ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಮತ್ತೋರ್ವ ಹಿಂದೂಗೆ ಥಳಿಸಿ, ವಿಷ ಹಾಕಿ ಹತ್ಯೆ

ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತಷ್ಟು ಹೆಚ್ಚಾಗಿದೆ. ಮತ್ತೊಬ್ಬ ಹಿಂದೂ ಯುವಕನಿಗೆ ಥಳಿಸಿ, ವಿಷಪ್ರಾಶನ ಮಾಡಿ ಕೊಲ್ಲಲಾಗಿದೆ. ಸುನಮ್‌ಗಂಜ್ ಜಿಲ್ಲೆಯ ಭಂಗದೋಹೋರ್ ಗ್ರಾಮದಲ್ಲಿ 20 ದಿನಗಳ ಅವಧಿಯಲ್ಲಿಯೇ ಮತ್ತೊಬ್ಬ ಹಿಂದೂ ಯುವಕನನ್ನು ಹತ್ಯೆ ಮಾಡಲಾಗಿದೆ. ಜಾಯ್ ಮಹಾಪಾತ್ರೋ ಎಂಬ ವ್ಯಕ್ತಿಯನ್ನು ಅಮಿರುಲ್ ಇಸ್ಲಾಂ ಎಂಬ ಸ್ಥಳೀಯ ಮುಸ್ಲಿಂ ಥಳಿಸಿ ನಂತರ ವಿಷಪ್ರಾಶನ ಮಾಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಮತ್ತೋರ್ವ ಹಿಂದೂಗೆ ಥಳಿಸಿ, ವಿಷ ಹಾಕಿ ಹತ್ಯೆ
Joy

Updated on: Jan 10, 2026 | 7:55 PM

ಢಾಕಾ, ಜನವರಿ 10: ನೆರೆಯ ದೇಶ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ ಮುಂದುವರೆದಿದೆ. ಬಾಂಗ್ಲಾದೇಶದಲ್ಲಿ (Bangladesh) ಮತ್ತೊಬ್ಬ ಹಿಂದೂ ಯುವಕನನ್ನು ಕೊಲ್ಲಲಾಗಿದೆ. ಹತ್ಯೆಯಾದ ಯುವಕನನ್ನು ಜಾಯ್ ಮಹಾಪಾತ್ರೋ ಎಂದು ಗುರುತಿಸಲಾಗಿದೆ. ಆತ ಸುನಮ್‌ಗಂಜ್ ಜಿಲ್ಲೆಯ ಭಂಗದೋಹೋರ್ ಗ್ರಾಮದ ನಿವಾಸಿಯಾಗಿದ್ದ. ಈ ಘಟನೆ ಗುರುವಾರ ನಡೆದಿದ್ದು, ಆತನನ್ನು ಸ್ಥಳೀಯ ಅಂಗಡಿಯೊಂದಕ್ಕೆ ಕರೆಸಲಾಯಿತು. ಅಲ್ಲಿ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದರು.

ಬಳಿಕ ಆತನನ್ನು ಸಿಲ್ಹೆಟ್ ಎಂಎಜಿ ಉಸ್ಮಾನಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು. ಜಾಯ್‌ಗೆ ಅಮಿರುಲ್ ಇಸ್ಲಾಂ ಎಂಬ ವ್ಯಕ್ತಿ ವಿಷಪ್ರಾಶನ ಮಾಡಿಸಿದ್ದಾನೆ ಎಂದು ಆ ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಮರಕ್ಕೆ ಕಟ್ಟಿ ಹಾಕಿ, ಕೂದಲು ಕತ್ತರಿಸಿದ ದುರುಳರು

ಫೆಬ್ರವರಿ 12ರಂದು ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿದ್ದ ತೀವ್ರಗಾಮಿ ಭಾರತ ವಿರೋಧಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಸಾವಿನ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಸಾಮಾನ್ಯವಾಗಿದೆ. ಮೊದಲನೆಯದಾಗಿ, ಮೈಮೆನ್ಸಿಂಗ್ ಜಿಲ್ಲೆಯಲ್ಲಿ 27 ವರ್ಷದ ಯುವಕ ದೀಪು ಚಂದ್ರ ದಾಸ್ ಅವರನ್ನು ಥಳಿಸಿ ಕೊಲ್ಲಲಾಯಿತು. ಡಿಸೆಂಬರ್ 24ರಂದು ರಾಜ್ಬರಿಯ ಅಮೃತ್ ಮೊಂಡಲ್ ಅವರನ್ನು ಗುಂಪೊಂದು ಹೊಡೆದು ಕೊಂದಿತು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು

ನಂತರ, ಮೈಮೆನ್ಸಿಂಗ್‌ನಲ್ಲಿ 42 ವರ್ಷದ ಬಜೇಂದ್ರ ಬಿಸ್ವಾಸ್ ಎಂಬ ವ್ಯಕ್ತಿಯನ್ನು ಅವರ ಸಹೋದ್ಯೋಗಿ ಗುಂಡಿಕ್ಕಿ ಕೊಂದರು. ಬಳಿಕ ಶರಿಯತ್‌ಪುರ ಜಿಲ್ಲೆಯಲ್ಲಿ 50 ವರ್ಷದ ಖೋಕೋನ್ ದಾಸ್ ಅವರಿಗೆ ಬೆಂಕಿ ಹಚ್ಚಲಾಯಿತು. ಜನವರಿ 5ರಂದು ಜೆಸ್ಸೋರ್ ಜಿಲ್ಲೆಯಲ್ಲಿ ಪತ್ರಕರ್ತ ರಾಣಾ ಪ್ರತಾಪ್ ಬೈರಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅದಾದ ಒಂದು ದಿನದ ನಂತರ, ನರಸಿಂಗ್ಡಿ ಜಿಲ್ಲೆಯಲ್ಲಿ ಶರತ್ ಮಣಿ ಚಕ್ರವರ್ತಿ ಎಂಬ 40 ವರ್ಷದ ವ್ಯಕ್ತಿಯನ್ನು ಕೊಲ್ಲಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ