ಲಂಡನ್: ತಮ್ಮ ಸಂಪುಟದದ ನಾಲ್ವರು ಸಚಿವರು ಸೇರಿದಂತೆ ಸುಮಾರು 40 ಜನ ಸಚಿವರು ಮತ್ತು ಆಪ್ತರು ಸರಣಿಯೋಪಾದಿಯಲ್ಲಿ ರಾಜೀನಾಮೆ (resignation) ಸಲ್ಲಿಸಿದ ಬಳಿಕ ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿಯಲಾರೆ ಎಂದು ಹಟ ಸಾಧಿಸುತ್ತಿದ್ದ ಬ್ರಿಟಿಷ್ ಪ್ರಧಾನ ಮಂತ್ರಿ (British PM) ಬೊರಿಸ್ ಜಾನ್ಸನ್ (Boris Johnson) ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ನಿರೀಕ್ಷೆ ಇದೆಯೆಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಳೆದ ರಾತ್ರಿಯಿಂದ ಬ್ರಿಟನ್ ನಲ್ಲಿ ರಾಜೀನಾಮೆಗಳ ಮಹಾಪೂರವೇ ಹರಿದು ಬರುತ್ತಿದೆ.
British media say UK Prime Minister Boris Johnson has agreed to resign: The Associated Press pic.twitter.com/tzISv6CSso
— ANI (@ANI) July 7, 2022
ಬ್ರಿಟನ್ನಿನ ಹಣಕಾಸು ಸಚಿವ ರಿಷಿ ಸುನಾಕ್ ಮತ್ತು ಮತ್ತು ಆರೋಗ್ಯ ಖಾತೆ ಕಾರ್ಯದರ್ಶಿ ಸಾಜಿದ್ ಜಾವಿದ್ ಅವರು ಮಂಗಳವಾರ ರಾತ್ರಿ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸುವ ಮೂಲಕ ರಾಜೀನಾಮೆಗಳ ಪರ್ವಕ್ಕೆ ನಾಂದಿ ಹಾಡಿದರು. ಗುರುವಾರಂದು ಯುಕೆಯ ಶಿಕ್ಷಣ ಸಚಿವೆ ಮಿಶೆಲ್ ಡೊನಿಲಾನ್ ರಾಜೀನಾಮೆ ಸಲ್ಲಿಸಿದ್ದಾರೆ.
ಜಾನ್ಸನ್ ರಾಜೀನಾಮೆ ಸಲ್ಲಿಸುವುದು ಹೆಚ್ಚು ಕಡಿಮೆ ಖಚಿತವಾಗಿದೆಯಾದರೂ ಕನ್ಸರ್ವೇಟಿವ್ ಪಕ್ಷ ತನ್ನ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆಯೋ ಅಥವಾ ಹೊರಬಂದು ಬಿಡುತ್ತಾರೋ ಅನ್ನೋದು ಖಚಿತವಾಗಿಲ್ಲ ಎಂದು ಎಪಿ ವರದಿ ಮಾಡಿದೆ.
ಇದನ್ನೂ ಓದಿ: ಇಂಡೋ-ಪೆಸಿಫಿಕ್ ಪ್ರದೇಶವನ್ನು ನಿರಂಕುಶಾಧಿಕಾರದ ಬೆದರಿಕೆಗಳಿಂದ ಮುಕ್ತಗೊಳಿಸಬೇಕು: ಯುಕೆ ಪ್ರಧಾನಿ ಬೋರಿಸ್ ಜಾನ್ಸನ್
Published On - 2:50 pm, Thu, 7 July 22