ಬಾಂಗ್ಲಾದೇಶದಲ್ಲಿ ಹಿಜಾಬ್​ ಧರಿಸಿಲ್ಲ ಎಂದು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪುರುಷರ ಗುಂಪು

|

Updated on: Sep 15, 2024 | 8:29 AM

ಬಾಂಗ್ಲಾದೇಶದಲ್ಲಿ ಮಹಿಳೆಯರು ಹಿಜಾಬ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಪುರುಷರ ಗುಂಪು ಅವರ ಮೇಲೆ ಹಲ್ಲೆ ನಡೆಸುತ್ತಿರುವ ಹಲವು ವಿಡಿಯೋಗಳು ವೈರಲ್ ಆಗಿವೆ. ಕೆಲವರು ಬಾಂಗ್ಲಾದೇಶವು ತಾಲಿಬಾನ್ ಆಕ್ರಮಿತ ಅಫ್ಘಾನಿಸ್ತಾನದಂತಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಜಾಬ್​ ಧರಿಸಿಲ್ಲ ಎಂದು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪುರುಷರ ಗುಂಪು
ಮಹಿಳೆ
Image Credit source: Asianet Newsable
Follow us on

ಬಾಂಗ್ಲಾದೇಶವು ಕೂಡ ಅಫ್ಘಾನಿಸ್ತಾನದಂತಾಗುತ್ತಿದೆ, ಹಿಜಾಬ್​ ಧರಿಸಿಲ್ಲ ಎಂದು ಸಾರ್ವಜನಿಕವಾಗಿ ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಸಿದ್ಧ ಕಾಕ್ಸ್​ ಬಜಾರ್​ನಲ್ಲಿ ರಸ್ತೆಯಲ್ಲಿ ಹೋಗುವ ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ದು ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ, ಹಲವಾರು ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಪುರುಷರು ದಾಳಿ ನಡೆಸುತ್ತಿರುವುದನ್ನು ಕಾಣಬಹುದು.
ಓರ್ವ ಮಹಿಳೆಯನ್ನು ದೊಣ್ಣೆಯಿಂದ ಥಳಿಸಲಾಗಿದ್ದು, ಮತ್ತೋವ್ರ ಮಹಿಳೆ ಸಿಟ್​-ಅಪ್ ಮಾಡುತ್ತಿರುವ ದೃಶಯವನ್ನು ವಿಡಿಯೋದಲ್ಲಿ ಕಾಣಬಹುದು.

ವೀಡಿಯೊಗಳು ಬಾಂಗ್ಲಾದೇಶದಲ್ಲಿ ಬೆಳೆಯುತ್ತಿರುವ ಉಗ್ರಗಾಮಿ ಅಲೆಯ ಭಯವನ್ನು ಹುಟ್ಟುಹಾಕಿದೆ.ಅನೇಕರು ಪರಿಸ್ಥಿತಿಯನ್ನು ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನಕ್ಕೆ ಹೋಲಿಸಿದ್ದಾರೆ. ಬುರ್ಖಾ ಅಥವಾ ಹಿಜಾಬ್‌ಗಳನ್ನು ಧರಿಸದಿದ್ದಕ್ಕಾಗಿ ಕಾಕ್ಸ್ ಬಜಾರ್‌ನಲ್ಲಿ ಹುಡುಗಿಯರನ್ನು ಗುರಿಯಾಗಿಸುವ ತೀವ್ರಗಾಮಿ ಗುಂಪುಗಳ ನಡವಳಿಕೆಯು ಭಯ ಹುಟ್ಟುಹಾಕಿದೆ.

ಮತ್ತಷ್ಟು ಓದಿ: Shocking News: ವಾಲಿಬಾಲ್ ಆಟಗಾರ್ತಿಯ ತಲೆ ಕತ್ತರಿಸಿ ಕೊಂದ ತಾಲಿಬಾನ್; ಅಫ್ಘಾನ್​ ಮಹಿಳೆಯರಿಗೆ ನರಕ ದರ್ಶನ

ಬಾಂಗ್ಲಾದೇಶದಲ್ಲಿ ಅಸ್ಥಿರ ರಾಜಕೀಯ ವಾತಾವರಣದ ಮಧ್ಯೆ ಈ ದಾಳಿ ನಡೆದಿದೆ, ಅಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಉಚ್ಚಾಟನೆ ಸೇರಿದಂತೆ ಇತ್ತೀಚಿನ ರಾಜಕೀಯ ಬದಲಾವಣೆಗಳು ಅಶಾಂತಿ ಮತ್ತು ಅನಿಶ್ಚಿತತೆಗೆ ಕಾರಣವಾಗಿವೆ.

ಹೆಚ್ಚುತ್ತಿರುವ ಉಗ್ರವಾದದ ಅಲೆಗೆ ಪ್ರತಿಕ್ರಿಯೆಯಾಗಿ, ತಮ್ಮ ಸಮುದಾಯದ ಮೇಲೆ ಇತ್ತೀಚಿನ ದಾಳಿಗಳನ್ನು ಪ್ರತಿಭಟಿಸಿ ಸಾವಿರಾರು ಹಿಂದೂಗಳು ಶುಕ್ರವಾರ ಢಾಕಾ ಮತ್ತು ಚಟ್ಟೋಗ್ರಾಮ್‌ನಲ್ಲಿ ಮೆರವಣಿಗೆ ನಡೆಸಿದರು.
ಢಾಕಾ ಮತ್ತು ಚಟ್ಟೋಗ್ರಾಮ್‌ನಲ್ಲಿ ಪ್ರತಿಭಟನಾಕಾರರು ಧಾರ್ಮಿಕ ಹಿಂಸಾಚಾರದ ಹೆಚ್ಚಳದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು, ಧಾರ್ಮಿಕ ಹಿಂಸಾಚಾರದ ಸಂತ್ರಸ್ತರಿಗೆ ಪರಿಹಾರ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಮನೆಗೆ ಮರಳಲು ನಿರಾಕರಿಸಿದರು. ಏತನ್ಮಧ್ಯೆ, ಢಾಕಾದಲ್ಲಿ ಪ್ರತಿಭಟನಾಕಾರರು ಶಾಹಬಾಗ್ ಛೇದಕದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿದರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ರಕ್ಷಿಸುವಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ರ್ಯಾಲಿ ನಡೆಸಿದರು.

ಪ್ಯಾರಿಸ್ ಮೂಲದ ಮಾನವ ಹಕ್ಕುಗಳ ಸಂಘಟನೆಯಾದ ಜಸ್ಟೀಸ್ ಮೇಕರ್ಸ್ ಬಾಂಗ್ಲಾದೇಶ ಫ್ರಾನ್ಸ್ (ಜೆಎಂಬಿಎಫ್) ದಾಳಿಯನ್ನು ಖಂಡಿಸಿದೆ. ಮನೆಗಳು, ವ್ಯಾಪಾರಗಳು ಮತ್ತು ಪೂಜಾ ಸ್ಥಳಗಳ ನಾಶವನ್ನು ಮಾನವ ಹಕ್ಕುಗಳ ತೀವ್ರ ಉಲ್ಲಂಘನೆ ಎಂದು ಜೆಎಂಬಿಎಫ್ ಹೇಳಿಕೆ ನೀಡಿದೆ.

ಬಾಂಗ್ಲಾದೇಶವು ಧಾರ್ಮಿಕ ಉಗ್ರವಾದದ ಈ ಉಲ್ಬಣವನ್ನು ಎದುರಿಸುತ್ತಿರುವಾಗ, ತಾಲಿಬಾನ್ ಆಡಳಿತಲ್ಲಿ ಅಫ್ಘಾನಿಸ್ತಾನ ಹೇಗಿತ್ತು ಅದನ್ನೇ ನೆನಪಿಸುವ ಹಾದಿಯಲ್ಲಿ ರಾಷ್ಟ್ರವು ಸಾಗಬಹುದೆಂದು ಹಲವರು ಭಯಪಡುತ್ತಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ