ಚೀನಾ ಈಸ್ಟರ್ನ್ ಏರ್ಲೈನ್ಸ್ (600115.SS) ಗೆ ಸೇರಿದ ವಿಮಾನವೊಂದು ಇಂದು ದಕ್ಷಿಣ ಚೀನಾದ ಪರ್ವತಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ (China Plane Crashes). ಕುನ್ಮಿಂಗ್ ಎಂಬ ನಗರದಿಂದ ಗುವಾಂಗ್ಝೌಕ್ಕೆ ಸಂಚಾರ ಮಾಡುತ್ತಿದ್ದ ಈ ವಿಮಾನದಲ್ಲಿ ಸುಮಾರು 133 ಪ್ರಯಾಣಿಕರು ಇದ್ದರು. ಚೀನಾ ಈಸ್ಟರ್ನ್ ಏರ್ಲೈನ್ಸ್ಗೆ ಸೇರಿದ ಬೋಯಿಂಗ್ 737-800 ವಿಮಾನ MU5735 ವುಝೌ ಬಳಿ ಅಪಘಾತಕ್ಕೀಡಾಗಿದ್ದು, ಗುಡ್ಡ ಪ್ರದೇಶದಿಂದ ಭರ್ಜರಿ ಹೊಗೆ ಏಳುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಇದು ಸುಮಾರು ಆರು ವರ್ಷ ಹಳೇ ವಿಮಾನವಾಗಿದ್ದು, ಅಪಘಾತದಲ್ಲಿ ಯಾರಾದರೂ ಮೃತಪಟ್ಟಿದ್ದಾರಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
A China Eastern Airlines Boeing 737-800 operating flight MU5735 has reportedly crashed near Wuzhou in southern China. Initial reports say 133 onboard.pic.twitter.com/iipgQYGkhK
— WLVN Analysis? (@TheLegateIN) March 21, 2022
ಚೀನಾ ಈಸ್ಟರ್ನ್ ಏರ್ಲೈನ್ಸ್ ಎಂಬುದು ಶಾಂಘೈ ಮೂಲದ ವಿಮಾನಯಾನ ಸಂಸ್ಥೆ. ಚೀನಾದ ಮೂರು ಪ್ರಮುಖ ವಿಮಾನ ಯಾನ ಸ್ಂಸ್ಥೆಗಳಲ್ಲಿ ಇದೂ ಒಂದು. ದೇಶೀಯ ಮತ್ತು ಅಂತಾರಾಷ್ಟ್ರೀಯ ಸೇರಿ ಒಟ್ಟು 248 ಪ್ರದೇಶಗಳಿಗೆ ಇದರ ವಿಮಾನಸೇವೆ ಇದೆ. ಈ ವಿಮಾನ ಕುನ್ಮಿಂಗ್ನಿಂದ ಮಧ್ಯಾಹ್ನ 1.11ಕ್ಕೆ ಹೊರಟಿದೆ. ಸುಮಾರು 2.22ರ ಹೊತ್ತಿಗೆ ಫ್ಲೈಟ್ ಟ್ರ್ಯಾಕ್ ಅಂತ್ಯಗೊಂಡಿತು. ಆಗ ವಿಮಾನ ಸಮುದ್ರ ಮಟ್ಟದಿಂದ ಸುಮಾರು 3225 ಅಡಿ ಎತ್ತರದಲ್ಲಿ, 376 ನಾಟ್ ವೇಗದಲ್ಲಿ ಚಲಿಸುತ್ತಿತ್ತು ಎಂದು ಫ್ಲೈಟ್ರಾಡಾರ್ 24 ಎಂಬ ವೆಬ್ಸೈಟ್ ತಿಳಿಸಿದೆ. ಸರಿಯಾಗಿ ಹೋಗಿದ್ದರೆ 3.05ನಿಮಿಷದ ಹೊತ್ತಿಗೆ ಗುವಾಂಗ್ಝೌನಲ್ಲಿ ಲ್ಯಾಂಡ್ ಆಗಬೇಕಿತ್ತು ಎಂದೂ ಮಾಹಿತಿ ನೀಡಿದೆ.
ಚೀನಾದ ಒಟ್ಟಾರೆ ಏರ್ಲೈನ್ ಸಂಸ್ಥೆಗಳು ಅತ್ಯುತ್ತಮ ಮತ್ತು ಸುರಕ್ಷಿತ ಎಂದು ಹೇಳಲಾಗುತ್ತದೆ. ಚೀನಾದಲ್ಲಿ 2010ರಲ್ಲಿ 96 ಜನರಿದ್ದ ಎಂಬ್ರೇರ್ ಇ ಪ್ರಾದೇಶಿಕ ಜೆಟ್ವೊಂದು ಅಪಘಾತಕ್ಕೀಡಾಗಿ, 46 ಮಂದಿ ಮೃತಪಟ್ಟಿದ್ದರು. ಇದು ಚೀನಾದ ಹೆನಾನ್ ಏರ್ಲೈನ್ ಸಂಸ್ಥೆಯ ವಿಮಾನವಾಗಿದ್ದು, ಕೆಟ್ಟ ವಾತಾವರಣದ ಕಾರಣದಿಂದ ಅಪಘಾತ ಸಂಭವಿಸಿತ್ತು.
ಇದನ್ನೂ ಓದಿ: Viral Photo: ಪೂಜೆ ವೇಳೆ ಅಮ್ಮ ಮಾಡಿದ ಆ ಒಂದು ಕೆಲಸದಿಂದ ಮುಜುಗರಕ್ಕೀಡಾದ ಮಗ; ಫೋಟೋ ವೈರಲ್
Published On - 2:28 pm, Mon, 21 March 22