ಫೇಸ್ಬುಕ್ನಲ್ಲಿ ‘ಹಹ್ಹಾ’ ಎಂದು ರಿಯಾಕ್ಟ್ ಮಾಡುವುದು ಹರಾಮ್; ಬಾಂಗ್ಲಾದೇಶಿ ಮೌಲ್ವಿ ನೀಡಿದ ಕಾರಣವೇನು?
ಅಹಮದುಲ್ಲಾ ಫೆಸ್ಬುಕ್ನಲ್ಲಿ ಹಾಗೂ ಯೂಟ್ಯೂಬ್ನಲ್ಲಿ ಸುಮಾರು ಮೂರು ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಬಾಂಗ್ಲಾದೇಶದ ಟಿವಿ ಚಾನಲ್ಗಳಲ್ಲಿ ಕೂಡ ಧಾರ್ಮಿಕ ವಿಚಾರಗಳನ್ನು ಮಾತನಾಡುವಲ್ಲಿ ಅವರು ಕಾಣಿಸಿಕೊಳ್ಳುತ್ತಿರುತ್ತಾರೆ.
ಫೇಸ್ಬುಕ್ನಲ್ಲಿ ಮೊದಲು ಲೈಕ್ ಮತ್ತು ಕಮೆಂಟ್ ಆಯ್ಕೆ ಮಾತ್ರ ಇತ್ತು. ಒಬ್ಬರು ಮತ್ತೊಬ್ಬರ ಪೋಸ್ಟ್ಗೆ ಲೈಕ್ ಹಾಗು ಕಮೆಂಟ್ ಅಷ್ಟೇ ಮಾಡಬಹುದಿತ್ತು. ವಿಭಿನ್ನ ರೀತಿಯಲ್ಲಿ ರಿಯಾಕ್ಟ್ ಮಾಡುವ ಆಯ್ಕೆ ಇರಲಿಲ್ಲ. ಆದರೆ, ಆ ಬಳಿಕ ಕೆಲವು ರೀತಿಯಲ್ಲಿ ನಾವು ಫೇಸ್ಬುಕ್ ಪೋಸ್ಟ್ಗೆ ರಿಯಾಕ್ಟ್ ಮಾಡಬಹುದು. ಸಿಟ್ಟು, ಬೇಸರ, ಪ್ರೀತಿ, ಕಾಳಜಿ ಹಾಗೂ ನಗುವನ್ನು ನಾವು ರಿಯಾಕ್ಟ್ ಮಾಡಬಹುದು. ಇದರಲ್ಲಿ ‘ಹಹ್ಹಾ’ ಎಂದೇ ಗುರುತಿಸಿಕೊಂಡಿರುವ ನಗುವಿನ ಚಿಹ್ನೆ ಈಗ ವಿವಾದವೊಂದನ್ನು ಸೃಷ್ಟಿಮಾಡಿದೆ. ಹಹ್ಹಾ ಎಂಬುದು ಜೋರಾಗಿ ನಗುವ ಚಿಹ್ನೆಯಾಗಿದೆ. ಕಣ್ಣು ಮುಚ್ಚಿ ಜೋರಾಗಿ ನಗುವ ಚಿಹ್ನೆಗೀಗ ಬಾಂಗ್ಲಾದೇಶದ ಮುಸಲ್ಮಾನ ಪಾದ್ರಿ ಅಹಮದುಲ್ಲಾ ಆಕ್ಷೇಪಿಸಿದ್ದಾರೆ.
ಈ ಇಮೋಜಿ ಅಥವಾ ಚಿಹ್ನೆಯು ತಮಾಷೆ ಮಾಡುವ, ವ್ಯಂಗ್ಯ ಮಾಡುವ ರೀತಿಯಲ್ಲಿ ಕಾಣುತ್ತದೆ. ಹಾಗಾಗಿ ಹಹ್ಹಾ ಎಂದು ಫೇಸ್ಬುಕ್ನಲ್ಲಿ ರಿಯಾಕ್ಟ್ ಮಾಡುವುದು ಹರಾಮ್ ಎಂದು ಅಹಮದುಲ್ಲಾ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಹಹ್ಹಾ ಎಂದು ರಿಯಾಕ್ಟ್ ಮಾಡುವವರ ವಿರುದ್ಧ ಫತ್ವಾ ಹೊರಡಿಸುವುದಾಗಿಯೂ ಅವರು ತಿಳಿಸಿದ್ದಾರೆ.
ಅಹಮದುಲ್ಲಾ ಫೆಸ್ಬುಕ್ನಲ್ಲಿ ಹಾಗೂ ಯೂಟ್ಯೂಬ್ನಲ್ಲಿ ಸುಮಾರು ಮೂರು ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಬಾಂಗ್ಲಾದೇಶದ ಟಿವಿ ಚಾನಲ್ಗಳಲ್ಲಿ ಕೂಡ ಧಾರ್ಮಿಕ ವಿಚಾರಗಳನ್ನು ಮಾತನಾಡುವಲ್ಲಿ ಅವರು ಕಾಣಿಸಿಕೊಳ್ಳುತ್ತಿರುತ್ತಾರೆ.
ಜೂನ್ 19ರಿಂದ ಫೇಸ್ಬುಕ್ನಲ್ಲಿ ವೈರಲ್ ಆಗುತ್ತಿರುವ ಅವರ ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ತಮಾಷೆಯ ದಾಟಿಯಲ್ಲಿ ಒಂದು ವಿಚಾರ ಹಂಚಿಕೊಂಡಿದ್ದರೆ, ಆ ವಿಷಯಗಳಿಗೆ ಹಹ್ಹಾ ಎಂದು ರಿಯಾಕ್ಟ್ ಮಾಡುವುದನ್ನು ಒಪ್ಪಬಹುದು. ಆದರೆ, ಒಬ್ಬರನ್ನು ಹಿಯಾಳಿಸಲು ಹಹ್ಹಾ ಎಂದು ರಿಯಾಕ್ಟ್ ಮಾಡುವುದು ತಪ್ಪು. ಅದು ಹರಾಮ್ ಎಂದು ಅಹಮದುಲ್ಲಾ ಹೇಳಿದ್ದಾರೆ. ಇನ್ನೊಬ್ಬರನ್ನು ಅಪಹಾಸ್ಯ ಮಾಡುವುದು ತಪ್ಪು ಎಂದು ಪವಿತ್ರ ಗ್ರಂಥವನ್ನು ಕೂಡ ಅವರು ಉಲ್ಲೇಖಿಸಿದ್ದಾರೆ.
ಫೇಸ್ಬುಕ್ನಲ್ಲಿ ಹಹ್ಹಾ ಎಂದು ರಿಯಾಕ್ಟ್ ಮಾಡುವುದು ಬಹಳ ಸಾಮಾನ್ಯ ಆಗಿಹೋಗಿದೆ. ಅಪಹಾಸ್ಯ ಮಾಡಲು ಹಹ್ಹಾ ಎಂದು ಪ್ರತಿಕ್ರಿಯೆ ಮಾಡುವುದು ತಪ್ಪು. ಇಸ್ಲಾಂನಲ್ಲಿ ಕೂಡ ಈ ಕ್ರಮ ತಪ್ಪು ಎಂದು ಹೇಳಲಾಗಿದೆ. ಯಾವುದೇ ಸ್ಥಿತಿಯಲ್ಲಿ ಕೂಡ ಮತ್ತೊಬ್ಬರನ್ನು ಹಿಯಾಳಿಸಲು ಹಹ್ಹಾ ಎಂದು ರಿಯಾಕ್ಟ್ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೋರಕ್ಷಣೆ ಮಾಡಿದ ಮುಸ್ಲಿಂ ಯುವಕರು; ಸೌಹಾರ್ದ, ಸಾಮರಸ್ಯಕ್ಕೆ ಸಾಕ್ಷಿಯಾದ ಕಾರ್ಯಾಚರಣೆ
ಮಹಿಳೆಯ ಅಂತ್ಯಕ್ರಿಯೆಗೆ ಬಾರದ ಕುಟುಂಬಸ್ಥರು; ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಯುವಕರು
Published On - 5:33 pm, Fri, 25 June 21