Mary Milben: ರಾಷ್ಟ್ರಗೀತೆ ಹಾಡಿದ ನಂತರ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಅಮೆರಿಕ ಗಾಯಕಿ ಮೇರಿ ಮಿಲ್ಬೆನ್

|

Updated on: Jun 24, 2023 | 11:46 AM

ಪ್ರಧಾನಿ ಮೋದಿ ಅವರ ಅಮೆರಿಕದಲ್ಲಿ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಭಾರತದ ರಾಷ್ಟ್ರಗೀತೆ (ಜನಗಣ ಮನ) ಹಾಡಿದ ಅಮೇರಿಕನ್ ಗಾಯಕಿ ಮೇರಿ ಮಿಲ್ಬೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ.

Mary Milben: ರಾಷ್ಟ್ರಗೀತೆ ಹಾಡಿದ ನಂತರ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಅಮೆರಿಕ ಗಾಯಕಿ ಮೇರಿ ಮಿಲ್ಬೆನ್
ಸಾಂದರ್ಭಿಕ ಚಿತ್ರ
Follow us on

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಮಹತ್ವದ ಮತ್ತು ಗೌರವದ ಸ್ವಾಗತ ಸಿಕ್ಕಿದೆ. ಎಲ್ಲ ಕಡೆ ಭಾರತದ ಧ್ವಜ ಕಂಗೊಳಿಸುತ್ತಿದೆ. ಇದರ ಜತೆಗೆ, ಅಮೆರಿಕ ಮತ್ತು ಭಾರತ ಸಂಬಂಧವನ್ನು ಗಟ್ಟಿಗೊಳಿಸುತ್ತಿದೆ. ಒಂದು ಕಡೆಯಿಂದ ಮೋದಿ ಅಲ್ಲಿನ ಅನೇಕ ತಜ್ಙರ ಜತೆಗೆ, ಆರ್ಥಿಕ, ಭದ್ರತೆ ವಿಚಾರವಾಗಿಯು ಸಭೆಯನ್ನು ನಡೆಸಿದ್ದಾರೆ, ಜತೆಗೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಹಲವು ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ, ಆದರೆ ಈ ಬಾರಿ ಅವರು ನೀಡಿದ ಭೇಟಿ ಬಹಳ ಮಹತ್ವದಾಗಿತ್ತು. ಅಲ್ಲಿನ ಅವರನ್ನು ಪ್ರೀತಿಸುವ, ಗೌರವಿಸುವ ಕ್ಷಣ, ಎಲ್ಲವೂ ಅದ್ಭುತದಂತೆ ಕಾಣುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂದತೆ ಅಮೇರಿಕನ್ ಗಾಯಕಿ ಮೇರಿ ಮಿಲ್ಬೆನ್ (Mary Milben) ಮೋದಿ ಜತೆಗೆ ನಡೆದುಕೊಂಡ ರೀತಿ, ಭಾರತ ವಿಶ್ವಗುರು ಆಗುತ್ತಿದೆ ಎಂಬದಂತೆ ಇಂತಹ ಘಟನೆಗಳು ಅಕ್ಷರಃ ಸಾಕ್ಷಿ , ಇದು ಭಾರತ ಕಲಿಸಿದ ಸಂಸ್ಕೃತಿ ಎಂದು ಹೇಳಲಾಗುತ್ತಿದೆ.

ಇಂದು ಪ್ರಧಾನಿ ಮೋದಿ ಅಮೆರಿಕದಿಂದ ಈಜಿಪ್ಟ್​​ನತ್ತ ಪ್ರಯಣ ಬೆಳಸಲಿದ್ದಾರೆ, ಈ ಸಮಯದಲ್ಲಿ ಪ್ರಧಾನಿ ಮೋದಿ ಅವರ ಅಮೆರಿಕದಲ್ಲಿ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಭಾರತದ ರಾಷ್ಟ್ರಗೀತೆ (ಜನಗಣ ಮನ) ಹಾಡಿದ ಅಮೇರಿಕನ್ ಗಾಯಕಿ ಮೇರಿ ಮಿಲ್ಬೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. 38 ವರ್ಷದ ಮೇರಿ ಮಿಲ್ಬೆನ್ ಅವರು ವಾಷಿಂಗ್ಟನ್ DCಯಲ್ಲಿನ ರೊನಾಲ್ಡ್ ರೇಗನ್ ಬಿಲ್ಡಿಂಗ್ ಮತ್ತು ಇಂಟರ್ನ್ಯಾಷನಲ್ ಟ್ರೇಡ್ ಸೆಂಟರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಇಂಡಿಯನ್ ಕಮ್ಯುನಿಟಿ ಫೌಂಡೇಶನ್ (USICF) ಆಯೋಜಿಸಿದ ಆಹ್ವಾನ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರಗೀತೆಯನ್ನು ಹಾಡಿದ್ದಾರೆ.

ಇದನ್ನೂ ಓದಿ: ಬೈಡನ್ ಪತ್ನಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ವಜ್ರದ ಉಡುಗೊರೆ ಅಂತಿಂಥದ್ದಲ್ಲ, ಏನಿದರ ವಿಶೇಷ?

ಆಫ್ರಿಕನ್-ಅಮೇರಿಕನ್ ಹಾಲಿವುಡ್ ನಟಿ ಮತ್ತು ಗಾಯಕಿ, ಮೇರಿ ಮಿಲ್ಬೆನ್ ಅವರು ಭಾರತದಲ್ಲಿ ಈಗಾಗಲೇ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಭಾರತದ ರಾಷ್ಟ್ರಗೀತೆಯಾದ ಜನಗಣ ಮನ ಮತ್ತು ಓಂ ಜೈ ಜಗದೀಶ್ ಹರೇ ಗೀತೆಗಳ ಗಾಯನದಿಂದ ಭಾರತದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರಗೀತೆಯನ್ನು ಹಾಡುವ ಮೊದಲು, ಮಿಸ್ ಮಿಲ್ಬೆನ್ ಅವರು ಪ್ರಧಾನಿ ಮೋದಿಯವರ ಬಗ್ಗೆ ಗೌರವದ ಮಾತಗಳನ್ನು ಹಾಡಿದ್ದರು.

ಅಮೆರಿಕದ ರಾಷ್ಟ್ರಗೀತೆ ಮತ್ತು ದೇಶಭಕ್ತಿಯ ಹಾಡುಗಳನ್ನು ಸತತ ನಾಲ್ಕು ಯುಎಸ್ ಅಧ್ಯಕ್ಷರ ಮುಂದೆ ಹಾಡಿರುವ ನಾನು ಪ್ರಧಾನಿ ಮೋದಿ, ಭಾರತ ಮತ್ತು ಅಮೆರಿಕದ ಗೌರವಾರ್ಥ ನೀಡಲು ನಾನು ನನ್ನ ಕುಟುಂಬವನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದರು.

ಅಮೆರಿಕನ ಮತ್ತು ಭಾರತದ ಗೀತೆಗಳು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಆದರ್ಶಗಳನ್ನು ಹೇಳುತ್ತವೆ ಮತ್ತು ಇದು ಯುಎಸ್-ಭಾರತದ ಸಂಬಂಧದ ನಿಜವಾದ ಸಾರವಾಗಿದೆ. ಸ್ವತಂತ್ರ ರಾಷ್ಟ್ರವನ್ನು ಸ್ವತಂತ್ರ ಜನರಿಂದ ಮಾತ್ರ ವ್ಯಾಖ್ಯಾನಿಸಲಾಗುತ್ತದೆ ಎಂದು ಅವರು ಹೇಳಿದರು. ಪ್ರಧಾನಿ ಮೋದಿಯವರ ಆಧ್ಯಾತ್ಮಿಕ ಚಿಂತನೆ ಮತ್ತು ಅದರ ಮೇಲೆ ಅವರಿಗೆ ಇರುವ ನಂಬಿಕೆ ಜಗತ್ತನ್ನು ಸೆಳೆಯುತ್ತಿದೆ.

ಕಳೆದ ತಿಂಗಳು, ಮೋದಿಯವರ ಪಪುವಾ ನ್ಯೂಗಿನಿಯಾ ಭೇಟಿಯ ಸಂದರ್ಭದಲ್ಲಿ , ಪೆಸಿಫಿಕ್ ದ್ವೀಪ ರಾಷ್ಟ್ರದ ಪ್ರಧಾನಿ ಅವರು ಗೌರವ ಸೂಚಕವಾಗಿ ಪ್ರಧಾನಿ ಮೋದಿಯವರ ಪಾದಗಳನ್ನು ಸ್ಪರ್ಶಿಸಿದ್ದರು. ಅವರು ದೇಶದಿಂದ ನಿರ್ಗಮಿಸುವಾಗ ಇದೇ ರೀತಿಯ ಗೌರವ ವ್ಯಕ್ತವಾಗಿತ್ತು, ವಿಮಾನ ನಿಲ್ದಾಣದಲ್ಲಿ ಒಬ್ಬ ಮಹಿಳೆ, ಒಬ್ಬ ಪ್ರಧಾನಿಯ ಮುಂದೆ ತಲೆಗಳನ್ನು ಬಾಗಿ ಪಾದ ಮುಟ್ಟಿ ನಮಸ್ಕರಿಸುವ ದೃಶ್ಯ ಕಂಡುಬಂದಿದೆ. ಪ್ರಧಾನಿ ಮೋದಿ ತಕ್ಷಣವೇ ಕೈಮುಗಿದು ನಮಸ್ಕರಿಸುವ ಮೂಲಕ ಅವರ ಇಂಗಿತವನ್ನು ವ್ಯಕ್ತಪಡಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ