ಅಫ್ಘಾನಿಸ್ತಾನ ದೇಶವನ್ನು ತಾಲಿಬಾನ್ ಉಗ್ರರು ಆಕ್ರಮಿಸಿಕೊಳ್ಳುತ್ತಿದ್ದಂತೆಯೇ ಅಲ್ಲಿಂದ ಜಾಗ ಖಾಲಿ ಮಾಡಿದ್ದ ಆಫ್ಘನ್ ಉಗ್ರರು ಯುದ್ಧೋಪಕರಣಗಳನ್ನು ಇರಾನ್‌ಗೆ ತಂದಿಟ್ಟಿದ್ದರು. ಆದರೆ, ಈಗ ಇರಾನ್ ಆ ಎಲ್ಲಾ ಯುದ್ಧೋಪಕರಣಗಳನ್ನು, ಶಸ್ತ್ರಾಸ್ತ್ರಗಳನ್ನು ತಾಲಿಬಾನ್‌ಗೆ ಹಿಂತಿರುಗಿಸಿದೆ. ಆ ಮೂಲಕ ಆಫ್ಘನ್ ಸೈನಿಕರು ಪರಾರಿಯಾಗುವ ವೇಳೆ ಇರಾನ್‌ಗೆ ತಂದು ಇಟ್ಟಿದ್ದ ಶಸ್ತ್ರಾಸ್ತ್ರ, ಅಮೆರಿಕ ನಿರ್ಮಿತ ಯುದ್ಧೋಪಕರಣಗಳು ಮರಳಿ ತಾಲಿಬಾನಿಗಳ ಕೈ ಸೇರಿವೆ.
ಇನ್ನೊಂದೆಡೆ, ದಕ್ಷಿಣ ಪ್ರಾಂತ್ಯದ ಕಂದಹಾರ್ ನಲ್ಲಿ ನಡೆದ ಮೆರವಣಿಗೆಯಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಾಗ ವಶಪಡಿಸಿದ ಮಿಲಿಟರಿ ಸಾಮಾಗ್ರಿಗಳನ್ನು ತಾಲಿಬಾನ್ ಪ್ರದರ್ಶಿಸಿದೆ . ತಾಲಿಬಾನ್ ಹೋರಾಟಗಾರರು ಪಿಕಪ್ ಟ್ರಕ್‌ಗಳ ಮೇಲೆ ಕುಳಿತು, ಉಗ್ರಗಾಮಿ ಗುಂಪಿನ ಬಿಳಿ ಮತ್ತು ಕಪ್ಪು ಧ್ವಜವನ್ನು ಹಾರಿಸುತ್ತಿರುವುದು ಮತ್ತು ಶಸ್ತ್ರಸಜ್ಜಿತ ವಾಹನಗಳ ಬೆಂಗಾವಲುಗಳನ್ನು ಬೀದಿಗಳಲ್ಲಿ ಓಡಿಸುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ಅಮೆರಿಕ ಪಡೆಗಳು ಮತ್ತು ಅದರ ನ್ಯಾಟೋ ಮಿತ್ರರಾಷ್ಟ್ರಗಳು ದೇಶದಿಂದ ಹೊರಬಂದ ನಂತರ ಅಫ್ಘಾನಿಸ್ತಾನದಾದ್ಯಂತ ಆಚರಣೆಗಳು ನಡೆಯುತ್ತಿವೆ. ತಾಲಿಬಾನ್ ಬೆಂಬಲಿಗರು ಮಂಗಳವಾರ ಅಮೆರಿಕದ ಮತ್ತು ನ್ಯಾಟೋ ಧ್ವಜಗಳನ್ನು ಹೊದಿಸಿದ ಶವಪೆಟ್ಟಿಗೆಯನ್ನು ಕಂದಹಾರ್ ನಗರ ಖೋಸ್ಟ್‌ನಲ್ಲಿ ಮೆರವಣಿಗೆ ಮಾಡಿದರು. ಫ್ರೆಂಚ್ ಮತ್ತು ಬ್ರಿಟಿಷ್ ಧ್ವಜಗಳಲ್ಲಿ ಮುಚ್ಚಿದ ಶವಪೆಟ್ಟಿಗೆಯನ್ನು ಬೀದಿಯಲ್ಲಿ ದೊಡ್ಡ ಜನಸಮೂಹದ ಮೂಲಕ ಒಯ್ದು ಅಣಕು ಶವಸಂಸ್ಕಾರ ನಡೆಸಿದ್ದಾರೆ.
Large Taliban military convoy in #Kandahar
Victory celebrations continue after the withdrawal of US troops. A military parade and a large public gathering were held in Kandahar today pic.twitter.com/4PUOEUhGE7— Afghanistan 24/7 (@AfghanUpdates) September 1, 2021
ದೇಶದ ಇತರ ಬೆಳವಣಿಗೆಗಳು
ಇದನ್ನೂ ಓದಿ:
ಲೈಂಗಿಕ ಕಾರ್ಯಕರ್ತೆಯರನ್ನು ಹುಡುಕುತ್ತಿರುವ ತಾಲಿಬಾನ್ ಉಗ್ರರು; ಜೀವ ತೆಗೆಯಲು ಸಿದ್ಧತೆ