ಮುಂಬೈ: ಖ್ಯಾತ ಐಫೋನ್ ಮೊಬೈಲ್ ತಯಾರಿಕಾ ಕಂಪನಿ ಌಪಲ್ Apple Inc ಈಗ ವಿಶ್ವದಲ್ಲಿ ಕೆಲವೇ ಕೆಲ ಅತ್ಯಂತ ಶ್ರೀಮಂತ ಕಂಪನಿಗಳ ಪಟ್ಟಿ ಸೇರಿದೆ. ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಅದರ ಷೇರು ಬೆಲೆ ಎರಡು ಟ್ರಿಲಿಯನ್ ಅಮೆರಿಕನ್ ಡಾಲರ್ ದಾಟಿದೆ.
ಹೌದು ನಂಬಲಿಕ್ಕೆ ಅಸಾಧ್ಯವಾದರೂ ಇದು ಸತ್ಯ. ಌಪಲ್ ಕಂಪನಿಯ ಈಗಿನ ಷೇರು ಮಾರುಕಟ್ಟೆ ಬೆಲೆ ಎರಡು ಟ್ರಿಲಿಯನ್ ದಾಟಿದೆ. ಈ ಸಾಧನೆ ಮಾಡಿದ ಎರಡನೇ ಕಂಪನಿ ಎಂಬ ಹೆಗ್ಗಳಿಗೆ ಌಪಲ್ ಈಗ ಪಾತ್ರವಾಗಿದೆ. ಸೌದಿ ಅರೆಬಿಯಾದ ಸೌದಿ ಅಱಮ್‌ಕೋ ಇಂಥ ಸಾಧನೆ ಮಾಡಿದ ಮತ್ತೊಂದು ಕಂಪನಿ.
ಈ ರಾಷ್ಟ್ರಗಳ ಆರ್ಥಿಕತೆಗಿಂತಲೂ ಌಪಲ್ ಆರ್ಥಿಕತೆ ಸೂಪರ್ ಸಾರ್ವಭೌಮ
ಅಂದ ಹಾಗೆ ಈಗೀನ ಷೇರು ಮಖಬೆಲೆಯೊಂದಿಗೆ ಌಪಲ್ ವಿಶ್ವದ ಪ್ರಮುಖ ರಾಷ್ಟ್ರಗಳಾದ ರಷ್ಯಾ, ಬ್ರೆಜಿಲ್, ಆಸ್ಟ್ರೇಲಿಯಾ, ಮೆಕ್ಸಿಕೋ, ಸೌದಿ ಅರೆಬಿಯಾ, ಇಂಡೋನೇಶಿಯಾ, ಕೆನಡಾ, ಟರ್ಕಿ ಸೇರಿದಂತೆ ಹಲವಾರು ದೇಶಗಳ ಜಿಡಿಪಿ ಅಂದ್ರೆ ಗ್ರಾಸ್ ಡೆವಲಪ್‌ಮೆಂಟ್ ರೇಟ್‌ಗಿಂತಲೂ ಹೆಚ್ಚಾಗಿದೆ. ಅಂದ್ರೆ ಸಾರ್ವಭೌಮ ರಾಷ್ಟ್ರಗಳ ಆರ್ಥಿಕತೆಗಿಂತಲೂ ಌಪಲ್ ಕಂಪನಿಯ ಆರ್ಥಿಕತೆ ಸೂಪರ್ ಆಗಿದೆ.
ಌಪಲ್ ಶೀಘ್ರದಲ್ಲೇ 5G ಮೊಬೈಲ್ ಬಿಡುಗಡೆ ಮಾಡಲಿದೆ. ಆಗ..!
ಇದು ಈಗಿನ ಕಥೆಯಾದ್ರೆ, ಌಪಲ್ ಕಂಪನಿ ಶೀಘ್ರದಲ್ಲಿಯೇ ಐಫೋನ್‌ನ 5G ಮೊಬೈಲ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಆಗ ಈ ಕಂಪನಿಯ ಷೇರ್‌ನ ಮುಖಬೆಲೆ ಇನ್ನಷ್ಟು ಹೆಚ್ಚಿಗೆಯಾಗುವ ನಿರೀಕ್ಷೆ ಇದೆ. ಹಾಗೇನಾದ್ರೂ ಆದ್ರೆ ಅಮೆರಿಕದ ಜಿಡಿಪಿಯನ್ನೂ ಹಿಂದಿಕ್ಕಿದರೆ ಅಚ್ಚರಿ ಪಡಬೇಕಿಲ್ಲ.
Published On - 2:01 pm, Thu, 20 August 20