ಮಹಿಳೆಯ ಅಂತ್ಯಕ್ರಿಯೆಗೆ ಬಾರದ ಕುಟುಂಬಸ್ಥರು; ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಯುವಕರು
ದೇಶದ ವಿವಿಧೆಡೆ ಇಂತಹ ಘಟನೆಗಳು ನಡೆದಿದೆ. ಪುಣೆಯಲ್ಲಿ ಮುಸ್ಲಿಂ ತಂಡವೊಂದು ಕೊರೊನಾ ಮೃತದೇಹಗಳ ಅಂತ್ಯಸಂಸ್ಕಾರ ಮಾಡುತ್ತಿದೆ. ಯಾರೂ ಬಾರದೆ ನಿರ್ಲಕ್ಷ್ಯಕ್ಕೆ ಒಳಗಾದ, ಕೊರೊನಾದಿಂದ ಮೃತಪಟ್ಟ ಶವಗಳಿಗೆ ಇವರು ಶವಸಂಸ್ಕಾರ ಮಾಡುತ್ತಿದ್ದಾರೆ.
ಶಿವಮೊಗ್ಗ: ಇಲ್ಲಿನ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊರೊನಾಗೆ ರುದ್ರಿಬಾಯಿ (47) ಎಂಬವರು ಬಲಿಯಾಗಿದ್ದರು. ಆದರೆ, ಮಹಿಳೆಯ ಅಂತ್ಯಕ್ರಿಯೆಗೆ ಕುಟುಂಬಸ್ಥರು ಬಂದಿಲ್ಲ. ಆ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕರು ಮೃತಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಶಿಕಾರಿಪುರದಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ್ದಾರೆ. ಮೊಹಮ್ಮದ್ ಇರ್ಫಾನ್ ಸೇರಿದಂತೆ 6 ಜನರ ತಂಡದಿಂದ ಹಿಂದೂ ವಿಧಿವಿಧಾನದ ಅನುಸಾರ ಅಂತ್ಯಸಂಸ್ಕಾರ ನಡೆಸಲಾಗಿದೆ.
ಕೊರೊನಾ ಸೋಂಕು ಹೆಚ್ಚಳ ಹಾಗೂ ಕೊರೊನಾದಿಂದ ಮೃತರಾಗುತ್ತಿರುವವರ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸುವುದು ಕೂಡ ಕೆಲವೆಡೆ ಕಷ್ಟ ಎಂಬಂತಾಗಿದೆ. ಈ ವೇಳೆ, ಜಾತಿ, ಧರ್ಮಕ್ಕೂ ಮೀರಿ ಮಾನವೀಯತೆಯ ಕಾರ್ಯ ನಡೆಸಿರುವುದು ಪ್ರಶಂಸೆಗೆ ಕಾರಣವಾಗಿದೆ.
ದೇಶದ ವಿವಿಧೆಡೆ ಇಂತಹ ಘಟನೆಗಳು ನಡೆದಿದೆ. ಪುಣೆಯಲ್ಲಿ ಮುಸ್ಲಿಂ ತಂಡವೊಂದು ಕೊರೊನಾ ಮೃತದೇಹಗಳ ಅಂತ್ಯಸಂಸ್ಕಾರ ಮಾಡುತ್ತಿದೆ. ಯಾರೂ ಬಾರದೆ ನಿರ್ಲಕ್ಷ್ಯಕ್ಕೆ ಒಳಗಾದ, ಕೊರೊನಾದಿಂದ ಮೃತಪಟ್ಟ ಶವಗಳಿಗೆ ಇವರು ಶವಸಂಸ್ಕಾರ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕಿನಿಂದ ನೂರಾರು ಮಂದಿ ಸಾವು; ಮೃತಪಟ್ಟವರ ಅಂತ್ಯಕ್ರಿಯೆಗೆ ಮುಂದಾದ ಯಾದಗಿರಿ ಸಂಘಟನೆ
ಕೊರೊನಾದಿಂದ ಪಾರಾಗಲು 2 ಮಾಸ್ಕ್ ಧರಿಸುವುದು ಪರಿಣಾಮಕಾರಿ; ಆದರೆ ಧರಿಸುವ ಕ್ರಮ ಯಾವುದು? ಇಲ್ಲಿದೆ ಮಾಹಿತಿ..
Published On - 5:47 pm, Mon, 10 May 21