ಅಮೆರಿಕದ ಅತ್ಯಂತ ಎತ್ತರದ ವ್ಯಕ್ತಿ, 38 ವರ್ಷದ ಇಗೋರ್​ ವೊವ್ಕೋವಿನ್ಸ್​​ಕಿ ಸಾವು; ತಾಯಿಯಿಂದ ಭಾವನಾತ್ಮಕ ಪೋಸ್ಟ್​

ಇಗೋರ್​ ವೊವ್ಕೋವಿನ್ಸ್​​ಕಿರಿಗೆ ಎತ್ತರವೂ ತೊಡಕಾಗಿತ್ತು. ಪಿಟ್ಯೂಟರಿ ಗ್ರಂಥಿಯ ಮೇಲೆ ಒತ್ತಡ ಹೆಚ್ಚಾಗಿ, ಅಗತ್ಯಕ್ಕಿಂತ ಹೆಚ್ಚಾಗಿ ಬೆಳವಣಿಗೆ ಪೂರಕ ಹಾರ್ಮೋನುಗಳು ಬಿಡುಗಡೆಯಾಗುತ್ತಿದ್ದವು.

ಅಮೆರಿಕದ ಅತ್ಯಂತ ಎತ್ತರದ ವ್ಯಕ್ತಿ, 38 ವರ್ಷದ ಇಗೋರ್​ ವೊವ್ಕೋವಿನ್ಸ್​​ಕಿ  ಸಾವು; ತಾಯಿಯಿಂದ ಭಾವನಾತ್ಮಕ ಪೋಸ್ಟ್​
ಇಗೋರ್​ ವೊವ್ಕೋವಿನ್ಸ್​​ಕಿ
Edited By:

Updated on: Aug 25, 2021 | 1:38 PM

ಅಮೆರಿಕದ ಅತ್ಯಂತ ಎತ್ತರದ ವ್ಯಕ್ತಿಯಾಗಿ ದಾಖಲೆ ಬರೆದಿದ್ದ ಇಗೋರ್​ ವೊವ್ಕೋವಿನ್ಸ್​​ಕಿ ತಮ್ಮ 38ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 38 ವರ್ಷ ವಯಸ್ಸಾಗಿತ್ತು. ಇಗೋರ್​ 7 ಅಡಿ 8 ಇಂಚು (234.5 ಸಿಎಂ)ಗಳಷ್ಟು ಎತ್ತರವಾಗಿದ್ದರು. ಈ ಎತ್ತರದಿಂದಲೇ ಅವರು ಖ್ಯಾತಿ ಗಳಿಸಿದ್ದರು. ಆದರೆ ದುರ್ದೈವವೆಂಬಂತೆ ಸಣ್ಣ ವಯಸ್ಸಿನಲ್ಲೇ ಕೊನೆಯುಸಿರೆಳೆದಿದ್ದಾರೆ.

ಇಗೋರ್​ ಸಾವಿನ ಅವರ ತಾಯಿ ಸ್ವೆಟ್ಲಾನಾ ವೊವ್ಕೋವಿನ್ಸ್​​ಕಿ ಸಾರ್ವಜನಿಕರಿಗೆ ತಿಳಿಸಿದ್ದಾರೆ. ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದ ಇಗೋರ್​, ಕೊನೇ ಕ್ಷಣದವರೆಗೂ ತಾನು ಬದುಕುತ್ತೇನೆಂಬ ಭರವಸೆಯಲ್ಲೇ ಇದ್ದರು ಎಂದು ಅವರ ತಾಯಿ ಸ್ವೆಟ್ಲಾನಾ ತುಂಬ ನೋವಿನಿಂದ ಹೇಳಿಕೊಂಡಿದ್ದಾರೆ. ಇಗೋರ್​ ಆಗಸ್ಟ್​ 20ರಂದು ರಾತ್ರಿ 11 ಗಂಟೆಗೆ ಮೃತಪಟ್ಟಿದ್ದಾನೆ. ಕೊನೆವರೆಗೂ ಅವನೊಂದಿಗೆ ಅಣ್ಣ ಒಲೆಹ್ ಮತ್ತು ಅವನ ಪತ್ನಿ, ಮಕ್ಕಳಿದ್ದರು.​ ಇಗೋರ್​ ಕೊನೇದಾಗಿ ಸೇವಿಸಿದ್ದು, ಕೈವ್ ಕೇಕ್ ತುಂಡು ಮತ್ತು ಫ್ಯಾಂಟಾವನ್ನು ಎಂದು ಸ್ವೆಟ್ಲಾನಾ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಇಗೋರ್​​ ಹುಟ್ಟಿದ್ದು ಸೆಪ್ಟೆಂಬರ್​ 1982ರಲ್ಲಿ. ಇವರು ಉಕ್ರೇನಿಯನ್​-ಅಮೆರಿಕನ್​ ಆಗಿದ್ದು ಕಾನೂನು ಅಭ್ಯಾಸ ಮಾಡಿದ್ದರು. ಬಹುದೊಡ್ಡ ಲಾಯರ್​ ಆಗಬೇಕೆಂಬ ಕನಸು ಕಂಡಿದ್ದರು. ಅಷ್ಟೇ ಅಲ್ಲ, ನಟನೆ ಕೂಡ ಇವರಿಗೆ ಒಲಿದಿತ್ತು. 7 ಅಡಿ 8 ಇಂಚುಗಳಷ್ಟು ಎತ್ತರದೊಂದಿಗೆ ಅಮೆರಿಕದ ಅತ್ಯಂತ ಎತ್ತರದ ವ್ಯಕ್ತಿ ಎನಿಸಿದ್ದ ಜಾರ್ಜ್​ ಬೆಲ್​​ರನ್ನು ಹಿಂದಿಕ್ಕಿ, ಇವರು ಆ ಹೆಗ್ಗಳಿಕೆ ಪಾತ್ರರಾಗಿದ್ದರು. ಈ ಮೂಲಕ ಗಿನ್ನೀಸ್​ ದಾಖಲೆಯನ್ನೂ ನಿರ್ಮಿಸಿದ್ದರು.

ಆದರೆ ಅವರ ಎತ್ತರವೂ ಅವರಿಗೆ ತೊಡಕಾಗಿತ್ತು. ಪಿಟ್ಯೂಟರಿ ಗ್ರಂಥಿಯ ಮೇಲೆ ಒತ್ತಡ ಹೆಚ್ಚಾಗಿ, ಅಗತ್ಯಕ್ಕಿಂತ ಹೆಚ್ಚಾಗಿ ಬೆಳವಣಿಗೆ ಪೂರಕ ಹಾರ್ಮೋನುಗಳು ಬಿಡುಗಡೆಯಾಗುತ್ತಿದ್ದವು. ಅದಕ್ಕಾಗಿ ಅವರು 1989ರಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು. 27ನೇ ವರ್ಷದಲ್ಲಿ ಅಮೆರಿಕದ ಅತ್ಯಂತ ವ್ಯಕ್ತಿ ಎಂದು ಗುರುತಿಸಲ್ಪಟ್ಟರು. ಹಾಗೇ, ಅದಾದ ವರ್ಷಗಳ ಬಳಿಕ ಅಂದರೆ ಕಳೆದ ವರ್ಷ ತಮ್ಮ ಯೂಟ್ಯೂಬ್ ಚಾನಲ್​ ಮೂಲಕ ಹೃದಯರೋಗಕ್ಕೆ ಒಳಗಾಗಿರುವುದನ್ನು ಬಹಿರಂಗಪಡಿಸಿದ್ದರು.

ಇದನ್ನೂ ಓದಿ: ಯುಪಿಎ ಸರ್ಕಾರ ಇದ್ದಿದ್ದರೆ ಭಾರತೀಯರ ಬದಲು ತಾಲಿಬಾನಿಗಳು ಬರುತ್ತಿದ್ದದರು; ನಳಿನ್ ಕುಮಾರ್ ಕಟೀಲ್

ರೂಲ್ಸ್ ಮಾಡಿದವರಿಂದಲೇ ರೂಲ್ಸ್ ಬ್ರೇಕ್! ಮಂಡ್ಯದಲ್ಲಿ ಬಿಜೆಪಿ ನಾಯಕರಿಂದ ಬೃಹತ್ ಸಭೆ

Published On - 1:35 pm, Wed, 25 August 21