ಕಾಬೂಲ್: ಅಫ್ಘಾನಿಸ್ತಾನದಲ್ಲಿ ನಡೆದ ಸತತ ಮೂರು ಬಾಂಬ್ ದಾಳಿಯ ಬೆನ್ನಲ್ಲೇ ವಿವಿಧ ದೇಶಗಳು ತೀವ್ರ ಕಳವಳಗೊಂಡಿವೆ. ಅಫ್ಘಾನಿಸ್ತಾನದಲ್ಲಿರುವ ವಿದೇಶಿ ಪ್ರಜೆಗಳನ್ನು ಆಯಾ ದೇಶಗಳು ಮರಳಿ ಕರೆತರುವ ಯತ್ನ ಇನ್ನಷ್ಟು ಜಟಿಲಗೊಂಡಿದೆ. ಸ್ಫೋಟದ ತೀವ್ರತೆ ಮತ್ತು ಪರಿಣಾಮ ತೀವ್ರ ಗಂಭೀರವಾಗಿದ್ದು, ಪರಿಸ್ಥಿತಿ ಕೈಮೀರುವ ಸಂಭಾವ್ಯತೆ ದಟ್ಟವಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ತಿಳಿಸಿದ್ದಾರೆ. ಬ್ರಿಟನ್ ಸರ್ಕಾರ ಸಹ ಘಟನೆಯ ಸ್ವರೂಪವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತುರ್ತು ಸಭೆ ಕರೆದಿದೆ. ಅಫ್ಘಾನಿಸ್ತಾನದಲ್ಲಿ ಕರ್ಫ್ಯೂ ಹೇರಲಾಗಿದೆ.
ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಸರಣಿ ಸ್ಫೋಟವಾಗುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತುರ್ತು ಸಭೆ ಕರೆದಿದ್ದಾರೆ. ಜೋ ಬೈಡೆನ್ ಭಾಗವಹಿಸಬೇಕಿದ್ದ ಪೂರ್ವ ನಿಗದಿತ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿದ್ದು ಅಮೆರಿಕದ ಶ್ವೇತಭವನದಲ್ಲಿ ತುರ್ತು ಸಭೆ ನಡೆಸಲಿದ್ದಾರೆ.
We can confirm that the explosion near the Abbey Gate of the Kabul airport has resulted in an unknown number of casualties. We will continue to update.
— John Kirby (@PentagonPresSec) August 26, 2021
ಮೊದಲು ಇಟಲಿ ವಿಮಾನ ಗುರಿಯಾಗಿಸಿಕೊಂಡು ಉಗ್ರರು ಆತ್ಮಾಹುತಿ ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಸ್ಫೋಟದ ವೇಳೆ ಸಾವಿರಾರು ಜನರಿದ್ದರು ಎನ್ನಲಾಗಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಫೋಟದಲ್ಲಿ ಈವರೆಗೆ 18 ಜನ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಸ್ಫೋಟದಲ್ಲಿ 70ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದ್ದು, ಮೂವರು ಅಮೆರಿಕ ಸೇನೆಯ ಯೋಧರಿಗೆ ಗಾಯಗೊಂಡಿದ್ದಾರೆ.
ಇದನ್ನೂ ಓದಿ:
Kabul Blast: ಕಾಬೂಲ್ ವಿಮಾನ ನಿಲ್ದಾಣದ ಬಳಿ ಪ್ರಬಲ ಬಾಂಬ್ ಸ್ಫೋಟ
Kabul Blast: ಕಾಬೂಲ್ ವಿಮಾನ ನಿಲ್ದಾಣದ ಬಳಿ ಪ್ರಬಲ ಬಾಂಬ್ ಸ್ಫೋಟ
(Kabul blast effect mobile internet stopped America and Britain calls emergency meeting)
Published On - 9:24 pm, Thu, 26 August 21