AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನ್​ನ ಜಲಾಲಾಬಾದ್​ ಸರಣಿ ಸ್ಫೋಟದಲ್ಲಿ 35 ತಾಲಿಬಾನಿಗಳು ಸಾವು; ದಾಳಿಯ ಹೊಣೆ ಹೊತ್ತ ಐಎಸ್​ ಸಂಘಟನೆ

ಈ ಹಿಂದೆ ಅಫ್ಘಾನಿಸ್ತಾನ ಸರ್ಕಾರವಿದ್ದಾಗ ನಂಗರ್​ಹಾರ್​ ಮತ್ತು ಕುನಾರ್​ ಪ್ರಾಂತ್ಯಗಳಲ್ಲಿ ಅನೇಕ ಜಿಲ್ಲೆಗಳು ಐಎಸ್​ ಉಗ್ರರ ನೆಲೆಗಳಾಗಿದ್ದವು. ಸುಮಾರು ಐದುವರ್ಷಗಳ ಕಾಲ ಆ ಜಿಲ್ಲೆಗಳನ್ನೆಲ್ಲ ಸಂಪೂರ್ಣವಾಗಿ ಅವರೇ ಆಳಿದ್ದರು.

ಅಫ್ಘಾನ್​ನ ಜಲಾಲಾಬಾದ್​ ಸರಣಿ ಸ್ಫೋಟದಲ್ಲಿ 35 ತಾಲಿಬಾನಿಗಳು ಸಾವು; ದಾಳಿಯ ಹೊಣೆ ಹೊತ್ತ ಐಎಸ್​ ಸಂಘಟನೆ
ಜಲಾಲಾಬಾದ್​ ಚಿತ್ರಣ
TV9 Web
| Edited By: |

Updated on: Sep 20, 2021 | 7:05 PM

Share

ಅಫ್ಘಾನಿಸ್ತಾನದ ಪೂರ್ವನಗರವಾದ ಜಲಾಲಾಬಾದ್​​ನಲ್ಲಿ ನಡೆದ ಬಾಂಬ್​ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್​ ಸ್ಟೇಟ್​ ಹೊತ್ತುಕೊಂಡಿದೆ. ಇದನ್ನು ಗ್ರೂಪ್​​ನ ಅಮಾಕ್​ ನ್ಯೂಸ್​ ಏಜೆನ್ಸಿ ತನ್ನ ಟೆಲಿಗ್ರಾಂ ಚಾನಲ್​​ನಲ್ಲಿ ಹೇಳಿಕೊಂಡಿದೆ. ಜಲಾಲಾಬಾದ್​​ನಲ್ಲಿ ಮೂರು ತಾಲಿಬಾನಿ ವಾಹನಗಳನ್ನು ಗುರಿಯಾಗಿಸಿಕೊಂಡು ಶನಿವಾರ ಮೂರು ಬಾಂಬ್​ ಸ್ಫೋಟಗಳು ನಡೆದಿವೆ. ಮತ್ತೆ ಭಾನುವಾರವೂ ಒಂದು ದಾಳಿ ನಡೆದಿದೆ. ಒಟ್ಟಾರೆ ಈ ಎಲ್ಲ ದಾಳಿಯಿಂದ 35 ತಾಲಿಬಾನ್​ ಉಗ್ರರು ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ತಿಳಿಸಿದೆ. 

ನಂಗರ್​ಹಾರ್​ ಪ್ರಾಂತ್ಯದ ರಾಜಧಾನಿ ಜಲಾಲಾಬಾದ್​ನಲ್ಲಿ ತಾಲಿಬಾನ್​ ಹೋರಾಟಗಾರರನ್ನು ಹೊತ್ತೊಯ್ಯುತ್ತಿದ್ದ ಪಿಕಪ್​ ಟ್ರಕ್​​ವೊಂದರ ಮೇಲೆ ದಾಳಿ ನಡೆದಿದೆ. ಈ ಸ್ಫೋಟದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.  ಇನ್ನು ಜಲಾಲಾಬಾದ್ ಸರಣಿ ಸ್ಫೋಟದಲ್ಲಿ ಮೃತರಾದವರ ಸಂಖ್ಯೆ ಬಗ್ಗೆ ಇನ್ನೂ ತಾಲಿಬಾನ್​ ಉಗ್ರರು ಏನೂ ಹೇಳಿಲ್ಲ. ಅಫ್ಘಾನಿಸ್ತಾನವನ್ನು ಆಗಸ್ಟ್​ 15ರಂದು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಪಾಕಿಸ್ತಾನದ ಗಡಿಭಾಗದಲ್ಲಿರುವ ನಂಗರ್​ಹಾರ್​ ಪ್ರಾಂತ್ಯದಲ್ಲಿ ಮಾತ್ರ ಐಎಸ್​ ಉಗ್ರರಿಂದ ದಾಳಿ ನಡೆಯುತ್ತಿದೆ. ಇವರು ತಾಲಿಬಾನಿಗಳನ್ನು ಟಾರ್ಗೆಟ್​ ಮಾಡಿಯೇ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ, ಈ ಹಿಂದೆ ಅಫ್ಘಾನಿಸ್ತಾನ ಸರ್ಕಾರವಿದ್ದಾಗ ನಂಗರ್​ಹಾರ್​ ಮತ್ತು ಕುನಾರ್​ ಪ್ರಾಂತ್ಯಗಳಲ್ಲಿ ಅನೇಕ ಜಿಲ್ಲೆಗಳು ಐಎಸ್​ ಉಗ್ರರ ನೆಲೆಗಳಾಗಿದ್ದವು. ಸುಮಾರು ಐದುವರ್ಷಗಳ ಕಾಲ ಆ ಜಿಲ್ಲೆಗಳನ್ನೆಲ್ಲ ಸಂಪೂರ್ಣವಾಗಿ ಅವರೇ ಆಳಿದ್ದರು. ಆದರೆ ನಂತರ ಬಂದ ತಾಲಿಬಾನಿಗಳು ಐಎಸ್​  ಹೋರಾಟಗಾರರನ್ನು ಹೊರಗೆ ಹಾಕಿದ್ದರು. ಇದೇ ಕಾರಣಕ್ಕೆ ಈಗ ಅವರು ದಾಳಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಜಿಎಸ್​ಟಿ, ಆಧಾರ್ ಯೋಜನೆ ಬಂದಿದ್ದೇ ಮನಮೋಹನ್​ ಸಿಂಗ್​ ಅವಧಿಯಲ್ಲಿ; ಸಿಎಂಗೆ ಹೆಚ್​ಡಿ ಕುಮಾರಸ್ವಾಮಿ ತಿರುಗೇಟು

ಬೀದರನ ಗುರು ನಾನಕ್ ಜೀರಾ ಸಾಹಿಬ್ ಅಮೃತಸರ್​ನಲ್ಲಿರುವ ಸ್ವರ್ಣಮಂದಿರಕ್ಕೆ ಪರ್ಯಾಯ ಎನಿಸಿಕೊಂಡಿದೆ

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ