ಇಸ್ರೇಲ್ ಇಂದು ಮತ್ತೆ ಲೆಬನಾನ್‌ದ ದಕ್ಷಿಣ ಬೈರುತ್‌ನಲ್ಲಿರುವ ಹಿಜ್ಬುಲ್ಲಾದ ಪ್ರಮುಖ ಭದ್ರಕೋಟೆಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದೆ. ಇಸ್ರೇಲ್ ಲೆಬನಾನ್ನ ರಾಜಧಾನಿಯ ಹೃದಯಭಾಗವಾದ ಬೈರುತ್ ಮೇಲೆ ನೆನ್ನೆ ರಾತ್ರಿಯಿಂದ ದಾಳಿ ಮಾಡಲು ಶುರು ಮಾಡಿದೆ. ಇದೀಗ ಈ ದಾಳಿಯಿಂದ ಜನನಿಬಿಡ ನಾಗರಿಕ ಪ್ರದೇಶಗಳಲ್ಲಿ ಭಯ ವಾತವರಣ ಸೃಷ್ಟಿಯಾಗಿದೆ. ಇದೀಗ ಇಸ್ರೇಲ್ ಪಡೆಗಳು ಗಾಜಾದಿಂದ ಲೆಬನಾನ್ನತ್ತ ಮುಖ ಮಾಡಿದೆ ಎಂದು ಹೇಳಲಾಗಿದೆ. ಬೈರುತ್ನ ಮೇಲೆ ಇಸ್ರೇಲ್ ತೀವ್ರವಾದ ದಾಳಿಯನ್ನು ನಡೆಸಿದೆ. ಬೈರುತ್ ಪ್ರದೇಶ ಹೊಗೆಯಿಂದ ತುಂಬಿಕೊಂಡಿದೆ.
ಈ ದಾಳಿಯಿಂದ ನೂರಾರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಲೆಬನಾನ್ ಹಿಜ್ಬುಲ್ಲಾ ಉಗ್ರರ ಭದ್ರಕೋಟೆಯಾಗಿದೆ ಅದನ್ನು ನಾಶ ಮಾಡುವವರೆಗೆ ನಮ್ಮ ಈ ದಾಳಿ ಮುಂದುವರಿಯುತ್ತದೆ ಎಂದು ಇಸ್ರೇಲ್ ಹೇಳಿದೆ. ಇನ್ನು ಇಸ್ರೇಲ್ ಪ್ರಮುಖ ಗುರಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾಹ್ ಎಂದು ಹೇಳಲಾಗಿದೆ. ಆದರೆ ಈ ದಾಳಿಯಿಂದ ತಪ್ಪಿಸಿಕೊಳ್ಳಲು ಹಸನ್ ನಸ್ರಲ್ಲಾಹ್ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಸ್ರೇಲಿ ರಕ್ಷಣಾ ಪಡೆಗಳು ದಕ್ಷಿಣ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾದ ಕ್ಷಿಪಣಿ ಘಟಕದ ಕಮಾಂಡರ್ ಮುಹಮ್ಮದ್ ಅಲಿ ಇಸ್ಮಾಯಿಲ್ ಇರಾನ್ ಬೆಂಬಲಿತ ಸೇನಾಪಡೆಯ ಇತರ ಹಿರಿಯ ಅಧಿಕಾರಿಗಳ ಮೇಲೆ ಏರ್ ಸ್ಟ್ರೈಕ್ ದಾಳಿಗಳನ್ನು ಮಾಡಿ ಅವರ ಹತ್ಯೆಗೆ ಕಾರಣವಾಗಿದೆ.
ಇಸ್ರೇಲ್ ಇಂದು ದಕ್ಷಿಣ ಬೈರುತ್‌ನಲ್ಲಿನ ಕಟ್ಟಡಗಳಲ್ಲಿ ಸಂಗ್ರಹವಾಗಿರುವ ಹೆಜ್ಬೊಲ್ಲಾಹ್‌ನ ಶಸ್ತ್ರಾಸ್ತ್ರ ಡಿಪೋಗಳ ಮೇಲೆ ದಾಳಿಯನ್ನು ಮಾಡಿ ನೆಲಸಮಗೊಳಿಸಿದೆ. ಇದರಿಂದ ಆರು ಕಟ್ಟಡಗಳನ್ನು ನೆಲಸಮವಾಗಿದೆ. ಹಾಗೂ 91 ಜನರು ಗಾಯಗೊಂಡಿದ್ದಾರೆ ಮತ್ತು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಹೆಜ್ಬೊಲ್ಲಾಹ್ ಉಗ್ರರರು ಕೂಡ ಪ್ರತಿದಾಳಿಯನ್ನು ನಡೆಸಿದ್ದಾರೆ. ಆದರೆ ಇಸ್ರೇಲ್ ದಾಳಿಗೆ ಹೆಜ್ಬೊಲ್ಲಾಹ್ ಸಂಘಟನೆ ಕಂಗೆಟ್ಟಿದೆ.
ಇದನ್ನೂ ಓದಿ: ಲೆಬನಾನ್ನಲ್ಲಿ 400ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಇಸ್ರೇಲ್ನ ರಾಕೆಟ್ ದಾಳಿ ಹೇಗಿತ್ತು
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಉತ್ತರದ ಗಡಿಯನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸುವವರೆಗೆ ಇಸ್ರೇಲ್ ಹೆಜ್ಬೊಲ್ಲಾ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸುತ್ತದೆ ಎಂದು ಪ್ರತಿಜ್ಞೆ ಮಾಡಿದರು. ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಹೆಜ್ಬೊಲ್ಲಾಗೆ ಯಾವುದೇ ವಿರಾಮ ನೀಡುವುದಿಲ್ಲ. ಈ ಮೂಲಕ ದಾಳಿಯ ಬಗ್ಗೆ ಸೂಚನೆಯನ್ನು ನೀಡಿದರು.
ಮತ್ತಷ್ಟು ವಿಶ್ವದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ