 21, 2022 | 12:19 PM

ಹಾಗಿದ್ದಾಗ್ಯೂ ಸಣ್ಣ ಬೇಸರ ಇದ್ದೇ ಇದೆ. ನನಗೆ ನನ್ನದೇ ಆದ ಜಾಗವಿಲ್ಲ. ನಾನು ಅಮೆರಿಕದವನಲ್ಲ. ಅಫ್ಘಾನಿಸ್ತಾನಕ್ಕೆ ಸೇರಿದವನೂ ಅಲ್ಲ. ಹೀಗಾಗಿ ಖಾಲಿತನ ಭಾವನೆ ಹುಟ್ಟುತ್ತದೆ ಎಂದು ಖಲೀದ್ ಹೇಳಿದ್ದಾರೆ.

ಅಮೆರಿಕದಲ್ಲಿ ಉಬರ್​ ಚಾಲಕನಾಗಿರುವ ಅಫ್ಘಾನ್ ಮಾಜಿ ಹಣಕಾಸು ಸಚಿವ; ಜೀವನೋಪಾಯಕ್ಕಾಗಿ ಈ ಕೆಲಸ
ಖಾಲಿದ್​ ಪಾಯೆಂಡಾ
Follow us on

ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ಅಫ್ಘಾನಿಸ್ತಾನ ತಾಲಿಬಾನ್ ​ ಉಗ್ರರ ಕೈವಶವಾಗಿದೆ. ಅದಕ್ಕೂ ಮೊದಲು ಅಲ್ಲಿದ್ದ ಸರ್ಕಾರ ಪತನಗೊಂಡು ಅಫ್ಘಾನ್​ ಅಧ್ಯಕ್ಷ ಸೇರಿ ಪ್ರಮುಖ ನಾಯಕರು, ಸರ್ಕಾರಿ ಹುದ್ದೆಗಳಲ್ಲಿದ್ದವರು, ಕೇಂದ್ರದ ಸಚಿವರು ಸೇರಿ ಬಹುತೇಕ ಎಲ್ಲರೂ ಅಫ್ಘಾನ್​ ಬಿಟ್ಟು ಬೇರೆಬೇರೆ ದೇಶಗಳಿಗೆ ಹೋಗಿ ಆಶ್ರಯ ಪಡೆದಿದ್ದಾರೆ. ಹಾಗೇ ಹೋದವರು ತಮ್ಮ ಜೀವನೋಪಾಯಕ್ಕಾಗಿ ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೀಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೂ ಮೊದಲಿದ್ದ ಅಶ್ರಫ್​ ಘನಿ  ಸರ್ಕಾರದಲ್ಲಿಆರ್ಥಿಕ ಇಲಾಖೆ ಸಚಿವರಾಗಿದ್ದ ಖಲೀದ್ ಪಾಯೆಂಡಾ ಈಗ ವಾಷಿಂಗ್ಟನ್​ ಡಿಸಿಯಲ್ಲಿ ಉಬರ್​​ ಓಡಿಸುತ್ತಿದ್ದಾರೆ. ಅಫ್ಘಾನ್​​ನಲ್ಲಿ ತಾಲಿಬಾನ್​ ಉಗ್ರರ ಆಡಳಿತ ಬರುತ್ತಿದ್ದಂತೆ ರಾಜೀನಾಮೆ ನೀಡಿದ ಅವರು ಕುಟುಂಬದೊಂದಿಗೆ ವಾಷಿಂಗ್ಟನ್​ ಡಿಸಿಗೆ ತೆರಳಿದ್ದರು. ಈಗ ಜೀವನೋಪಾಯಕ್ಕಾಗಿ ಉಬರ್​ ವಾಹನ  ಓಡಿಸಿ ಹಣಗಳಿಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಜಾರ್ಜ್​ಟೌನ್​ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಖಲೀದ್ ಪಾಯೆಂಡಾ ಅಫ್ಘಾನ್​​ನಿಂದ ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ಯುಎಸ್​ಗೆ ಪರಾರಿಯಾಗಿದ್ದರು.ಸುಮ್ಮನೆ ಕುಳಿತರೆ ಕೂಡಿಟ್ಟ ಹಣ ಎಷ್ಟು ದಿನ ಬರುತ್ತದೆ. ಕೆಲಸ ಹುಡುಕಲು ಪ್ರಾರಂಭಿಸಿದರು. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದರೂ ಕೂಡ ಅದು ಪರ್ಮನೆಂಟ್​ ಕೆಲಸವಲ್ಲ. ಬರೀ ಅದೊಂದೇ ಕೆಲಸಕ್ಕೆ ನೀಡುವ ಸಂಬಳವೂ ಸಾಕಾಗುವುದಿಲ್ಲ. ಹೀಗಾಗಿ ಉಬರ್​ ಚಾಲನೆ ಕೆಲಸವನ್ನೂ ಶುರು ಮಾಡಿದರು. ಈ ಬಗ್ಗೆ ನನಗೆ ಸ್ವಲ್ಪವೂ ಬೇಸರವಿಲ್ಲ. ಇಷ್ಟಾದರೂ ಕೆಲಸ ಸಿಕ್ಕಿ, ಜೀವನೋಪಾಯಕ್ಕೆ ಅನುಕೂಲವಾಯಿತಲ್ಲ. ನಾನಿನ್ನು ಹತಾಶನಾಗಬೇಕಿಲ್ಲ ಎಂದು ಹೇಳಿಕೊಂಡಿದ್ದಾಗಿ  ವಾಷಿಂಗ್ಟನ್​ ಪೋಸ್ಟ್​ ವರದಿ ಮಾಡಿದೆ.

ಹಾಗಿದ್ದಾಗ್ಯೂ ಸಣ್ಣ ಬೇಸರ ಇದ್ದೇ ಇದೆ. ನನಗೆ ನನ್ನದೇ ಆದ ಜಾಗವಿಲ್ಲ. ನಾನು ಅಮೆರಿಕದವನಲ್ಲ. ಅಫ್ಘಾನಿಸ್ತಾನಕ್ಕೆ ಸೇರಿದವನೂ ಅಲ್ಲ. ಹೀಗಾಗಿ ಖಾಲಿತನ ಭಾವನೆ ಹುಟ್ಟುತ್ತದೆ. ಹಾಗಂತ ಯಾರನ್ನೂ ದೂಷಿಸಲು ಸಾಧ್ಯವಿಲ್ಲ. ಈ ಪರಿಸ್ಥಿತಿಗಾಗಿ ನಾನು ನನ್ನನ್ನೂ ದ್ವೇಷ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಅವರು ಅಮೆರಿಕದ ಬಗ್ಗೆಯೂ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನವನ್ನು ಯುಎಸ್​ ಕೈಬಿಟ್ಟಿದ್ದರಿಂದಲೇ ತಾಲಿಬಾನಿಗಳು ವಶಪಡಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದ್ದಾರೆ ಎಂದೂ ವಾಷಿಂಗ್ಟನ್​ ಪೋಸ್ಟ್ ಹೇಳಿದೆ.

ಇದನ್ನೂ ಓದಿ:  Viral Video: ರಾತ್ರಿ ಅಡುಗೆ ಮನೆಗೆ ಕಳ್ಳ ಬಂದಿರಬಹುದೆಂದು ನೋಡಿದ ಮಹಿಳೆಗೆ ಸಿಕ್ಕಿದ್ದು ಬೃಹತ್​ ಹೆಬ್ಬಾವು

Published On - 11:45 am, Mon, 21 March 22