ದೆಹಲಿ ಜುಲೈ 23: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ (2024 US Presidential elections) ಜೋ ಬೈಡನ್ (Joe Biden) ಹಿಂದೆ ಸರಿದ ನಂತರ ಅವರು ಹೀಗೆ ಯಾಕೆ ಮಾಡಿದರು ಎಂಬುದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅವರ ಆರೋಗ್ಯ ಸರಿಯಿಲ್ಲವೇ? ಎಂದು ಕೆಲವರು ಕೇಳಿದರೆ, ಅನಾರೋಗ್ಯದ ಕಾರಣದಿಂದಲೇ ಅವರು ಸಾರ್ವಜನಿಕರ ಕಣ್ಣಿಗೆ ಬೀಳುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಇನ್ನು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ಐದು ದಿನಗಳಲ್ಲಿ ಅಮೆರಿಕದ ಅಧ್ಯಕ್ಷರು ಏಕೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ಜನರು ಕುತೂಹಲದಿಂದ ಕೇಳುತ್ತಿದ್ದು ಸಾಮಾಜಿಕ ಮಾಧ್ಯಮ X ನಲ್ಲಿ ” Where’s Jo” ಟ್ರೆಂಡ್ ಆಗಿದೆ. ನಿಜ ಸಂಗತಿ ಏನೆಂದರೆ ಬೈಡನ್ ಕೋವಿಡ್ ಪಾಸಿಟಿವ್ ಆಗಿದ್ದು, ಅವರು ಪ್ರತ್ಯೇಕವಾಗಿದ್ದಾರೆ ಎಂದು ಶ್ವೇತಭವನವು ಕಳೆದ ವಾರ ಹೇಳಿಕೆಯಲ್ಲಿ ತಿಳಿಸಿದೆ.
Where’s Joe? pic.twitter.com/r2aBCbpxF2
— Professor Ronald D. Yanagita (@RonaldYanagita) July 23, 2024
ಆದರೆ 81 ವರ್ಷದ ಜೋ ಬೈಡನ್ ಆರೋಗ್ಯದ ಬಗ್ಗೆ ನೆಟ್ಟಿಗರು ಊಹಾಪೋಹ ಮಾಡುವುದನ್ನು ನಿಲ್ಲಿಸಿಲ್ಲ. ಜೋ ಬೈಡನ್ ವಿಶ್ರಾಂತಿ ಗೃಹದಲ್ಲಿದ್ದಾರೆ. ಅವರು ಬದುಕುಳಿಯುವ ಸಾಧ್ಯತೆಯಿಲ್ಲ” ಎಂದು ಹೇಳುವ ಹಲವಾರು ಪೋಸ್ಟ್‌ಗಳು ಸಾಮಾಜಿಕ ವೇದಿಕೆಯಲ್ಲಿ ವೈರಲ್ ಆಗಿವೆ.
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಅವರ ಸಹವರ್ತಿ ಜೆಡಿ ವ್ಯಾನ್ಸ್ ಮತ್ತೊಂದು ಸಿದ್ಧಾಂತವನ್ನು ಮಂಡಿಸಿದ್ದಾರೆ. ಅದೇನೆಂದರೆ ಡೆಮಾಕ್ರಟಿಕ್ ಪಕ್ಷದಲ್ಲೇ ಅಧ್ಯಕ್ಷ ಬೈಡನ್ ಅವರನ್ನು ಸ್ಪರ್ಧೆಯಿಂದ ಹೊರಹಾಕಲು ದಂಗೆ ಎದ್ದಿದೆ ಎಂದು ಅವರು ಹೇಳಿದ್ದಾರೆ.
ಬೈಡನ್ ಅವರು ಚುನಾವಣೆಯಿಂದ ಹಿಂದೆ ಸರಿದಿರುವುದು “ಜೋ ಬಿಡೆನ್ ವಿರುದ್ಧದ ದಂಗೆಯೇ” ಎಂದು ಕೇಳಿದಾಗ ಇದು ಒಂಥರಾ ಹಾಗೆಯೇ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
“ಹೌದು, ಹಾಗೆಂದು ನಾನು ಭಾವಿಸುತ್ತೇನೆ. ಸಾಂವಿಧಾನಿಕ ಪ್ರಕ್ರಿಯೆ, 25 ನೇ ತಿದ್ದುಪಡಿ ಇದೆ ನೋಡಿ. ಜೋ ಬೈಡನ್ ಅಧ್ಯಕ್ಷರಾಗಿ ಸ್ಪರ್ಧಿಸಲು ಸಾಧ್ಯವಾಗದಿದ್ದರೆ, ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ” ಎಂದು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ವ್ಯಾನ್ಸ್ ಹೇಳಿದರು.
ಇದನ್ನೂ ಓದಿ: ಅಮೆರಿಕ: ಅಧ್ಯಕ್ಷೀಯ ಸ್ಪರ್ಧೆಯಿಂದ ಜೋ ಬೈಡನ್ ಹಿಂದಕ್ಕೆ; ಕಮಲಾ ಹ್ಯಾರಿಸ್ ಈಗ ಅಧಿಕೃತ ಸ್ಪರ್ಧಿ?
ಜೂನ್ 27 ರಂದು ಟ್ರಂಪ್ ವಿರುದ್ಧ ವ್ಯಾಪಕವಾಗಿ ಟೀಕೆಗೊಳಗಾದ ಚರ್ಚೆಯ ನಂತರ ಡೆಮಾಕ್ರಟಿಕ್ ಪಕ್ಷದ ಆಂತರಿಕ ಒತ್ತಡ ಹೆಚ್ಚಿದ ನಂತರ ಬೈಡನ್ ಅವರ ನಿರ್ಧಾರವು ಬಂದಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಸ್ಥಾನವನ್ನು ಪಡೆಯಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪಕ್ಷದ ಶಾಸಕರ ಬೆಂಬಲವನ್ನು ಗಳಿಸಿದ್ದಾರೆ. ಜೋ ಬೈಡನ್ ಅವರು ಸ್ಪರ್ಧೆಯಿಂದ ಹೊರಗುಳಿಯುವುದಾಗಿ ಭಾನುವಾರ ಹೇಳಿದ ನಂತರ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಾಟ್ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಶಿಫಾರಸು ಮಾಡಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ