NRI: H1B ವೀಸಾ ಮೋಸ.. US ಸರ್ಕಾರದ ವಿರುದ್ಧ 70 ಭಾರತ ಮೂಲದ ಉದ್ಯೋಗಿಗಳಿಂದ ಕೇಸ್ ದಾಖಲು
Denying H-1B Visas: ಅಮೆರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ಪದವಿಗಳನ್ನು ಪಡೆದ ಎಲ್ಲಾ ವಿದೇಶಿಗರು H-1B ವೀಸಾಗಳನ್ನು ಪಡೆಯಬೇಕೆಂದರೆ OPT (ಐಚ್ಛಿಕ ಪ್ರಾಯೋಗಿಕ ತರಬೇತಿ- Optional Practical Training) ಕಾರ್ಯಕ್ರಮಕ್ಕೆ ಸೇರಬೇಕಾಗುತ್ತದೆ. ಏತನ್ಮಧ್ಯೆ, ಭಾರತ ಮೂಲದ ಅರ್ಜಿದಾರರು US ಸರ್ಕಾರದಿಂದ ಪರವಾನಗಿ ಪಡೆದ 4 ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ ಅವರಿಗೆ ಈ ಅವಕಾಶವನ್ನು ನಿರಾಕರಿಸಲಾಗಿದೆ.
H1B ವೀಸಾ ನಿರಾಕರಣೆ: ಸುಮಾರು 70 NRI ಗಳು ತಾವು ಉದ್ಯೋಗ ಸೇರಬಯಸಿದ್ದ ಕಂಪನಿಗಳ ಮೋಸದ ಆಟದಿಂದಾಗಿ ತಮಗೆ H1B ವೀಸಾಗಳನ್ನು ನಿರಾಕರಿಸಿರುವ US ಸರ್ಕಾರದ ವಿರುದ್ಧ (US Government) ಮೊಕದ್ದಮೆ ಹೂಡಿದ್ದಾರೆ. ಬ್ಲೂಮ್‌ಬರ್ಗ್ ಕಾನೂನು ವರದಿಯಲ್ಲಿ ಈ ಕುರಿತು ಲೇಖನವನ್ನು ಪ್ರಕಟಿಸಲಾಗಿದೆ. ವಾಷಿಂಗ್ಟನ್ ರಾಜ್ಯದ ಫೆಡರಲ್ ಜಿಲ್ಲಾ ನ್ಯಾಯಾಲಯದಲ್ಲಿ ಈ ವಾರ ಸಲ್ಲಿಸಲಾದ ಮೊಕದ್ದಮೆಯ ಪ್ರಕಾರ, ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ಭಾರತೀಯ ಪದವೀಧರರು ಕಾನೂನುಬದ್ಧ ಉದ್ಯೋಗಗಳಲ್ಲಿ ಉದ್ಯೋಗದಲ್ಲಿದ್ದರೂ ಸಹ ಆ ಪದವೀಧರರಿಗೆ H-1B ವಿಶೇಷ ಉದ್ಯೋಗ ವೀಸಾಗಳನ್ನು (H1B Visas) ನೀಡಲು ನಿರಾಕರಿಸಿದೆ.
ಮಾಹಿತಿ ನೀಡದೆ ಶಿಕ್ಷಿಸಿದ್ದಾರೆ ಎಂದು ಅಲವತ್ತುಕೊಂಡಿರುವ ಭಾರತ ಮೂಲದ 70 ಉದ್ಯೋಗಿಗಳು
ದೂರಿನ ಪ್ರಕಾರ, ಯುಎಸ್ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದೇಶಿ ಪದವೀಧರರಿಗಾಗಿರುವ ತರಬೇತಿ ಕಾರ್ಯಕ್ರಮಗಳ ಮೂಲಕ ಉದ್ಯೋಗದಲ್ಲಿರುವ ಭಾರತೀಯ ಪದವೀಧರರಿಗೆ ಪ್ರತಿಕ್ರಿಯಿಸಲು ಅವಕಾಶವಿಲ್ಲದೆ ಅನ್ಯಾಯವಾಗಿ ದಂಡ ವಿಧಿಸಲಾಗಿದೆ.
ಇದನ್ನೂ ಓದಿ: ಹೆಚ್ಚಿನ ಭೂ ವೀಕ್ಷಣೆಗಾಗಿ ಡಿಎಸ್-ಎಸ್ಎಆರ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ ಪಿಎಸ್ಎಲ್‌ವಿ-ಸಿ56 ಯೋಜನೆ
ಶಿಕ್ಷೆಗೊಳಗಾದ ಎನ್ಆರ್ಐಗಳು ನಾಲ್ಕು ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ: ಅವು ಯಾವುವೆಂದರೆ ಎಂಡ್ವಿಲ್ಲೆ ಟೆಕ್ನಾಲಜೀಸ್, ಅಬ್ಜೆಕ್ ಟೆಕ್ನಾಲಜೀಸ್ ಎಲ್ಎಲ್ ಸಿ, ಇಂಟೆಗ್ರಾ ಟೆಕ್ನಾಲಜೀಸ್ ಎಲ್ಎಲ್ ಸಿ, ವೈರ್ ಕ್ಲಾಸ್ ಟೆಕ್ನಾಲಜೀಸ್ ಎಲ್ಎಲ್ ಸಿ.
There are over 1 million H1B visa holders in the United States who are waiting for their green cards. This backlog is unfair and it’s holding back USA economy. Congress must act now to address this crisis. #GreenCardBacklog #H1B
— noman pouigt (@pouigt) August 11, 2023
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Mon, 14 August 23