AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಒಂದೇ ವ್ಯಕ್ತಿಯನ್ನು ಮದುವೆಯಾದ ತ್ರಿವಳಿ ಸಹೋದರಿಯರು; ಕೀನ್ಯಾದಲ್ಲೊಂದು ವಿಚಿತ್ರ ವಿವಾಹ

ಕೇಟ್​ನ ಸಹೋದರಿಯರನ್ನು ಭೇಟಿಯಾದ ಸ್ಟೀವೋಗೆ ಅವರ ಮೇಲೂ ಆಕರ್ಷಣೆ ಆಯಿತು. ತಾನೇಕೆ ಮೂವರೂ ಸಹೋದರಿಯರನ್ನು ಮದುವೆಯಾಗಬಾರದು ಎಂದು ಅವರು ಯೋಚಿಸಿದರು.

Viral News: ಒಂದೇ ವ್ಯಕ್ತಿಯನ್ನು ಮದುವೆಯಾದ ತ್ರಿವಳಿ ಸಹೋದರಿಯರು; ಕೀನ್ಯಾದಲ್ಲೊಂದು ವಿಚಿತ್ರ ವಿವಾಹ
ಒಬ್ಬನನ್ನೇ ಮದುವೆಯಾದ ಮೂವರು ಸಹೋದರಿಯರು
Follow us
ಸುಷ್ಮಾ ಚಕ್ರೆ
|

Updated on:Feb 06, 2023 | 11:07 AM

ಹಿಂದೆಲ್ಲ ಬಹುಪತ್ನಿತ್ವ (Polygamy) ಪದ್ಧತಿ ಸಾಮಾನ್ಯವಾಗಿತ್ತು. ಆದರೆ, ಇಂದಿನ ಜಗತ್ತಿನಲ್ಲಿ ಇದು ಬಹಳ ಅಪರೂಪವಾಗಿದೆ. ಆದರೆ, ಕೀನ್ಯಾದಲ್ಲಿ (Kenya) ಮೂವರು ತ್ರಿವಳಿ ಸಹೋದರಿಯರು ಒಬ್ಬನನ್ನೇ ಮದುವೆಯಾಗಿ, ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ. ನೋಡಲು ಒಂದೇ ರೀತಿ ಕಾಣುವ ತ್ರಿವಳಿ ಸಹೋದರಿಯರು ಒಂದೇ ವ್ಯಕ್ತಿಯನ್ನು ಮದುವೆಯಾಗಿ, ಒಟ್ಟಿಗೇ ಇರಲು ನಿರ್ಧರಿಸಿದ್ದಾರೆ.

ಈ ಕುರಿತು ಡೈಲಿ ಸ್ಟಾರ್ ವರದಿ ಮಾಡಿದ್ದು, ಸಂಗೀತಗಾರರಾಗಿದ್ದ ಕೇಟ್, ಈವ್ ಮತ್ತು ಮೇರಿ ಎಂಬ ಮೂವರು ಸಹೋದರಿಯರು ಕೀನ್ಯಾದ ಸ್ಟೀವೊ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಕೇಟ್ ಸ್ಟೀವೊ ಅವರನ್ನು ಭೇಟಿಯಾದ ನಂತರ ಆತನನ್ನು ಪ್ರೀತಿಸಲು ಪ್ರಾರಂಭಿಸಿದ್ದಳು. ನಂತರ ಅವರ ಸಂಬಂಧ ಎಲ್ಲರಿಗೂ ಗೊತ್ತಾಯಿತು. ಅದಾದ ಬಳಿಕ ಯಾರೂ ಊಹಿಸದ ಘಟನೆಗಳು ನಡೆದವು.

ಇದನ್ನೂ ಓದಿ: Viral News: ಪ್ರೀತಿಗಾಗಿ ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ; ಆದರೂ ಕೈ ಕೊಟ್ಟಳು ಗೆಳತಿ!

ಕೇಟ್​ನ ಸಹೋದರಿಯರನ್ನು ಭೇಟಿಯಾದ ಸ್ಟೀವೋಗೆ ಅವರ ಮೇಲೂ ಆಕರ್ಷಣೆ ಆಯಿತು. ತಾನೇಕೆ ಮೂವರೂ ಸಹೋದರಿಯರನ್ನು ಮದುವೆಯಾಗಬಾರದು ಎಂದು ಅವರು ಯೋಚಿಸಿದರು. ಮೂವರೂ ಸಹೋದರಿಯರ ಬಳಿ ಈ ಬಗ್ಗೆ ಆತ ಹೇಳಿದಾಗ ಕೇಟ್​ಗೆ ಮೊದಲು ಇದು ಇಷ್ಟವಾಗಲಿಲ್ಲ. ಆದರೆ, ಮೂವರೂ ಅಕ್ಕ-ತಂಗಿಯರು ಒಟ್ಟಿಗೇ ಇರಬಹುದು ಎಂಬ ಕಾರಣಕ್ಕೆ ಮೂವರೂ ಸೇರಿ ಆತನನ್ನು ಮದುವೆಯಾಗಲು ನಿರ್ಧರಿಸಿದರು.

ಒಬ್ಬರನ್ನು ಮದುವೆಯಾಗಿ ನಿಭಾಯಿಸುವುದೇ ಕಷ್ಟ, ಅಂಥದ್ದರಲ್ಲಿ ಮೂವರು ಹೆಂಡತಿಯರೊಂದಿಗೆ ಹೇಗೆ ಏಗುತ್ತಾನೋ ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ, ನನ್ನ ಜೀವನದಲ್ಲಿ ಮೂರು ಮಹಿಳೆಯರೊಂದಿಗೆ ಸಂತೋಷವಾಗಿದ್ದೇನೆ ಎಂದು ಸ್ಟೀವೋ ಹೇಳಿಕೊಂಡಿದ್ದಾರೆ. ಮೂವರು ಮಹಿಳೆಯರ ಅಗತ್ಯಗಳನ್ನು ಮತ್ತು ಆಸೆಗಳನ್ನು ಸಮಾನವಾಗಿ ಪೂರೈಸುವುದು ಕಷ್ಟವೇ ಎಂಬ ಪ್ರಶ್ನೆಗೆ, “ನಾನು ಮೂವರು ಮಹಿಳೆಯರನ್ನು ತೃಪ್ತಿಪಡಿಸಬಲ್ಲೆ ಎಂಬುದನ್ನು ಜನರು ಏಕೆ ಅನುಮಾನದಿಂದ ನೋಡುತ್ತಾರೆ? ಅದೇನೂ ದೊಡ್ಡ ವಿಷಯವಿಲ್ಲ” ಎಂದು ಸ್ಟೀವೊ ಹೇಳಿದ್ದಾರೆ.

ಇದನ್ನೂ ಓದಿ: Crime News: ಪ್ರೀತಿಯನ್ನು ನಿರಾಕರಿಸಿದ 15 ವರ್ಷದ ಬಾಲಕಿಗೆ ಶೂಟ್ ಮಾಡಿ ಕೊಂದ ಯುವಕ

ವಾರದ ಒಂದೊಂದು ದಿನವನ್ನು ಸ್ಟೀವೋ ಒಂದೊಂದು ಹೆಂಡತಿಗೆ ಮೀಸಲಿಟ್ಟಿದ್ದಾರಂತೆ. ಸೋಮವಾರ ಮೇರಿಗೆ, ಮಂಗಳವಾರ ಕೇಟ್‌ಗೆ ಮತ್ತು ಬುಧವಾರ ಈವ್‌ಗೆ ಎಂದು ಅವರು ವೇಳಾಪಟ್ಟಿ ಹಾಕಿಕೊಂಡಿದ್ದಾರೆ. ಉಳಿದ ದಿನಗಳಲ್ಲಿ ಬೇರೆ ಮಹಿಳೆಯೊಂದಿಗೆ ಹೋದರೇನು ಕತೆ? ಎಂಬ ಪ್ರಶ್ನೆಗೆ ಮೂವರು ಸಹೋದರಿಯರು ಉತ್ತರಿಸಿದ್ದು, “ಅವನಿಗೆ ನಾವು ಮೂವರೇ ಸಾಕು. ನಮ್ಮ ನಡುವೆ ಇನ್ನೊಬ್ಬರನ್ನು ತರಲು ನಾವು ಅವನಿಗೆ ಅವಕಾಶ ನೀಡುವುದಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:06 am, Mon, 6 February 23

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್