ಹೀಗೂ ಉಂಟೆ! ಮಾಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯದಲ್ಲಿ ವಾಪಸ್

|

Updated on: May 30, 2020 | 2:59 PM

ದೆಹಲಿ: ಕೊರೊನಾ ಕಾಲದಲ್ಲಿ ಹೀಗೂ ಉಂಟೆ! ಎಂದು ಕೇಳುವಂತಹ ಪ್ರಸಂಗವೊಂದು ನಡೆದಿದೆ. ಮಾಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯದಲ್ಲಿಯೆ ವಾಪಸ್ ತಿರುಗಿಸಿಕೊಂಡು ಬರುವಂತಾಗಿದೆ. ರಷ್ಯಾದ ಮಾಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯದಲ್ಲಿರುವಾಗಲೇ ವಾಪಸ್ ಬರಲು ಇಂಡಿಯಾ ಏರ್ ಟ್ರಾಫಿಕ್ ಕಂಟ್ರೋಲ್ ಸೂಚನೆ ರವಾನಿಸಿದೆ. ವಿಮಾನದ ಪೈಲಟ್ ಗೆ ಕೊರೊನಾ ಪಾಸಿಟಿವ್ ದೃಢ ಹಿನ್ನೆಲೆ ಇಂತಹ ತುರ್ತು ಸಂದೇಶ ರವಾನೆಯಾಗಿದೆ. ದೆಹಲಿಯಿಂದ ವಿಮಾನ ಟೇಕಾಫ್ ಆದ ಬಳಿಕ ಪೈಲಟ್ ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. […]

ಹೀಗೂ ಉಂಟೆ! ಮಾಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯದಲ್ಲಿ ವಾಪಸ್
ಕಳೆದ 10 ವರ್ಷಗಳಲ್ಲಿ ನೀವು ಏರ್​ ಇಂಡಿಯಾಗೆ ಖಾಸಗಿ ವಿವರ ನೀಡಿದ್ದರೆ... ಆ ಮಾಹಿತಿ ಸೋರಿಕೆಯಾಗಿದೆ ಎಚ್ಚರಾ!
Follow us on

ದೆಹಲಿ: ಕೊರೊನಾ ಕಾಲದಲ್ಲಿ ಹೀಗೂ ಉಂಟೆ! ಎಂದು ಕೇಳುವಂತಹ ಪ್ರಸಂಗವೊಂದು ನಡೆದಿದೆ. ಮಾಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯದಲ್ಲಿಯೆ ವಾಪಸ್ ತಿರುಗಿಸಿಕೊಂಡು ಬರುವಂತಾಗಿದೆ.

ರಷ್ಯಾದ ಮಾಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯದಲ್ಲಿರುವಾಗಲೇ ವಾಪಸ್ ಬರಲು ಇಂಡಿಯಾ ಏರ್ ಟ್ರಾಫಿಕ್ ಕಂಟ್ರೋಲ್ ಸೂಚನೆ ರವಾನಿಸಿದೆ. ವಿಮಾನದ ಪೈಲಟ್ ಗೆ ಕೊರೊನಾ ಪಾಸಿಟಿವ್ ದೃಢ ಹಿನ್ನೆಲೆ ಇಂತಹ ತುರ್ತು ಸಂದೇಶ ರವಾನೆಯಾಗಿದೆ. ದೆಹಲಿಯಿಂದ ವಿಮಾನ ಟೇಕಾಫ್ ಆದ ಬಳಿಕ ಪೈಲಟ್ ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಮಾರ್ಗ ಮಧ್ಯೆ ವಾಪಸ್ ಬರಲು ಪೈಲಟ್ ಗೆ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸದ್ಯ ವಿಮಾನದಲ್ಲಿ ಪ್ರಯಾಣಿಕರು ಇರಲಿಲ್ಲ!
ಯಾಕೆಂದ್ರೆ ಈ ವಿಮಾನವು ಮಾಸ್ಕೋದಲ್ಲಿದ್ದ ಭಾರತೀಯರನ್ನು ಕರೆತರಲು ಖಾಲಿ ವಿಮಾನ ಹೊರಟಿತ್ತು. ವಿಮಾನ ದೆಹಲಿಯಿಂದ ಹೊರಡುವ ವೇಳೆ ಎಲ್ಲ ಪೈಲಟ್, ಸಿಬ್ಬಂದಿಯ ಕೊರೊನಾ ರಿಪೋರ್ಟ್ ಪರಿಶೀಲಿಸಲಾಗಿತ್ತು. ಆದ್ರೆ ಈ ಒಬ್ಬ ಪೈಲಟ್​ ವರದಿ ಪಾಸಿಟೀವ್ ಬಂದಿದ್ದರೂ ಅದನ್ನು ನೆಗೆಟೀವ್ ಎಂದು ತಪ್ಪಾಗಿ ಭಾವಿಸಲಾಗಿತ್ತು.

Published On - 2:49 pm, Sat, 30 May 20