ಹೊಟ್ಟೆಗಿಲ್ಲದೆ ಗಾಜಾದಲ್ಲಿ ದಾಳಿಯಲ್ಲಿ ಸತ್ತುಬಿದ್ದವರ ದೇಹವನ್ನು ತಿನ್ನುತ್ತಿವೆಯಂತೆ ನಾಯಿಗಳು

ಗಾಜಾದಲ್ಲಿ ಇಸ್ರೇಲ್​ ನಡೆಸುತ್ತಿರುವ ದಾಳಿಯಲ್ಲಿ ಸಾವನ್ನಪ್ಪಿದ್ದವರನ್ನು ಹಸಿದ ನಾಯಿಗಳು ತಿನ್ನುತ್ತಿವೆ ಎನ್ನುವ ವಿಚಾರವನ್ನು ಅಧಿಕಾರಿಯೊಬ್ಬರು ತೆರೆದಿಟ್ಟಿದ್ದಾರೆ. ಗಾಜಾದಲ್ಲಿ ಸಾವಿರಾರು ಮಂದಿಗೆ ಆಶ್ರಯವಿಲ್ಲ, ಎಷ್ಟೋ ಮನೆಗಳು ನೆಲಕ್ಕುರುಳಿದೆ. ಜನರಿಗೆ ಹೊಟ್ಟೆಗೆ ಏನೂ ಇಲ್ಲವೆಂದಾಗ ಪ್ರಾಣಿಗಳ ಗತಿ ಹೇಗಿರಬೇಡ, ಊಹಿಸಿಕೊಳ್ಳುವುದೂ ಕಷ್ಟ.

ಹೊಟ್ಟೆಗಿಲ್ಲದೆ ಗಾಜಾದಲ್ಲಿ ದಾಳಿಯಲ್ಲಿ ಸತ್ತುಬಿದ್ದವರ ದೇಹವನ್ನು ತಿನ್ನುತ್ತಿವೆಯಂತೆ ನಾಯಿಗಳು
ನಾಯಿImage Credit source: Network For Animals
Follow us
|

Updated on: Oct 17, 2024 | 10:23 AM

ಗಾಜಾ-ಇಸ್ರೇಲ್​ ನಡುವೆ ಘರ್ಷಣೆ ಆರಂಭವಾಗಿ ಒಂದು ವರ್ಷ ಕಳೆದಿದೆ, ಅಕ್ಟೋಬರ್​ 7ರಂದು ಹಮಾಸ್​ ಉಗ್ರರು ಇಸ್ರೇಲ್​ ಮೇಲೆ ನಡೆಸಿರುವ ದಾಳಿಯ ಪ್ರತಿಯಾಗಿ ಇಸ್ರೇಲ್​ ಇಲ್ಲಿಯವರೆಗೂ ದಾಳಿ ಮಾಡುವುದನ್ನು ನಿಲ್ಲಿಸಿಲ್ಲ. ಗಾಜಾದಲ್ಲಿ ಸಾವಿರಾರು ಮಂದಿಗೆ ಆಶ್ರಯವಿಲ್ಲ, ಎಷ್ಟೋ ಮನೆಗಳು ನೆಲಕ್ಕುರುಳಿದೆ. ಜನರಿಗೆ ಹೊಟ್ಟೆಗೆ ಏನೂ ಇಲ್ಲವೆಂದಾಗ ಪ್ರಾಣಿಗಳ ಗತಿ ಹೇಗಿರಬೇಡ, ಊಹಿಸಿಕೊಳ್ಳುವುದೂ ಕಷ್ಟ.

ಇಸ್ರೇಲ್ ಗಾಜಾದ ಮೇಲೆ ನಡೆಸುತ್ತಿರುವ ದಾಳಿಯಲ್ಲಿ ಮೃತಪಟ್ಟವರ ದೇಹವನ್ನು ಹಸಿದ ನಾಯಿಗಳು ತಿನ್ನುತ್ತಿವೆ ಎನ್ನುವ ಮಾಹಿತಿ ಲಭ್ಯವಾಗಿದೆ ಸಿಎನ್​ಎನ್​ ಈ ಕುರಿತು ವರದಿ ಮಾಡಿದೆ, ಅಧಿಕಾರಿಯೊಬ್ಬರು ಮಾತನಾಡಿ, ಅವರ ಸಹೋದ್ಯೋಗಿಯೊಬ್ಬರು ಉತ್ತರ ಗಾಜಾದಲ್ಲಿ ಕೊಲ್ಲಲ್ಪಟ್ಟಿದ್ದರು, ಪ್ಯಾಲೆಸ್ತೀನಿಯನ್ನರು ಶವಗಳನ್ನು ಸ್ವೀಕರಿಸಿದ್ದರು. ಆದರೆ ಶವಗಳ ಮೇಲೆ ಪ್ರಾಣಿಗಳು ಕಚ್ಚಿರುವ ಗುರುತುಗಳು ಕೂಡ ಇದ್ದವು ಎಂಬುದನ್ನು ಅವರು ತಿಳಿಸಿದ್ದಾರೆ.

ಶವಗಳನ್ನು ಬೀದಿ ನಾಯಿಗಳು ತಿನ್ನುತ್ತಿವೆ ಹೀಗಾಗಿ ಯಾರ ಶವ ಎಂದು ಗುರುತುಹಿಡಿಯುವುದು ಕೂಡ ಕಷ್ಟವಾಗಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲಿ ಪಟ್ಟಣಗಳ ಮೇಲೆ ಹಮಾಸ್ ದಾಳಿ ಮಾಡಿದ ನಂತರ ಇಸ್ರೇಲ್ ಗಾಜಾದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು , ಇದರ ಪರಿಣಾಮವಾಗಿ 1,206 ಜನರು ಸಾವನ್ನಪ್ಪಿದರು.

ಮತ್ತಷ್ಟು ಓದಿ: ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೇಯರ್ ಸೇರಿದಂತೆ 5 ಮಂದಿ ಸಾವು

ದಾಳಿಯಲ್ಲಿ ಸಾವಿಗೀಡಾದವರಲ್ಲಿ ಹೋರಾಟಗಾರರು ಮತ್ತು ನಾಗರಿಕರನ್ನು ಬೇರೆ ಬೇರೆ ಮಾಡಲಾಗಿದೆ. ಆದರೆ, ಸತ್ತವರಲ್ಲಿ ಹೆಚ್ಚಿನವರು ನಾಗರಿಕರೇ ಆಗಿದ್ದಾರೆ. ಇಸ್ರೇಲ್​ ಗಾಜಾದಲ್ಲಿ ನರಕ ಸೃಷ್ಟಿಸಿದೆ ಎಂದು ಟೀಕಿಸಿದೆ. ಇಸ್ರೇಲ್​ ಮತ್ತು ಹಮಾಸ್​ ನಡುವೆ ಯುದ್ಧ ಆರಂಭವಾಗಿ ಅಕ್ಟೋಬರ್​ 7ಕ್ಕೆ ಒಂದು ವರ್ಷ ಕಳೆದಿದೆ. ನಿರಂತರವಾಗಿ ನಡೆಯುತ್ತಿರುವ ದಾಳಿಯಲ್ಲಿ ಈವರೆಗೂ 42 ಸಾವಿರ ಪ್ಯಾಲೆಸ್ಟೈನಿಯನ್ನರು ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ರೇಲ್‌ನ ದಾಳಿಯು ಅಂದಿನಿಂದ ಇಲ್ಲಿಯವರೆಗೆ ಗಾಜಾ ಪಟ್ಟಿಯಲ್ಲಿ 42,409 ಜನರನ್ನು ಕೊಂದಿದೆ, ಬಹುಪಾಲು ನಾಗರಿಕರು ಮತ್ತು 99,153 ಜನರು ಗಾಯಗೊಂಡಿದ್ದಾರೆ. ಗಾಜಾದ ಪರಿಸ್ಥಿತಿಯು ಪಾಳುಬಿದ್ದ ಮನೆಯಂತಾಗಿದೆ, ಎಲ್ಲೆಂದರಲ್ಲಿ ಶವಗಳು, ಕಟ್ಟಡಗಳು ಕುಸಿದುಬಿದ್ದಿವೆ. ಹಸಿವಿನ ಬಿಕ್ಕಟ್ಟು ತಲೆದೂರಿದೆ. ಅಲ್ಲಿ ವಾಸಿಸಲು ಸಾಧ್ಯವೇ ಇಲ್ಲದಷ್ಟು ಪರಿಸ್ಥಿತಿ ಕೆಟ್ಟದಾಗಿದೆ ಎಂದು ವಿವರಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ