ಅಮೆರಿಕಾ ದೇಶದ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಟಿವಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾಡೆರ್ನಾ ಕೊರೊನಾ ಲಸಿಕೆ ಸ್ವೀಕರಿಸಿ ತಮ್ಮ ಜವಾಬ್ದಾರಿ ಮೆರೆದಿದ್ದಾರೆ. ಕೊರೊನಾ ಲಸಿಕೆ ಕುರಿತು ಸಾರ್ವಜನಿಕರಲ್ಲಿ ನಂಬಿಕೆ ಮತ್ತು ಧೈರ್ಯ ಮೂಡಿಸುವ ಸಲುವಾಗಿ ಕಮಲಾ ಈ ರೀತಿಯ ಕ್ರಮ ಅನುಸರಿಸಿದ್ದು, ಎಲ್ಲರೂ ಕೊರೊನಾಕ್ಕೆ ಲಸಿಕೆ ಪಡೆಯುವಂತೆ ಮನವಿಯನ್ನೂ ಮಾಡಿದ್ದಾರೆ.
ಅಮೆರಿಕಾದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಕಳೆದ ವಾರವಷ್ಟೇ ಕೊರೊನಾ ಲಸಿಕೆ ಸ್ವೀಕರಿಸಿದ್ದರು. ಅದಾಗಿ ಒಂದೇ ವಾರದಲ್ಲಿ ಕಮಲಾ ಹ್ಯಾರಿಸ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕ್ಯಾಮೆರಾ ಮುಂದೆಯೇ ಲಸಿಕೆ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಮಲಾ ಹ್ಯಾರಿಸ್ ಲಸಿಕೆ ಸ್ವೀಕರಿಸುವುದು ನೋವುಂಟು ಮಾಡಿಲ್ಲ. ಪ್ರತಿಯೊಬ್ಬ ಅಮೆರಿಕಾ ಪ್ರಜೆಯೂ ಅವರ ಹಾಗೂ ಅವರ ಕುಟುಂಬಸ್ಥರ ಆರೋಗ್ಯ ರಕ್ಷಣೆಗಾಗಿ ಲಸಿಕೆ ಸ್ವೀಕರಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಲಸಿಕೆಯ ಕುರಿತು ಯಾವುದೇ ಅನುಮಾನ ಬೇಡ. ಇವುಗಳನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ಮೇಲೆ ಸಂಪೂರ್ಣ ಭರವಸೆ ಇದೆ ಎಂದು ಕಮಲಾ ಹ್ಯಾರಿಸ್ ಧೈರ್ಯ ತುಂಬಿದ್ದಾರೆ. ಸದ್ಯ ಅಮೆರಿಕಾದಲ್ಲಿ ಮಾಡೆರ್ನಾ ಮತ್ತು ಫೈಜರ್-ಬಯೋಎನ್ಟೆಕ್ ಕೊರೊನಾ ಲಸಿಕೆ ಬಳಕೆಗೆ ಅನುಮತಿ ಸಿಕ್ಕಿದ್ದು, ಈ ಲಸಿಕೆಗಳು ಶೇ. 95ರಷ್ಟು ಪರಿಣಾಮಕಾರಿ ಎಂದು ಅಧ್ಯಯನಗಳು ತಿಳಿಸಿವೆ.
EXPLAINER | ಕೊರೊನಾದೊಂದಿಗೆ ಒಂದು ವರ್ಷದ ಸಾಂಗತ್ಯ.. ಇನ್ನೇನಿದ್ದರೂ ಜೊತೆಯಾಗಿ ಬದುಕುವುದು ಅನಿವಾರ್ಯ