ಭಾರತದಲ್ಲಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಸಂಕಷ್ಟ, ಬಂಧನ ವಾರೆಂಟ್ ಹೊರಡಿಸಿದ ನ್ಯಾಯಾಲಯ

|

Updated on: Oct 17, 2024 | 2:20 PM

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್​ ಹಸೀನಾ ವಿರುದ್ಧ ಅಲ್ಲಿನ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿದೆ. ಶೇಖ್ ಹಸೀನಾ ಅವರು ಆಗಸ್ಟ್ 5 ರಂದು ದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ತಮ್ಮ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಬಂದಿದ್ದರು.

ಭಾರತದಲ್ಲಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಸಂಕಷ್ಟ, ಬಂಧನ ವಾರೆಂಟ್ ಹೊರಡಿಸಿದ ನ್ಯಾಯಾಲಯ
ಶೇಖ್ ಹಸೀನಾ
Image Credit source: Jagran Josh
Follow us on

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್​ ಹಸೀನಾ ವಿರುದ್ಧ ಅಲ್ಲಿನ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿದೆ.
ಶೇಖ್ ಹಸೀನಾ ಅವರು ಆಗಸ್ಟ್ 5 ರಂದು ದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ತಮ್ಮ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಬಂದಿದ್ದರು.

ಶೇಖ್ ಹಸೀನಾ ಅವರು 45 ನಿಮಿಷಗಳಲ್ಲಿ ದೇಶವನ್ನು ತೊರೆಯುವಂತೆ ಬಾಂಗ್ಲಾದೇಶ ಸೇನೆಯಿಂದ ಅಲ್ಟಿಮೇಟಮ್ ಸ್ವೀಕರಿಸಿದ್ದರು ಮತ್ತು ನಂತರ ಅವರು ತಕ್ಷಣವೇ ರಾಜೀನಾಮೆ ನೀಡಿ ದೇಶವನ್ನು ಬಿಟ್ಟಿದ್ದರು. ಈ ಹಿಂದೆ ಲಂಡನ್‌ಗೆ ತೆರಳುವ ಯೋಜನೆ ಹಾಕಿಕೊಂಡಿದ್ದರು, ಆದರೆ ಬ್ರಿಟಿಷ್ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗದ ಕಾರಣ ಶೇಖ್ ಹಸೀನಾ ತನ್ನ ಸಹೋದರಿಯೊಂದಿಗೆ ಭಾರತದಲ್ಲಿಯೇ ನೆಲೆಸಿದ್ದಾರೆ.

ಆದರೆ ಅಷ್ಟರಲ್ಲಿ ಶೇಖ್ ಹಸೀನಾರ ಸಂಕಷ್ಟ ಹೆಚ್ಚಿದೆ. ಬಾಂಗ್ಲಾದೇಶದ ನ್ಯಾಯಾಲಯ ಅರೆಸ್ಟ್​ ವಾರೆಂಟ್ ಹೊರಡಿಸಿದೆ.
ಬಾಂಗ್ಲಾದೇಶ ನ್ಯಾಯಾಲಯವು ಶೇಖ್ ಹಸೀನಾ ವಿರುದ್ಧ ಇಂದು ಅಕ್ಟೋಬರ್ 17 ಗುರುವಾರ ಬಂಧನ ವಾರಂಟ್ ಹೊರಡಿಸಿದೆ. ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್‌ನ ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ತಾಜುಲ್ ಇಸ್ಲಾಂ ಈ ಬಂಧನ ವಾರಂಟ್ ಕುರಿತು ಮಾಹಿತಿ ನೀಡಿದರು.

ಅಷ್ಟಕ್ಕೂ ಬಾಂಗ್ಲಾದೇಶ ಹಿಂಸಾಚಾರಕ್ಕೆ ಹೆದರಿ ದೇಶಬಿಟ್ಟು ಓಡಿ ಬಂದಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನ ಮತ್ತೆ ಮರಳಿ ದೇಶಕ್ಕೆ ಕರೆಸಿಕೊಳ್ಳಬೇಕು ಎಂದು ಇದೀಗ ಅಲ್ಲಿನ ರಾಜಕಾರಣಿಗಳು ಪಣತೊಟ್ಟಿದ್ದಾರೆ. ಹೀಗಿದ್ದಾಗ, ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯ ಮಂಡಳಿಯಲ್ಲಿ ಬಾಂಗ್ಲಾ ಪರ ವಕಾಲತ್ತು ವಹಿಸುವ ವಕೀಲ ಮೊಹಮ್ಮದ್‌ ತಾಜುಲ್‌ ಇಸ್ಲಾಂ ಇದೀಗ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮತ್ತಷ್ಟು ಓದಿ: ಶೇಖ್​ ಹಸೀನಾ ಮತ್ತು ಮಾಜಿ ಸಂಸದರ ರಾಜತಾಂತ್ರಿಕ ಪಾಸ್​ಪೋರ್ಟ್​ ರದ್ದುಗೊಳಿಸಿದ ಬಾಂಗ್ಲಾ ಸರ್ಕಾರ

ಆ ಪ್ರಕಾರ ಶೇಖ್‌ ಹಸೀನಾ ಅವರನ್ನು ಭಾರತದಿಂದ ವಾಪಸ್‌ ಕರೆಯಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಸೀನಾ ಜೊತೆ ಬಾಂಗ್ಲಾದೇಶ ಬಿಟ್ಟು ಓಡಿ ಹೋದ ಎಲ್ಲರನ್ನೂ ಕರೆಸಿಕೊಳ್ಳುತ್ತೇವೆ ಎಂದಿದ್ದಾರೆ ಇದೇ ವಕೀಲ ಮೊಹಮ್ಮದ್‌ ತಾಜುಲ್‌ ಇಸ್ಲಾಂ. ಹೀಗಾಗಿ ತಿಕ್ಕಾಟ ಕೂಡ ಜೋರಾಗಿದೆ.

ಶೇಖ್ ಹಸೀನಾ ವಿರುದ್ಧ ಬಾಂಗ್ಲಾ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದ್ದಲ್ಲದೆ ಮತ್ತೊಂದು ಆದೇಶವನ್ನೂ ಹೊರಡಿಸಿದೆ. ಈ ಆದೇಶದ ಪ್ರಕಾರ ಶೇಖ್ ಹಸೀನಾ ಅವರು ನವೆಂಬರ್ 18ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು.
ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರದ ಪತನದ ನಂತರ ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರದ ಘಟನೆಗಳಲ್ಲಿ 230 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ಅವಾಮಿ ಲೀಗ್ ಸರ್ಕಾರದ ಪತನದ ನಂತರ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ನೇಮಿಸಲಾಯಿತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ