ಇಸ್ತಾಂಬುಲ್: 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡು ಪ್ರಬಲ ಭೂಕಂಪಗಳ ನಂತರ, ಸೋಮವಾರ ಮಧ್ಯ ಟರ್ಕಿಯಲ್ಲಿ (Turkey) 6.0 ತೀವ್ರತೆಯ ಮತ್ತೊಂದು ಭೂಕಂಪ (Earthquake) ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ತಿಳಿಸಿದೆ. ವರದಿಗಳ ಪ್ರಕಾರ, ಎರಡು ಬೃಹತ್ ಭೂಕಂಪಗಳು ಆಗ್ನೇಯ ಟರ್ಕಿ ಮತ್ತು ಸಿರಿಯಾದಲ್ಲಿ ಹಲವಾರು ಕಟ್ಟಡಗಳನ್ನು ನೆಲಸಮ ಮಾಡಿದ್ದು ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಸಿರಿಯಾದ ರಾಜ್ಯ ದೂರದರ್ಶನದ ಪ್ರಕಾರ, ಉತ್ತರ ನಗರ ಅಲೆಪ್ಪೊ ಮತ್ತು ಕೇಂದ್ರ ನಗರವಾದ ಹಮಾದಲ್ಲಿ ಕಟ್ಟಡಗಳು ಕುಸಿದಿವೆ.ಇದಲ್ಲದೆ, ಸಿರಿಯಾದ ರಾಜ್ಯ ಸುದ್ದಿ ಸಂಸ್ಥೆ 320 ಕ್ಕೂ ಹೆಚ್ಚು ಸಾವುಗಳು ಮತ್ತು 1,000 ಕ್ಕೂ ಹೆಚ್ಚು ಗಾಯಗಳನ್ನು ವರದಿ ಮಾಡಿದೆ.
#TurkeyEarthquake | Another earthquake of magnitude 6.0 strikes central Turkey, says USGS
This is the Third earthquake in #Turkey after two powerful earthquakes in less than 24 hours. pic.twitter.com/YZyEiB4qC3
— ANI (@ANI) February 6, 2023
ವೈಟ್ ಹೆಲ್ಮೆಟ್ಸ್ ರಕ್ಷಣಾ ಸಂಸ್ಥೆಯು ಸಿರಿಯಾದಲ್ಲಿ ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ 147 ಜನರು ಸಾವನ್ನಪ್ಪಿದ್ದಾರೆ ಮತ್ತು 340 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದೆ. ಅದೇ ವೇಳೆ ನೂರಾರು ಜನರು ಇನ್ನೂ ಅವಶೇಷಗಳ ಅಡಿಯಲ್ಲಿ ಹೂತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ದುರಂತದ ನಡುವೆ ಪ್ರಧಾನಿ ನರೇಂದ್ರ ಮೋದಿ “ಭಾರತವು ಟರ್ಕಿಯ ಜನರ ಜತೆ ನಿಲ್ಲುತ್ತದೆ. ಈ ದುರಂತವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡಲು ಸಿದ್ಧವಾಗಿದೆ” ಎಂದು ಹೇಳಿದ್ದಾರೆ. ರಕ್ಷಣಾ ತಂಡಗಳು, ವೈದ್ಯಕೀಯ ತಂಡಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಸರ್ಕಾರ ನಿರ್ಧರಿಸಿದೆ.
aerial images from #Turkey post the massive #Earthquake today
Just heartbreaking pic.twitter.com/WQBbwnLBF8
— Abier (@abierkhatib) February 6, 2023
7.8 ತೀವ್ರತೆಯ ಭೂಕಂಪವು ಸಿರಿಯನ್ ಗಡಿಯಿಂದ 90 ಕಿಲೋಮೀಟರ್ ದೂರದಲ್ಲಿರುವ ಗಾಜಿಯಾಂಟೆಪ್‌ನಲ್ಲಿ ಕೇಂದ್ರಬಿಂದುವನ್ನು ಹೊಂದಿತ್ತು. ಈ ಪ್ರದೇಶದಲ್ಲಿ ಸಿರಿಯನ್ ಅಂತರ್ಯುದ್ಧದಿಂದ ಲಕ್ಷಾಂತರ ನಿರಾಶ್ರಿತರು ನೆಲೆಸಿದ್ದಾರೆ. ದೂರದ ಕೈರೋದವರೆಗೂ ಭೂಕಂಪದ ಅನುಭವವಾಗಿದೆ.
ಇದನ್ನೂ ಓದಿ: Turkey Earthquake: ಟರ್ಕಿ ಭೂಕಂಪದಲ್ಲಿ 912 ಮಂದಿ ಸಾವು; ರಕ್ಷಣಾ ಕಾರ್ಯ, ವೈದ್ಯಕೀಯ ಸಹಾಯ ನೀಡಲಿದೆ ಭಾರತ
ಸೋಮವಾರ ಬೆಳಿಗ್ಗೆ ನ್ಯೂಯಾರ್ಕ್‌ನ ಉಪನಗರವಾದ ಬಫಲೋದಲ್ಲಿ ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ. ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಯುನೈಟೆಡ್ ಸ್ಟೇಟ್ಸ್ನಲ್ಲಿ ಸಣ್ಣ ಭೂಕಂಪನದ ಕೇಂದ್ರಬಿಂದು ಪಶ್ಚಿಮ ಸೆನೆಕಾ ಆಗಿತ್ತು. ಆದಾಗ್ಯೂ, ನಯಾಗರಾ ಜಲಪಾತ ಮತ್ತು ಆರ್ಚರ್ಡ್ ಪಾರ್ಕ್ ಪಟ್ಟಣದ ಬಳಿ ಕಂಪನದ ಅನುಭವಕ್ಕೆ ಬಂದಿದೆ. ಬಫಲೋದಲ್ಲಿರುವ ನನ್ನ ಮನೆಗೆ ಕಾರು ಡಿಕ್ಕಿ ಹೊಡೆದಂತೆ ಭಾಸವಾಯಿತು. ನಾನು ಹಾಸಿಗೆಯಿಂದ ಜಿಗಿದಿದ್ದೇನೆ ಎಂದು ಎರಿ ಕೌಂಟಿ ಕಾರ್ಯನಿರ್ವಾಹಕ ಮಾರ್ಕ್ ಪೊಲೊನ್ಕಾರ್ಜ್ ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:01 pm, Mon, 6 February 23