ಗ್ವಾಂಗ್‌ಜೋ: ಕೊರೊನಾ ಮಹಾಮಾರಿ ವಿಶ್ವಾದ್ಯಂತ ತನ್ನ ಹಾವಳಿ ಶುರು ಮಾಡಿದ ನಂತರ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲಾಗುತ್ತಿದೆ. ಈ ಸಂಬಂಧ ಚೀನಾದಲ್ಲಿ ಸಿಲುಕಿದ್ದ ಭಾರತೀಯರನ್ನು ಈಗ ಭಾರತಕ್ಕೆ ಕರೆತರಲಾಗುತ್ತಿದೆ.
ವಂದೇ ಭಾರತ್ ಮಿಷನ್
ಹೌದು ಕೊರೊನಾ ಸಾಂಕ್ರಾಮಿಕ ಸೋಂಕು ಹಬ್ಬಿದ ನಂತರ ಕೆಲ ಭಾರತೀಯರು ಚೀನಾದಲ್ಲಿಯೇ ಸಿಲುಕಿದ್ದಾರೆ. ಈ ಸಂಬಂಧ ಅಲ್ಲಿರುವ ಭಾರತೀಯರನ್ನು ಕರೆತರಲು ‘ವಂದೇ ಭಾರತ್ ಮಿಷನ್’ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಕಾರ್ಯಾಚರಣೆಯಡಿ ಈಗ ಚೀನಾದಲ್ಲಿರುವ ಭಾರತೀಯರನ್ನು ಕರೆತರಲು ಏರ್ ಇಂಡಿಯಾದ ವಿಶೇಷ ವಿಮಾನ ಚೀನಾಕ್ಕೆ ಹೋಗಿದೆ.
ಅಲ್ಲಿನ ಗ್ವಾಂಗ್‌ಜೋ ಸಿಟಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 233 ಭಾರತೀಯರನ್ನು ಈ ವಿಮಾನ ಕರೆತರುತ್ತಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಚೀನಾದಲ್ಲಿರುವ ಭಾರತೀಯ ರಾಜದೂತ ಕಚೇರಿ ಚೀನಾದಲ್ಲಿದ್ದ ಬಹುತೇಕ ವಿದ್ಯಾರ್ಥಿಗಳನ್ನು ಹೊತ್ತು ವಿಶೇಷ ಏರ್ ಇಂಡಿಯಾ ವಿಮಾನ ದೆಹಲಿಯತ್ತ ಪ್ರಯಾಣ ಬೆಳಸಲಿದೆ ಎಂದು ತಿಳಿಸಿದೆ.
233 Indian nationals, mostly students from all over China left for home on the Guangzhou-Delhi #VandeBharatMission special flight today afternoon: Consulate General of India, Guangzhou, China pic.twitter.com/0IR1haCYZT
— ANI (@ANI) August 6, 2020