Yemen Stampede: ಯೆಮೆನ್​ನಲ್ಲಿ ಚಾರಿಟಿ ಕಾರ್ಯಕ್ರಮದಲ್ಲಿ ಕಾಲ್ತುಳಿತ: 85 ಮಂದಿ ಸಾವು, 100ಕ್ಕೂ ಅಧಿಕ ಜನರಿಗೆ ಗಾಯ

ಯೆಮೆನ್(Yemen) ​ನ ರಾಜಧಾನಿ ಸನಾ(Sana)ದಲ್ಲಿ ರಂಜಾನ್ ಪ್ರಯುಕ್ತ ಆಯೋಜಿಸಲಾಗಿದ್ದ ಚಾರಿಟಿ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ(Stampede) ಉಂಟಾಗಿ 85 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

Yemen Stampede: ಯೆಮೆನ್​ನಲ್ಲಿ ಚಾರಿಟಿ ಕಾರ್ಯಕ್ರಮದಲ್ಲಿ ಕಾಲ್ತುಳಿತ: 85 ಮಂದಿ ಸಾವು, 100ಕ್ಕೂ ಅಧಿಕ ಜನರಿಗೆ ಗಾಯ
ಯೆಮೆನ್
Image Credit source: The National

Updated on: Apr 20, 2023 | 7:13 AM

ಯೆಮೆನ್(Yemen) ​ನ ರಾಜಧಾನಿ ಸನಾ(Sana)ದಲ್ಲಿ ರಂಜಾನ್ ಪ್ರಯುಕ್ತ ಆಯೋಜಿಸಲಾಗಿದ್ದ ಚಾರಿಟಿ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ(Stampede) ಉಂಟಾಗಿ 85 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಆರ್ಥಿಕ ನೆರವು ನೀಡುವ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು, ಅದರಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. 85 ಮಂದಿ ಮೃತಪಟ್ಟಿದ್ದು, 13 ಜನರ ಸ್ಥಿತಿ ಗಂಭೀರವಾಗಿದೆ.

ಸ್ಥಳೀಯ ಆಡಳಿತದ ಸಹಾಯವಿಲ್ಲದೆ ಅಲ್ಲಿನ ವ್ಯಾಪಾರಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದು ಹೌತಿ ಪಡೆಗಳ ನಿಯಂತ್ರಣದಲ್ಲಿರುವ ಆಂತರಿಕ ಸಚಿವಾಲಯ ಹೇಳಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕವಾಗಿ ತುಂಬಾ ಹಿಂದುಳಿದವರು ಆಗಮಿಸಿದ್ದರು.
ಜನರನ್ನು ನಿಯಂತ್ರಿಸಲು ಹೌತಿ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ವಿದ್ಯುತ್ ತಂತಿ ಸ್ಫೋಟಗೊಂಡಿದೆ. ಈ ಸ್ಫೋಟದಿಂದ ಭಯಭೀತರಾದ ಜನರು ಅಲ್ಲಿ-ಇಲ್ಲಿ ಓಡಲು ಪ್ರಾರಂಭಿಸಿದರು. ಕಾಲ್ತುಳಿತಕ್ಕೆ ಸಿಲುಕಿ 85 ಮಂದಿ ಅಸುನೀಗಿದ್ದಾರೆ.

ರಂಜಾನ್ ಹಬ್ಬದ ಅಂಗವಾಗಿ ಜನರಿಗೆ ಆರ್ಥಿಕ ಸಹಾಯ ಮಾಡಲಾಗುತ್ತಿತ್ತು. ಸ್ಥಳೀಯ ಆಡಳಿತದೊಂದಿಗೆ ಮಾತನಾಡಿ ಈ ದತ್ತಿ ಕಾರ್ಯಕ್ರಮ ನಡೆಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದರು. ಸಂಘಟಕರು ಮನಬಂದಂತೆ ಹಣ ಹಂಚುವ ಕೆಲಸ ಮಾಡಿದ್ದಾರೆ ಎಂದು ಬ್ರಿಗೇಡಿಯರ್ ಅಬ್ದುಲ್-ಖಾಲೆಕ್ ಅಲ್-ಅಘರಿ ದೂರಿದ್ದಾರೆ.

ಮತ್ತಷ್ಟು ಓದಿ:Ganga-Jamuni Tehzeeb: ಉತ್ತರ ಪ್ರದೇಶದ ಅಜಂಗಢ್ ಗ್ರಾಮದಲ್ಲಿ ರಂಜಾನ್ ತಿಂಗಳು ಮುಸಲ್ಮಾನರನ್ನು ಬೆಳಗಿನ ಸೆಹ್ರಿಗೆ ಎಬ್ಬಿಸೋದು ಒಬ್ಬ ಹಿಂದೂ!

ಕಾರ್ಯಕ್ರಮದ ಇಬ್ಬರು ಆಯೋಜಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಯೆಮೆನ್ ರಾಜಧಾನಿ 2014 ರಿಂದ ಇರಾನ್ ಬೆಂಬಲಿತ ಹೌತಿ ಬಂಡುಕೋರರ ನಿಯಂತ್ರಣದಲ್ಲಿದೆ. ವಾಸ್ತವವಾಗಿ, ಯೆಮನ್‌ನ ಒಟ್ಟು ಜನಸಂಖ್ಯೆಯ 35% ಶಿಯಾ ಸಮುದಾಯಕ್ಕೆ ಸೇರಿದ್ದರೆ, ಸುನ್ನಿ ಸಮುದಾಯದ 65% ಜನರು ವಾಸಿಸುತ್ತಿದ್ದಾರೆ.

ಅರಬ್ ರಾಷ್ಟ್ರಗಳ ಮೇಲೆ ಪ್ರಾಬಲ್ಯ ಸಾಧಿಸುವ ಓಟದಲ್ಲಿ ಇರಾನ್ ಮತ್ತು ಸೌದಿ ಕೂಡ ಈ ಅಂತರ್ಯುದ್ಧಕ್ಕೆ ಧುಮುಕಿದವು. ಕೆಲವು ವರ್ಷಗಳಲ್ಲಿ ಈ ಸಂಘರ್ಷ ಸೌದಿ ಅರೇಬಿಯಾ ಮತ್ತು ಇರಾನ್ ನಡುವಿನ ಯುದ್ಧವಾಗಿ ಮಾರ್ಪಟ್ಟಿದೆ. ಇದುವರೆಗೆ 1.50 ಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಸತ್ತವರಲ್ಲಿ ಯೋಧರು ಮತ್ತು ನಾಗರಿಕರು ಸೇರಿದ್ದಾರೆ.

ವಿಶ್ವಸಂಸ್ಥೆಯ ಪ್ರಕಾರ, ಯೆಮೆನ್‌ನಲ್ಲಿ ಸುಮಾರು 21 ಮಿಲಿಯನ್ ಜನರಿಗೆ ನೆರವು ಮತ್ತು ರಕ್ಷಣೆಯ ಅಗತ್ಯವಿದೆ. ಇವರಲ್ಲಿ 1.7 ಕೋಟಿ ಜನರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಫೆಬ್ರವರಿಯಲ್ಲಿ, ವಿಶ್ವಸಂಸ್ಥೆಯು ಯೆಮನ್‌ಗೆ 4.3 ಶತಕೋಟಿ ಡಾಲರ್ ನೆರವು ನೀಡುವ ಗುರಿಯನ್ನು ಹೊಂದಿದ್ದು, ಅದರಲ್ಲಿ 1.2 ಬಿಲಿಯನ್ ಡಾಲರ್ ಮಾತ್ರ ಸಂಗ್ರಹಿಸಲಾಗಿದೆ ಎಂದು ಹೇಳಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ