Pak vs Bangla: 1971ರ ನರಮೇಧ: ಪಾಕಿಸ್ತಾನದ ಕ್ಷಮೆಗೆ ಬಾಂಗ್ಲಾದೇಶ ಮತ್ತೆ ಆಗ್ರಹ

|

Updated on: Feb 06, 2023 | 3:15 PM

1971 Bangla Massacre- ಶ್ರೀಲಂಕಾದ 75ನೇ ಗಣರಾಜ್ಯೋತ್ಸವ ಆಚರಣೆ ಸಂಬಂಧ ಅಲ್ಲಿ ಪಾಕಿಸ್ತಾನದ ಸಚಿವೆಯನ್ನು ಭೇಟಿಯಾದ ಲಂಕಾ ಸಚಿವರು, 1971ರ ನರಮೇಧ ಘಟನೆಗೆ ಪಾಕಿಸ್ತಾನ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ ಘಟನೆ ನಡೆದಿದೆ.

Pak vs Bangla: 1971ರ ನರಮೇಧ: ಪಾಕಿಸ್ತಾನದ ಕ್ಷಮೆಗೆ ಬಾಂಗ್ಲಾದೇಶ ಮತ್ತೆ ಆಗ್ರಹ
ಹೀನಾ ರಬ್ಬಾನಿ ಖರ್
Image Credit source: The Dawn
Follow us on

ಕೊಲಂಬೋ: 1971ರ ಯುದ್ಧದ ವೇಳೆ ಪಾಕಿಸ್ತಾನದ ಸೇನಾ ಪಡೆಗಳು ಬಾಂಗ್ಲಾದೇಶೀಯರ ಮೇಲೆ ದಾಳಿ ಮಾಡಿ ನರಮೇಧ ಎಸಗಿದ ಘಟನೆಗೆ ಪಾಕಿಸ್ತಾನ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಬಾಂಗ್ಲಾದೇಶ ಆಗ್ರಹಿಸಿದ ಘಟನೆ ನಡೆದಿದೆ. ಮೊನ್ನೆ ಶನಿವಾರದಂದು ಶ್ರೀಲಂಕಾದ ರಾಜಧಾನಿ ನಗರದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸಚಿವರ ಭೇಟಿ ವೇಳೆ ಈ ಬೆಳವಣಿಗೆ ನಡೆದಿರುವುದು ವರದಿಯಾಗಿದೆ. 1971ರ ನರಮೇಧ ಘಟನೆಗೆ ಪಾಕಿಸ್ತಾನ ಕ್ಷಮೆ ಯಾಚಿಸಬೇಕು ಎಂದು ಆ ದೇಶದ ವಿದೇಶಾಂಗ ಖಾತೆ ರಾಜ್ಯ ಸಚಿವೆ ಹೀನಾ ರಬ್ಬಾನಿ ಖರ್ ಅವರನ್ನು ಬಾಂಗ್ಲಾದೇಶ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೋಮೆನ್ ಆಗ್ರಹಪಡಿಸಿದರು. ಆದರೆ, ಹೀನಾ ರಬ್ಬಾನಿ ಈ ಆಗ್ರಹಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

1971ರಲ್ಲಿ ಬಾಂಗ್ಲಾದೇಶ ವಿಮೋಚನೆಗಾಗಿ ನಡೆದ ಹೋರಾಟದ ವೇಳೆ ಪಾಕಿಸ್ತಾನ ಸೇನಾ ಪಡೆಗಳು ಅಮಾನುಷ ರೀತಿಯಲ್ಲಿ ಬಾಂಗ್ಲಾದೇಶೀಯರನ್ನು ಹತ್ಯೆಗೈದಿದ್ದವು. ಆಗ ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಭಾಷೆ ವಿಚಾರಕ್ಕೆ ಶುರುವಾದ ವಿಮುಕ್ತಿ ಹೋರಾಟ 1971ರಲ್ಲಿ ತಾರಕಕ್ಕೇರಿತ್ತು. ಆ ಹೋರಾಟ ಹತ್ತಿಕ್ಕಲು ಪಾಕಿಸ್ತಾನ ಸೇನಾ ಪಡೆಗಳು ಬಾಂಗ್ಲಾದ ಇಸ್ಲಾಮಿ ಉಗ್ರರ ಜೊತೆ ಸೇರಿಕೊಂಡು 3ರಿಂದ 30 ಲಕ್ಷ ಜನರ ನರಮೇಧ ಮಾಡಿತ್ತು. ಲಕ್ಷಾಂತರ ಮಹಿಳೆಯ ಮೇಲೆ ಅತ್ಯಾಚಾರ ಆಯಿತು. ಅಂತಿಮವಾಗಿ ಭಾರತೀಯ ಸೇನೆಯ ಸಹಾಯದಿಂದ ಬಾಂಗ್ಲಾದೇಶ ವಿಮೋಚನೆ ಪಡೆದು ಸ್ವತಂತ್ರ ದೇಶವಾಯಿತು.

ಇದನ್ನೂ ಓದಿ: Pakistan Crisis: ಸ್ವಯಂಕೃತ ಅಪರಾಧಗಳಿಗೆ ತತ್ತರಿಸಿದ ಪಾಕಿಸ್ತಾನ; ಆರ್ಥಿಕ ಅಧಃಪತನಕ್ಕೆ ಭಾರತ ದ್ವೇಷವೇ ಮುಖ್ಯ ಕಾರಣ

ಆ ನರಮೇಧ ಕೃತ್ಯಕ್ಕೆ ಪಾಕಿಸ್ತಾನ ಇದೂವರೆಗೂ ಸಾರ್ವಜನಿಕವಾಗಿ ಕ್ಷಮೆ ಕೋರಿಲ್ಲ. ಬಾಂಗ್ಲಾದೇಶ ಹಲವು ಬಾರಿ ಕ್ಷಮೆಗಾಗಿ ಆಗ್ರಹಪಡಿಸಿದರೂ ಪಾಕಿಸ್ತಾನ ಬಹಿರಂಗವಾಗಿ ಕ್ಷಮಾಪಣೆ ಮಾಡಿಲ್ಲ. ನಿನ್ನೆ ಭಾನುವಾರ ಕೊಲಂಬೋದಲ್ಲಿ ಶ್ರೀಲಂಕಾ ಸರ್ಕಾರದ ಗೆಸ್ಟ್ ಹೌಸ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಾಂಗ್ಲಾದೇಶದ ವಿದೇಶಾಂಗ ಸಚಿವರು ತಾನು ಪಾಕಿಸ್ತಾನದ ಸಚಿವೆಗೆ ನರಮೇಧ ಘಟನೆಗೆ ಕ್ಷಮೆ ಯಾಚಿಸಬೇಕೆಂದು ಆಗ್ರಹಪಡಿಸಿದ ಸಂಗತಿ ವಿವರಿಸಿದರು.

ನಮ್ಮ ಜೊತೆಗಿನ ಸಂಬಂಧ ಗಟ್ಟಿಗೊಳಿಸಬೇಕು ಎಂದು ಆಕೆ (ಪಾಕ್ ಸಚಿವೆ) ನನಗೆ ಹೇಳಿದರು. 1971ರ ನರಮೇಧ ಘಟನೆಗೆ ಸಾರ್ವಜನಿಕ ಕ್ಷಮೆ ಯಾಚಿಸಿ ಎಂದು ನಾವು ಉತ್ತರಿಸಿದೆವು. ಆಕೆ ಈ ವಿಚಾರದ ಬಗ್ಗೆ ಆಸಕ್ತಿ ತೋರಲಿಲ್ಲ, ಉತ್ತರ ಕೊಡಲೂ ಇಲ್ಲ. ತಮಗೆ ಕೆಲ ಮಿತಿಗಳಿವೆ ಎಂದರು. ನಾನು ಕೂಡ ನಮ್ಮಲ್ಲಿ ಕೆಲ ಮಿತಿಗಳು ಇವೆ ಎಂದೆಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ: Viral News: ಒಂದೇ ವ್ಯಕ್ತಿಯನ್ನು ಮದುವೆಯಾದ ತ್ರಿವಳಿ ಸಹೋದರಿಯರು; ಕೀನ್ಯಾದಲ್ಲೊಂದು ವಿಚಿತ್ರ ವಿವಾಹ

ನಮ್ಮ ಜೊತೆ ವ್ಯಾಪಾರ ಸಂಬಂಧ ಹೆಚ್ಚಿಸುವುದು ಪಾಕಿಸ್ತಾನ ಇರಾದೆ. ಆದರೆ, ಅವರಿಗೆ ಅದು ಎಫ್​ಒಸಿಯಲ್ಲಿ (ಉಚಿತವಾಗಿ) ಆಗಲಿ ಎಂದು ಬಯಸುತ್ತದೆ. ನೀವು ಆ್ಯಂಟಿಡಂಪಿಂಗ್ ಕಂಡೀಷನ್ಸ್ ಹಾಕಿದ್ದೀರಲ್ಲ ಎಂದೆ. ಅದು ಒಳ್ಳೆಯದೇ ಅಲ್ವಾ ಎಂದು ಅವರು ಹೇಳಿದರು. ನನಗೆ ಅದು ಸರಿ ಎನಿಸಿತು. ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಮಾತ್ರವಲ್ಲ ಇಡೀ ಭಾರತೀಯ ಉಪಖಂಡದ ಜೊತೆಗಿನ ಸಂಬಂಧ ಉತ್ತಮಪಡಿಸಲು ಬಯಸುತ್ತದೆಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೋಮೆನ್ ಹೇಳಿದರು.

Published On - 3:15 pm, Mon, 6 February 23