ದಕ್ಷಿಣ ಅಮೆರಿಕದ ಟೆಕ್ಸಾಸ್ನಲ್ಲಿರುವ ಡೈರಿ ಫಾರ್ಮ್‌ನಲ್ಲಿ ಭಯಾನಕ ಸ್ಫೋಟ ಸಂಭವಿಸಿದ್ದು, 18 ಸಾವಿರ ಜಾನುವಾರುಗಳು ಮೃತಪಟ್ಟಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಟೆಕ್ಸಾಸ್ ಇತಿಹಾಸದಲ್ಲೇ ಭಯಾನಕ ಸ್ಫೋಟ ಎಂದು ಹೇಳಲಾಗಿದೆ, ದನಗಳ ಕೊಟ್ಟಿಗೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಜಾನುವಾರುಗಳು ಸಜೀವದಹನವಾಗಿವೆ. ಫಾರ್ಮ್ ಸ್ವಚ್ಛಗೊಳಿಸಲು ಎಷ್ಟು ದಿನಗಳನ್ನು ತೆಗೆದುಕೊಳ್ಳಬಹುದು ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಸೋಮವಾರ ರಾತ್ರಿ ಟೆಕ್ಸಾಸ್ ಪ್ಯಾನ್‌ಹ್ಯಾಂಡಲ್‌ನ ಡಿಮಿಟ್ ಪಟ್ಟಣದ ಸಮೀಪವಿರುವ ಸೌತ್‌ಫೋರ್ಕ್ ಡೈರಿ ಫಾರ್ಮ್‌ನಲ್ಲಿ ಸ್ಫೋಟ ಸಂಭವಿಸಿದೆ.
ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು, ಒಳಗೆ ಓರ್ವ ವ್ಯಕ್ತಿ ಸಿಲುಕಿಕೊಂಡಿದ್ದು, ವ್ಯಕ್ತಿಯನ್ನು ರಕ್ಷಿಸಿ ಲುಬ್ಬಾಕ್‌ನಲ್ಲಿರುವ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸ್ಫೋಟ ಮತ್ತು ಬೆಂಕಿಯ ಕಾರಣವು ಸ್ಪಷ್ಟವಾಗಿಲ್ಲ ಎಂದು ಮಿಲ್ಲರ್ ಹೇಳಿದರು. ಸಾರ್ವಜನಿಕರ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ, ಜಮೀನಿಗೆ ಹೋಗುವ ದಾರಿಯನ್ನು ಮುಚ್ಚಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ