ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ(Kabul international cricket stadium) ಶ್ಪಗೀಜಾ ಟಿ20 ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ಆತ್ಮಾಹುತಿ ದಳ ಬಾಂಬ್ ಸ್ಫೋಟ (Bomb Blast) ನಡೆಸಿದೆ. ಎಲ್ಲ ಕ್ರೀಡಾಪಟುಗಳು ಸುರಕ್ಷಿತವಾಗಿದ್ದು ಅವರನ್ನು ಬಂಕರ್ ಒಳಗೆ ಕಳುಹಿಸಲಾಗಿದೆ. ಬಂದ್ ಎ ಅಮೀರ್ ಡ್ರ್ಯಾಗನ್ ಮತ್ತು ಪಾಮೀರ್ ಜಾಲ್ಮಿ ತಂಡದ ನಡುವೆ ಪಂದ್ಯ ನಡೆಯುತ್ತಿರುವಾಗ ಬಾಂಬ್ ಸ್ಫೋಟಿಸಲಾಗಿದೆ. ಈ ಬಾಂಬ್ ಸ್ಫೋಟ ನಡೆದಾಗ ವಿಶ್ವಸಂಸ್ಥೆಯ ಅಧಿಕಾರಿಗಳೂ ಸ್ಟೇಡಿಯಂನಲ್ಲಿ ಹಾಜರಿದ್ದರು.ಶ್ಪಗೀಜಾ ಟಿ20 ಕ್ರಿಕೆಟ್ ಲೀಗ್ ಪ್ರತಿ ವರ್ಷ ಅಫ್ಘಾನಿಸ್ತಾನದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಆಯೋಜಿಸುವ ಟ್ವೆಂಟಿ20 ಕ್ರಿಕೆಟ್ ಪಂದ್ಯಾವಳಿಯಾಗಿದೆ. ರಾಷ್ಟ್ರೀಯ ತಂಡ, ಸಾಗರೋತ್ತರ ಆಟಗಾರರು, ‘ಎ’ ತಂಡದ ಆಟಗಾರರು ಮತ್ತು 19 ವರ್ಷದೊಳಗಿನವರ ತಂಡದ ಆಟಗಾರರು ಹಾಗೂ ಆಯಾ ಪ್ರದೇಶದ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತವೆ. ಎಸಿಬಿ ಎಲ್ಲಾ ತಂಡಗಳಿಗೆ ಫ್ರಾಂಚೈಸ್ ಮಾಡುವ ಮೂಲಕ ಲೀಗ್‌ಗೆ ಗುರುತನ್ನು ನೀಡಿದೆ.
Footage : There have been casualties in the blast at the Kabul international cricket stadium. #Afghanistan pic.twitter.com/wM7qMsVDpR
— Abdulhaq Omeri (@AbdulhaqOmeri) July 29, 2022
Bomb Blast in Kabul cricket stadium in Afghanistan. pic.twitter.com/Vu9kGzbUod
— Akash Kharade (@cricaakash) July 29, 2022
ಸ್ಫೋಟ ನಂತರ ಭಯಭೀತರಾದ ಪ್ರೇಕ್ಷಕರು ತಮ್ಮ ಪ್ರಾಣ ರಕ್ಷಣೆಗಾಗಿ ಧಾವಿಸುತ್ತಿರುವುದು ಕಂಡುಬಂದಿತು.
ಶ್ಪಗೀಜಾ ಲೀಗ್‌ನಲ್ಲಿ ಎರಡು ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಪಂದ್ಯದ ವೇಳೆ ಸ್ಫೋಟ ಸಂಭವಿಸಿದೆ. ಗುಂಪಿನಲ್ಲಿದ್ದ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಎಸಿಬಿಯ ಮುಖ್ಯ ಕಾರ್ಯನಿರ್ವಾಹಕ ನಸ್ಸಿಬ್ ಖಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾಬೂಲ್‌ನ ಗುರುದ್ವಾರ ಕಾರ್ಟೆ ಪರ್ವಾನ್‌ನ ಗೇಟ್ ಬಳಿ ಸ್ಫೋಟ ಸಂಭವಿಸಿದ ಎರಡು ದಿನಗಳ ನಂತರ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
Published On - 7:58 pm, Fri, 29 July 22