ಮ್ಯಾನ್ಮಾರ್​​​ನಲ್ಲಿ ಮತ್ತೆ ಭೂಕಂಪನ, ಒಟ್ಟು 700ಕ್ಕೂ ಹೆಚ್ಚು ಜನ ಸಾವು, 1,670 ಜನರಿಗೆ ಗಾಯ

ಮತ್ತೆ ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿದೆ. ಮಧ್ಯ ರಾತ್ರಿ ಮತ್ತೆ ಭೂಕಂಪ ಸಂಭವಿಸಿದೆ. ಇದೀಗ ಒಟ್ಟು ಸಾವಿನ ಸಂಖ್ಯೆ 700ಕ್ಕೆ ದಾಟಿದೆ. 1,670 ಜನರು ಗಾಯಗೊಂಡಿದ್ದಾರೆ. ರಾಜಧಾನಿ ನೇಪಿಡಾವ್‌ನಲ್ಲಿರುವ ಆಸ್ಪತ್ರೆಯಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಹೆಚ್ಚಿನ ಜನ ಪ್ರಾಣ ಕಳೆದುಕೊಳ್ಳವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಂಗಾಳದ ಕೋಲ್ಕತ್ತಾ ಮತ್ತು ಮಣಿಪುರದ ಕೆಲವು ಭಾಗಗಳಲ್ಲಿ ಹಾಗೂ ಬಾಂಗ್ಲಾದೇಶದ ಢಾಕಾ ಮತ್ತು ಚಟ್ಟೋಗ್ರಾಮ್‌ನಲ್ಲಿಯೂ ಸಹ ಸೌಮ್ಯ ಕಂಪನಗಳು ವರದಿಯಾಗಿವೆ

ಮ್ಯಾನ್ಮಾರ್​​​ನಲ್ಲಿ ಮತ್ತೆ ಭೂಕಂಪನ, ಒಟ್ಟು 700ಕ್ಕೂ ಹೆಚ್ಚು ಜನ ಸಾವು, 1,670 ಜನರಿಗೆ ಗಾಯ
ಮ್ಯಾನ್ಮಾರ್‌ನಲ್ಲಿ ಭೂಕಂಪ

Updated on: Mar 29, 2025 | 9:41 AM

ಮ್ಯಾನ್ಮಾರ್‌ ಭೂಪಂಕದಿಂದ (Myanmar Earthquake) ಅಕ್ಷಶಃ ತತ್ತರಿಸಿ ಹೋಗಿದೆ. ಮಾರ್ಚ್​​​ 28ರಂದು ಮ್ಯಾನ್ಮಾರ್‌ನಲ್ಲಿ 7.7 ಮತ್ತು 6.4 ತೀವ್ರತೆಯ ಎರಡು ಸತತ ಭೂಕಂಪಗಳು ಸಂಭವಿಸಿದವು. ಈ ಪ್ರಬಲ ಭೂಕಂಪದಲ್ಲಿ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ಮುಖ್ಯಸ್ಥರು 144 ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು 730 ಜನರು ಗಾಯಗೊಂಡಿದರು . ಇದೀಗ ಮತ್ತೆ ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿದೆ. ಮಧ್ಯ ರಾತ್ರಿ ಮತ್ತೆ ಭೂಕಂಪ ಸಂಭವಿಸಿದೆ. ಇದೀಗ ಒಟ್ಟು ಸಾವಿನ ಸಂಖ್ಯೆ 700ಕ್ಕೆ ದಾಟಿದೆ. 1,670 ಜನರು ಗಾಯಗೊಂಡಿದ್ದಾರೆ. ರಾಜಧಾನಿ ನೇಪಿಡಾವ್‌ನಲ್ಲಿರುವ ಆಸ್ಪತ್ರೆಯಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಹೆಚ್ಚಿನ ಜನ ಪ್ರಾಣ ಕಳೆದುಕೊಳ್ಳವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಮುಸ್ಲಿಂ ಜನರಿಗೆ ಈಗಾಗಲೇ ಅವರ ಪುಣ್ಯ ಹಬ್ಬ ಪ್ರಾರಂಭವಾಗಿದೆ. ಈ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸಲು ಆಸ್ಪತ್ರೆಗಳನ್ನು, ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಭೂಕಂಪದಿಂದ ಮಸೀದಿಗಳು ಧ್ವಂಸ ಆಗಿದೆ. ಅದಕ್ಕಾಗಿ ಈ ಕ್ರಮವನ್ನು ಅನುಸರಿಸಿಕೊಂಡಿದ್ದಾರೆ.

ಸತ್ತವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿರುವ ಮ್ಯಾನ್ಮಾರ್ ಜುಂಟಾ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್, ‘ತುರ್ತು ಪರಿಸ್ಥಿತಿ’ ಘೋಷಿಸಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಇನ್ನು ನಮ್ಮ ಸಹಾಯಕ್ಕೆ ಬರುವಂತೆ ಬೇರೆ ಬೇರೆ ದೇಶಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ಉತ್ತರ ಥೈಲ್ಯಾಂಡ್‌ನಲ್ಲೂ ಕಂಪನದ ಅನುಭವವಾಯಿತು, ಅಲ್ಲಿ ಕೆಲವು ಮೆಟ್ರೋ ಮತ್ತು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರು ತುರ್ತು ಪರಿಶೀಲನಾ ಸಭೆ ನಡೆಸಲು ಫುಕೆಟ್‌ಗೆ ಅಧಿಕೃತ ಭೇಟಿ ನೀಡಬೇಕಿತ್ತು ಅದನ್ನು ಕೂಡ ರದ್ದು ಮಾಡಿದ್ದಾರೆ. ಇದೀಗ ಥೈಲ್ಯಾಂಡ್‌ ನಗರದಲ್ಲಿ ‘ತುರ್ತು ಪರಿಸ್ಥಿತಿ’ ಘೋಷಿಸಿದ್ದಾರೆ.

ಇದನ್ನೂ ಓದಿ
ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪ; 144 ಜನ ಸಾವು, 730 ಮಂದಿಗೆ ಗಾಯ
ನಿಮ್ಮ ಅಮೆರಿಕ ವೀಸಾ ಸಂದರ್ಶನ ರದ್ದಾಗಿದೆಯೇ? ಕಾರಣ ಇಲ್ಲಿದೆ ನೋಡಿ
ಅಮೆರಿಕದೊಂದಿಗಿನ ಹಳೆಯ ಸಂಬಂಧ ಕೊನೆಗೊಂಡಿದೆ: ಕೆನಡಾ ಪ್ರಧಾನಿ ಮಾರ್ಕ್​
ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?

ಥೈಲ್ಯಾಂಡ್​​​ನಲ್ಲಿ ಈವರೆಗೆ 8 ಸಾವುಗಳು ಸಂಭವಿಸಿದ್ದು, ಚೀನಾದ ಯುನ್ನಾನ್ ಪ್ರಾಂತ್ಯದಲ್ಲೂ ಬಲವಾದ ಕಂಪನಗಳು ವರದಿಯಾಗಿವೆಚೀನಾ ಭೂಕಂಪ ಜಾಲ ಕೇಂದ್ರವು 7.9 ತೀವ್ರತೆಯ ಭೂಕಂಪನ ವರದಿ ಮಾಡಿದೆ. ಬಂಗಾಳದ ಕೋಲ್ಕತ್ತಾ ಮತ್ತು ಮಣಿಪುರದ ಕೆಲವು ಭಾಗಗಳಲ್ಲಿ ಹಾಗೂ ಬಾಂಗ್ಲಾದೇಶದ ಢಾಕಾ ಮತ್ತು ಚಟ್ಟೋಗ್ರಾಮ್‌ನಲ್ಲಿಯೂ ಸಹ ಸೌಮ್ಯ ಕಂಪನಗಳು ವರದಿಯಾಗಿವೆ, ಅಲ್ಲಿ 4.4 ತೀವ್ರತೆಯ ಕಂಪನಗಳು ದಾಖಲಾಗಿವೆ.ವಿಯೆಟ್ನಾಂ ಮತ್ತು ಬಾಂಗ್ಲಾದೇಶದಲ್ಲೂ ಭೂಕಂಪನ ಆಗಿದೆ. ಈ ಬಗ್ಗೆ ಅನೇಕ ವಿಡಿಯೋಗಳು ಕೂಡ ವೈರಲ್​​ ಆಗಿದೆ.

ಇದನ್ನೂ ಓದಿ: ಭೂಕಂಪದಿಂದ ಮ್ಯಾನ್ಮಾರ್, ಥೈಲ್ಯಾಂಡ್​ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಚೀನಾ ಅಥವಾ ಬೇರೆಡೆಯಿಂದ ಯಾವುದೇ ಸಾವುಗಳು ವರದಿಯಾಗಿಲ್ಲ. ಇನ್ನು ತಮ್ಮ ರಾಜ್ಯಕ್ಕೆ ಹಾಗೂ ಭೂಕಂಪ ಸಂಭವಿಸಿದ ಮ್ಯಾನ್ಮಾರ್‌ ಹಾಗೂ ಥೈಲ್ಯಾಂಡ್​​​ಗೆ ಅಗತ್ಯ ಸಹಾಯಗಳನ್ನು ಬೇಕಾದರೆ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದೇನೆನಮ್ಮ ಅಧಿಕಾರಿಗಳನ್ನು ಸನ್ನದ್ಧರಾಗಿರಲು ಕೇಳಿಕೊಂಡಿದ್ದೇವೆ ಎಂದು ಮೋದಿ ತಮ್ಮ ಎಕ್ಸ್​​ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಇದರ ಜತೆಗೆ ಯುರೋಪಿಯನ್ ರಾಷ್ಟ್ರಗಳ ನಾಯಕರು ಸಹ ಸಹಾಯವನ್ನು ನೀಡಿದ್ದಾರೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ