Donald Trump: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ಮತ್ತೆ ಗುಂಡಿನ ದಾಳಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುನ್ನವೇ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲುವ ಯತ್ನ ನಡೆದಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಊಟ ಮಾಡಿ ಹೆಚ್ಚಿನ ಸಮಯವನ್ನು ಕಳೆಯುವ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿದೆ.

Donald Trump: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ಮತ್ತೆ ಗುಂಡಿನ ದಾಳಿ
ಡೊನಾಲ್ಡ್​ ಟ್ರಂಪ್Image Credit source: Northjersy.com
Follow us
ನಯನಾ ರಾಜೀವ್
|

Updated on:Sep 16, 2024 | 8:02 AM

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​(Donald Trump) ಮೇಲೆ ಮತ್ತೆ ಗುಂಡಿನ ದಾಳಿ ನಡೆದಿದೆ. ಫ್ಲೋರಿಡಾದ ಗಾಲ್ಫ್​ ಕೋರ್ಸ್​ ಬಳಿ ದಾಳಿ ನಡೆದಿದೆ. ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸುರಕ್ಷಿತವಾಗಿದ್ದಾರೆ, ಆದರೆ ಟ್ರಂಪ್​ ಅವರನ್ನೇ ಗುರಿಯಾಗಿಸಿ ಗುಂಡಿನ ದಾಳಿ ನಡೆದಿದೆಯೇ ಇಲ್ಲವೇ ಎಂಬುದಿನ್ನು ಸ್ಪಷ್ಟವಾಗಿಲ್ಲ.

ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಗಾಲ್ಫ್ ಕೋರ್ಸ್‌ನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಪುತ್ರ ಟ್ರಂಪ್ ಜೂನಿಯರ್ ಟ್ವೀಟ್ ಮಾಡಿದ್ದಾರೆ.

ಈ ಗುಂಡಿನ ದಾಳಿಯಲ್ಲಿ ಡೊನಾಲ್ಡ್ ಟ್ರಂಪ್ ಸಂಪೂರ್ಣ ಸೇಫ್ ಆಗಿದ್ದಾರೆ. ವಾಸ್ತವವಾಗಿ, ಭಾನುವಾರ ಮಧ್ಯಾಹ್ನ ಫ್ಲೋರಿಡಾದ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕೋರ್ಸ್ ಬಳಿ, ಟ್ರಂಪ್‌ಗೆ ಬಹಳ ಹತ್ತಿರದಲ್ಲಿ ಬುಲೆಟ್‌ಗಳನ್ನು ಹಾರಿಸಲಾಯಿತು. ಎಫ್‌ಬಿಐ ಇದನ್ನು ಕೊಲೆ ಯತ್ನ ಎಂದು ಪರಿಗಣಿಸಿದೆ.

ಮತ್ತಷ್ಟು ಓದಿ: ಟ್ರಂಪ್​ ಮೇಲಿನ ಮಾರಣಾಂತಿಕ ದಾಳಿ ಪ್ರಕರಣ, ಪಾಕಿಸ್ತಾನಿ ವ್ಯಕ್ತಿಯ ಬಂಧನ

ಅಲ್ಲಿ ಎಕೆ-47 ಅನ್ನು ವಶಪಡಿಸಿಕೊಳ್ಳಲಾಗಿದೆ, ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಅಭ್ಯರ್ಥಿ ಟ್ರಂಪ್ ಭಾನುವಾರ ಗಾಲ್ಫ್ ಆಡುತ್ತಿದ್ದ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಗುಂಡು ಹಾರಿಸಲಾಗಿದೆ .

ಜುಲೈ 13ರಂದು ಪೆನ್ಸಿಲ್ವೇನಿಯಾದಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಟ್ರಂಪ್​ ಅವರ ಹತ್ಯೆಗೆ ಪ್ರಯತ್ನಿಸಲಾಗಿತ್ತು. ಓರ್ವ ಸಾವನ್ನಪ್ಪಿದ್ದರು, ಇಬ್ಬರು ಗಾಯಗೊಂಡಿದ್ದರು. ಈ ಘಟನೆಯು ಟ್ರಂಪ್ ಅವರ ಪ್ರಚಾರದ ಮೇಲೆ ಪರಿಣಾಮ ಬೀರುತ್ತದೆಯೇ ಅಥವಾ ಇಲ್ಲವೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:01 am, Mon, 16 September 24