ಹ್ಯುಂಡೈ ಘಟಕದ ಮೇಲೆ ದಾಳಿ: ವಿದೇಶಿ ಕಂಪನಿಗಳು ಅಮೆರಿಕನ್ನರಿಗೆ ತರಬೇತಿ ನೀಡಬೇಕು ಎಂದ ಟ್ರಂಪ್

ಕಳೆದ ವಾರ ಅಮೆರಿಕದ ಜಾರ್ಜಿಯಾದಲ್ಲಿರುವ ಹ್ಯುಂಡೈ ಮೋಟಾರ್ ಉತ್ಪಾದನಾ ಘಟಕದ ಮೇಲೆ ನಡೆದ ದಾಳಿಯ ನಂತರ, ವಿದೇಶಿ ಕಂಪನಿಗಳು ಅಮೆರಿಕದ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು ಮತ್ತು ತರಬೇತಿ ನೀಡಬೇಕು ಮತ್ತು ವಲಸೆ ಕಾನೂನುಗಳನ್ನು ಗೌರವಿಸಬೇಕು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕದ ಜಾರ್ಜಿಯಾದಲ್ಲಿ ನಿರ್ಮಾಣವಾಗುತ್ತಿರುವ ಹುಂಡೈ-ಎಲ್‌ಜಿ ಸ್ಥಾವರದ ಮೇಲೆ ನಡೆದ ದಾಳಿಯಲ್ಲಿ ಬಂಧಿಸಲ್ಪಟ್ಟ 475 ಜನರಲ್ಲಿ ಹೆಚ್ಚಿನವರು ದಕ್ಷಿಣ ಕೊರಿಯನ್ನರು ಎಂದು ಶಂಕಿಸಲಾಗಿದೆ.

ಹ್ಯುಂಡೈ ಘಟಕದ ಮೇಲೆ ದಾಳಿ: ವಿದೇಶಿ ಕಂಪನಿಗಳು ಅಮೆರಿಕನ್ನರಿಗೆ ತರಬೇತಿ ನೀಡಬೇಕು ಎಂದ ಟ್ರಂಪ್
ಡೊನಾಲ್ಡ್​ ಟ್ರಂಪ್
Image Credit source: Mint

Updated on: Sep 08, 2025 | 9:39 AM

ವಾಷಿಂಗ್ಟನ್, ಸೆಪ್ಟೆಂಬರ್ 08: ಕಳೆದ ವಾರ ಅಮೆರಿಕ(America)ದ ಜಾರ್ಜಿಯಾದಲ್ಲಿರುವ ಹ್ಯುಂಡೈ ಮೋಟಾರ್ ಉತ್ಪಾದನಾ ಘಟಕದ ಮೇಲೆ ನಡೆದ ದಾಳಿಯ ನಂತರ, ವಿದೇಶಿ ಕಂಪನಿಗಳು ಅಮೆರಿಕದ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು ಮತ್ತು ತರಬೇತಿ ನೀಡಬೇಕು ಮತ್ತು ವಲಸೆ ಕಾನೂನುಗಳನ್ನು ಗೌರವಿಸಬೇಕು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕದ ಜಾರ್ಜಿಯಾದಲ್ಲಿ ನಿರ್ಮಾಣವಾಗುತ್ತಿರುವ ಹುಂಡೈ-ಎಲ್‌ಜಿ ಸ್ಥಾವರದ ಮೇಲೆ ನಡೆದ ದಾಳಿಯಲ್ಲಿ ಬಂಧಿಸಲ್ಪಟ್ಟ 475 ಜನರಲ್ಲಿ ಹೆಚ್ಚಿನವರು ದಕ್ಷಿಣ ಕೊರಿಯನ್ನರು ಎಂದು ಶಂಕಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ವಿರೋಧಿ ಅಭಿಯಾನದ ಭಾಗವಾಗಿ ಇದುವರೆಗೆ ನಡೆಸಲಾದ ಅತಿದೊಡ್ಡ ಏಕ ಘಟಕದ ಕಾರ್ಯಾಚರಣೆ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಮದು ಮಾಡಿಕೊಂಡ ಸರಕುಗಳ ಮೇಲೆ ಸುಂಕ ವಿಧಿಸುವುದರ ಕುರಿತು ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡುವಿನ ಸಂಬಂಧಗಳು ಹದಗೆಟ್ಟಿರುವ ಮಧ್ಯೆ ಈ ಬೆಳವಣಿಗೆ ನಡೆದಿದೆ. $350 ಬಿಲಿಯನ್ ಹೂಡಿಕೆಗಳನ್ನು ಒಳಗೊಂಡಿರುವ ವ್ಯಾಪಾರ ಒಪ್ಪಂದದ ವಿವರಗಳ ಕುರಿತು ಎರಡೂ ದೇಶಗಳು ಭಿನ್ನಾಭಿಪ್ರಾಯ ಹೊಂದಿವೆ.

ಮತ್ತಷ್ಟು ಓದಿ: ಭಾರತ ಅಮೆರಿಕದ ಕ್ಷಮೆ ಯಾಚಿಸಲಿದೆ ಎಂದ ವಾಣಿಜ್ಯ ಕಾರ್ಯದರ್ಶಿ! ಸುಂಕ ತಪ್ಪಿಸಿಕೊಳ್ಳಲು ಭಾರತಕ್ಕೆ 3 ಷರತ್ತು

ದಾಳಿಯ ನಂತರ ಬಂಧಿಸಲ್ಪಟ್ಟ ಸುಮಾರು 300 ದಕ್ಷಿಣ ಕೊರಿಯನ್ನರನ್ನು ಕರೆತರಲು ದಕ್ಷಿಣ ಕೊರಿಯಾ ಮುಂದಾಗಿದೆ. ಜಾರ್ಜಿಯಾದ ಎಲ್ಲಬೆಲ್‌ನಲ್ಲಿರುವ ಹ್ಯುಂಡೈನ ಕಾರ್ ಬ್ಯಾಟರಿ ಸ್ಥಾವರದಲ್ಲಿ ಗುರುವಾರ ಸುಮಾರು 475 ಕಾರ್ಮಿಕರನ್ನು ಅಮೆರಿಕದ ಫೆಡರಲ್ ಏಜೆಂಟರು ಬಂಧಿಸಿದ್ದಾರೆ. ಅಮೆರಿಕದಲ್ಲಿ ಹೂಡಿಕೆ ಮಾಡುವ ಎಲ್ಲಾ ವಿದೇಶಿ ಕಂಪನಿಗಳು ದಯವಿಟ್ಟು ನಮ್ಮ ರಾಷ್ಟ್ರದ ವಲಸೆ ಕಾನೂನುಗಳನ್ನು ಗೌರವಿಸುವಂತೆ ನಾನು ಕೇಳಿಕೊಳ್ಳುತ್ತೇನೆ ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದ್ದಾರೆ.

ನಿಮ್ಮ ಹೂಡಿಕೆಗಳು ಸ್ವಾಗತಾರ್ಹ, ಮತ್ತು ವಿಶ್ವ ದರ್ಜೆಯ ಉತ್ಪನ್ನಗಳನ್ನು ನಿರ್ಮಿಸಲು ನಿಮ್ಮ ಅತ್ಯಂತ ಬುದ್ಧಿವಂತ ಜನರನ್ನು, ಉತ್ತಮ ತಾಂತ್ರಿಕ ಪ್ರತಿಭೆಯನ್ನು ಹೊಂದಿರುವವರನ್ನು ಕಾನೂನುಬದ್ಧವಾಗಿ ಕರೆತರಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಇಲ್ಲವಾದಲ್ಲಿ ಅಮೆರಿಕದ ಕಾರ್ಮಿಕರನ್ನು ನೇಮಿಸಿಕೊಂಡು ಅವರಿಗೆ ತರಬೇತಿ ನೀಡಬೇಕು ಎಂದು ಹೇಳಿದ್ದಾರೆ.

ಈ ಸ್ಥಾವರದಲ್ಲಿ ವಿದ್ಯುತ್ ವಾಹನಗಳಿಗೆ ಬ್ಯಾಟರಿಗಳನ್ನು ತಯಾರಿಸಲು ಉದ್ದೇಶಿಸಲಾಗಿದೆ. ಈ ಸ್ಥಳವನ್ನು ಜಾರ್ಜಿಯಾದ ಅತಿದೊಡ್ಡ ಆರ್ಥಿಕ ಅಭಿವೃದ್ಧಿ ಯೋಜನೆ ಎಂದು ಸರ್ಕಾರಿ ಅಧಿಕಾರಿಗಳು ಈ ಹಿಂದೆ ವಿವರಿಸಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ