HIV: 2023ರಲ್ಲಿ ಪ್ರತಿ ನಿಮಿಷಕ್ಕೆ ಓರ್ವ ಏಡ್ಸ್ ರೋಗಿ ಸಾವು, 4 ಕೋಟಿ ಎಚ್​ಐವಿ ಸೋಂಕಿತರು

2023ರಲ್ಲಿ ಏಡ್ಸ್​ಗೆ ಕಾರಣವಅಗಿರುವ ಎಚ್​ಐವಿ ವೈರಸ್​ನೊಂದಿಗೆ ಸುಮಾರು 4 ಕೋಟಿ ಜನರು ಜೀವಿಸುತ್ತಿದ್ದರು. ಅವರಲ್ಲಿ 90 ಲಕ್ಷ ಜನರು ಯಾವುದೇ ಚಿಕಿತ್ಸೆ ಪಡೆದಿಲ್ಲ, ಇದರ ಪರಿಣಾಮ ಪ್ರತಿ ನಿಮಿಷಕ್ಕೆ ಒಬ್ಬರು ಏಡ್ಸ್​ಗೆ ಸಂಬಂಧಿಸಿದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

HIV: 2023ರಲ್ಲಿ ಪ್ರತಿ ನಿಮಿಷಕ್ಕೆ ಓರ್ವ ಏಡ್ಸ್ ರೋಗಿ ಸಾವು, 4 ಕೋಟಿ ಎಚ್​ಐವಿ ಸೋಂಕಿತರು
ಏಡ್ಸ್​
Follow us
ನಯನಾ ರಾಜೀವ್
|

Updated on: Jul 24, 2024 | 9:29 AM

ಕಳೆದ ವರ್ಷ ಏಡ್ಸ್ ಗೆ ಕಾರಣವಾಗುವ ಎಚ್ ಐವಿ ವೈರಸ್ ಜಗತ್ತಿನ ಸುಮಾರು 4 ಕೋಟಿ ಜನರಲ್ಲಿ ಪತ್ತೆಯಾಗಿತ್ತು. ಈ ಪೈಕಿ 90 ಲಕ್ಷ ಜನರಿಗೆ ಯಾವುದೇ ಚಿಕಿತ್ಸೆ ಸಿಗಲಿಲ್ಲ. ಪರಿಣಾಮವಾಗಿ, ಪ್ರತಿ ನಿಮಿಷಕ್ಕೂ ಕೆಲವು ರೋಗಿಗಳು ಏಡ್ಸ್‌ನಿಂದ ಸಾವನ್ನಪ್ಪಿದ್ದಾರೆ.

ವಿಶ್ವಸಂಸ್ಥೆ ತನ್ನ ಇತ್ತೀಚಿನ ವರದಿಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದೆ. ಜಗತ್ತಿನಲ್ಲಿ ಏಡ್ಸ್ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಗತಿ ಸಾಧಿಸುತ್ತಿರುವಾಗ ಈ ಸುದ್ದಿ ಭಯ ಹುಟ್ಟಿಸುವಂತಿದೆ.

ಹಣದ ಕೊರತೆಯೇ ಇದಕ್ಕೆ ಕಾರಣ. ಈ ಕಾರಣದಿಂದಾಗಿ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ಪೂರ್ವ ಯುರೋಪ್, ಮಧ್ಯ ಏಷ್ಯಾ ಮತ್ತು ಲ್ಯಾಟಿನ್ ಅಮೇರಿಕದಲ್ಲಿನ ಹೊಸ ಪ್ರದೇಶಗಳಲ್ಲಿ ಸೋಂಕು ಹೆಚ್ಚುತ್ತಿದೆ. ಕಳೆದ ವರ್ಷ 6 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: HIV AIDS: ಎಚ್‌ಐವಿ ಏಡ್ಸ್ ಕುರಿತು ಈಗಲೂ ತಿಳಿದುಕೊಳ್ಳಬೇಕಾದ ಅಂಶಗಳಿವು

2023 ರಲ್ಲಿ ಸುಮಾರು 6,30,000 ಜನರು ಏಡ್ಸ್ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಇದು 2004 ರಲ್ಲಿ ಕಂಡ 21 ಲಕ್ಷ ಸಾವುಗಳಿಗಿಂತ ಕಡಿಮೆಯಾಗಿದೆ.

2030 ರ ವೇಳೆಗೆ ಏಡ್ಸ್ ಅನ್ನು ಕೊನೆಗೊಳಿಸುವುದಾಗಿ ಜಾಗತಿಕ ನಾಯಕರು ಪ್ರತಿಜ್ಞೆ ಮಾಡಿದ್ದಾರೆ ಎಂದು UNAIDS ಕಾರ್ಯನಿರ್ವಾಹಕ ನಿರ್ದೇಶಕಿ ವಿನ್ನಿ ಬೈನಿಮಾ ಹೇಳಿದ್ದಾರೆ . ಲಿಂಗ ಅಸಮಾನತೆಯು ಆಫ್ರಿಕಾದ ಕೆಲವು ಭಾಗಗಳಲ್ಲಿ ಹದಿಹರೆಯದ ಹುಡುಗಿಯರು ಮತ್ತು ಯುವತಿಯರಲ್ಲಿ ಹೆಚ್ಚಿದ HIV ಪ್ರಕರಣಗಳಿಗೆ ಕಾರಣವಾಗಿದೆ.

ಅಂಚಿನಲ್ಲಿರುವ ಸಮುದಾಯಗಳಲ್ಲಿ ಜಾಗತಿಕವಾಗಿ ಹೊಸ ಸೋಂಕುಗಳ ಪ್ರಮಾಣವು 2010 ರಲ್ಲಿ 45% ರಿಂದ 2023 ರಲ್ಲಿ 55% ಕ್ಕೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಒಂದು ವರ್ಷಕ್ಕೆ ಎರಡು ಚುಚ್ಚುಮದ್ದುಗಳ ಬೆಲೆ 40,000 ಡಾಲರ್ (33.47 ಲಕ್ಷ ರೂ.) ಇದು ಸಾಮಾನ್ಯರಿಗೆ ನಿಲುಕದ್ದು.

ಏಡ್ಸ್ ಹರಡುವುದು ಹೇಗೆ? ವೈರಸ್ ರಕ್ತ, ವೀರ್ಯ ಮತ್ತು ಯೋನಿ ದ್ರವಗಳಮೂಲಕ ಹರಡುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಯೋನಿ, ಮೌಖಿಕ ಅಥವಾ ಗುದನಾಳದ ಅಸುರಕ್ಷಿತ ಸಂಭೋಗವು ಅಪಾಯಕಾರಿ. ಸೋಂಕಿತ ಮಾದಕ ವ್ಯಸನಿಗಳ ಸೂಜಿಗಳು ಮತ್ತು ಶೇವಿಂಗ್ ಬ್ಲೇಡ್‌ಗಳ ಬಳಕೆ ಮತ್ತೊಂದು ಅಪಾಯಕಾರಿ ಅಂಶವಾಗಿದೆ. ಸೋಂಕಿತರು ಬಳಸಿದ ಸರ್ಜಿಕಲ್ ಬ್ಲೇಡ್‌ಗಳು ಮತ್ತು ಇಂಜೆಕ್ಷನ್ ಸೂಜಿಗಳ ಬಳಕೆಯಿಂದಲೂ ಸೋಂಕು ಹರಡುವ ಅಪಾಯವಿದೆ.

ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಸೋಂಕಿತ ಗರ್ಭಿಣಿ ತಾಯಿಯಿಂದ ಅವಳ ಮಗುವಿಗೆ ಕೂಡ ಏಡ್ಸ್‌ ಹರಡುತ್ತದೆ. ಅಸುರಕ್ಷಿತ ಸೂಜಿಗಳಿಂದ ಹಚ್ಚೆ ಮತ್ತು ದೇಹವನ್ನು ಚುಚ್ಚುವ ಸಮಯದಲ್ಲೂ ಏಡ್ಸ್‌ ಹರಡುವ ಅಪಾಯವಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ