AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi in France: ಭಾರತ್ ಮಾತಾ ಕೀ ಜೈ ಘೋಷಣೆ, ಹಾಡಿನ ಮೂಲಕ ಪ್ರಧಾನಿ ಮೋದಿಗೆ ಪ್ಯಾರಿಸ್​​ನಲ್ಲಿ ಭವ್ಯ ಸ್ವಾಗತ

ಪ್ಯಾರಿಸ್‌ನಲ್ಲಿರುವ ಭಾರತೀಯ ವಲಸಿಗರಿಂದ ಆತ್ಮೀಯ ಸ್ವಾಗತ ದೊರೆಯಿತು! ಪ್ರಪಂಚದಾದ್ಯಂತ, ನಮ್ಮ ಸಮುದಾಯದವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಶ್ರದ್ಧೆ ಮತ್ತು ಶ್ರಮಶೀಲ ಸ್ವಭಾವಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

PM Modi in France: ಭಾರತ್ ಮಾತಾ ಕೀ ಜೈ ಘೋಷಣೆ, ಹಾಡಿನ ಮೂಲಕ ಪ್ರಧಾನಿ ಮೋದಿಗೆ ಪ್ಯಾರಿಸ್​​ನಲ್ಲಿ ಭವ್ಯ ಸ್ವಾಗತ
ಪ್ರಧಾನಿ ಮೋದಿ ಪ್ಯಾರಿಸ್​​ನಲ್ಲಿ ಭಾರತೀಯ ಸಮುದಾಯದವರನ್ನು ಬೇಟಿಯಾದರು (ಚಿತ್ರ; ಪ್ರಧಾನಿಯವರ ಟ್ವಿಟರ್ ಖಾತೆ)Image Credit source: Twitter
Ganapathi Sharma
|

Updated on: Jul 13, 2023 | 8:08 PM

Share

ನವದೆಹಲಿ: ಎರಡು ದಿನಗಳ ಅಧಿಕೃತ ಭೇಟಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ಫ್ರಾನ್ಸ್‌ಗೆ (France) ತಲುಪಿದ್ದಾರೆ. ಅವರನ್ನು ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಎಲಿಜಬೆತ್ ಬೋರ್ನ್ ಸ್ವಾಗತಿಸಿದರು. ಪ್ಯಾರಿಸ್‌ ತಲುಪಿದ ಬೆನ್ನಲ್ಲೇ ಮೋದಿ ಅವರು, ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿಯಾದರು. ಇದೇ ವೇಳೆ, ‘ಭಾರತ್ ಮಾತಾ ಕಿ ಜೈ’ ಘೋಷಣೆ ಮುಗಿಲುಮುಟ್ಟಿತು.

ಭಾರತೀಯ ಸಮುದಾಯದವರ ಭೇಟಿ ವೇಳೆ ಮಹಿಳೆಯೊಬ್ಬರು ಪ್ರಧಾನಿ ಮೋದಿ ಅವರಿಗೆ ಹಾಡು ಹಾಡುವ ಮೂಲಕ ಸ್ವಾಗತ ಕೋರಿದರು. ಮೋದಿ ಅವರ ಭೇಟಿಯಿಂದ ಭಾರತೀಯ ಮೂಲದ ಜನರಲ್ಲಿ ಉತ್ಸಾಹ ಗರಿಗೆದರಿತು.

ಪ್ಯಾರಿಸ್‌ನಲ್ಲಿರುವ ಭಾರತೀಯ ವಲಸಿಗರಿಂದ ಆತ್ಮೀಯ ಸ್ವಾಗತ ದೊರೆಯಿತು! ಪ್ರಪಂಚದಾದ್ಯಂತ, ನಮ್ಮ ಸಮುದಾಯದವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಶ್ರದ್ಧೆ ಮತ್ತು ಶ್ರಮಶೀಲ ಸ್ವಭಾವಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತ-ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲೇ ಮೋದಿ ಅವರು ಫ್ರಾನ್ಸ್​ಗೆ ಭೇಟಿ ನೀಡಿದ್ದಾರೆ. ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯ ಪ್ರಮುಖ ಅತಿಥಿಯಾಗಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ