
ಢಾಕಾ, ಫೆಬ್ರವರಿ 13: ಬಾಂಗ್ಲಾದೇಶ(Bangladesh)ದಲ್ಲಿ ಅಶಾಂತಿ ನೆಲೆಸಿದೆ. ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷ ಸರ್ಕಾರ ರಚಿಸಲಿದೆ ಎಂದು ಚುನಾವಣಾ ಫಲಿತಾಂಶಗಳು ಸೂಚಿಸುತ್ತಿಚೆ. ಸುಮಾರು ಎರಡು ದಶಕಗಳ ನಂತರ ಬಿಎನ್‌ಪಿ ಮತ್ತೆ ಅಧಿಕಾರಕ್ಕೆ ಬರುತ್ತಿದೆ. ಅವರ ಮೈತ್ರಿಕೂಟ ಈಗಾಗಲೇ ಬಹುಮತದ ಗಡಿ ದಾಟಿದೆ. ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಬಿಎನ್‌ಪಿ ಸರ್ಕಾರದಲ್ಲಿ ಪ್ರಧಾನಿಯಾಗಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. 17 ವರ್ಷಗಳ ವನವಾಸದ ನಂತರ ಬಾಂಗ್ಲಾದೇಶಕ್ಕೆ ಮರಳಿರುವ ತಾರಿಕ್ ರೆಹಮಾನ್, ಒಂದೂವರೆ ತಿಂಗಳಲ್ಲಿ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿಯಾಗುವ ಹಾದಿಯಲ್ಲಿದ್ದಾರೆ. ಹಾಗಾದರೆ ಅವರ ಆಸ್ತಿಯ ಒಟ್ಟು ಮೌಲ್ಯ ಎಷ್ಟಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಭ್ರಷ್ಟಾಚಾರದ ಆರೋಪದ ಮೇಲೆ ತಾರಿಕ್ ರೆಹಮಾನ್ ಅವರನ್ನು ಬಂಧಿಸಲಾಗಿತ್ತು. ಈ ಘಟನೆ ನಡೆದಿದ್ದು 2008ರಲ್ಲಿ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ತಾರಿಕ್ ಚಿಕಿತ್ಸೆಗಾಗಿ ತನ್ನ ಕುಟುಂಬದೊಂದಿಗೆ ಲಂಡನ್ಗೆ ಹೋಗಿದ್ದರು. ಎಂದಿಗೂ ಹಿಂದಿರುಗಲಿಲ್ಲ. 17 ವರ್ಷಗಳ ಸ್ವಯಂ ಪ್ರೇರಿತ ಗಡಿಪಾರು ನಂತರ ತಾರಿಕ್ ರೆಹಮಾನ್ ಕಳೆದ ವರ್ಷ ಡಿಸೆಂಬರ್ 25ರಂದು ಬಾಂಗ್ಲಾದೇಶಕ್ಕೆ ಮರಳಿದ್ದರು. ಆ ಸಮಯದಲ್ಲಿ ಐದು ದಿನಗಳ ಬಳಿಕ ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ನಾಯಕಿ ಖಲೀದಾ ಜಿಯಾ ಅವರ ಮೃತಪಟ್ಟರು. ಪಕ್ಷದ ಜವಾಬ್ದಾರಿ ತಾರಿಕ್ ರೆಹಮಾನ್ ಅವರ ಹೆಗಲ ಮೇಲೆ ಬಿದ್ದಿತ್ತು.
ಬಾಂಗ್ಲಾದೇಶಕ್ಕೆ ಹಿಂದಿರುಗಿದ ನಂತರ, ತಾರಿಕ್ ಚುನಾವಣೆಯಲ್ಲಿ ಭಾಗವಹಿಸಲು ನಿರ್ಧರಿಸಿದರು. ಅವರು ಬೊಗ್ರಾ -6 ಮತ್ತು ಢಾಕಾ -17 ಕ್ಷೇತ್ರಗಳಿಗೆ ಸ್ಪರ್ಧಿಸಿದ್ದರು. ಅವರು ಎರಡೂ ಕ್ಷೇತ್ರಗಳನ್ನು ಭಾರಿ ಮತಗಳ ಅಂತರದಿಂದ ಗೆದ್ದಿದ್ದಾರೆ.
ತಾರಿಕ್ ರೆಹಮಾನ್ ಆಸ್ತಿ
ಚುನಾವಣಾ ಅಫಿಡವಿಟ್ ಪ್ರಕಾರ, 57 ವರ್ಷದ ತಾರಿಕ್ ರೆಹಮಾನ್ ಅವರ ಒಟ್ಟು ಆಸ್ತಿ 1.97 ಕೋಟಿ ಟಾಕಾ. ಅವರು ಬ್ಯಾಂಕ್ ಠೇವಣಿ, ಚಿನ್ನ ಮತ್ತು ಆಭರಣಗಳು, ಪೀಠೋಪಕರಣಗಳನ್ನು ಹೊಂದಿದ್ದಾರೆ, ಒಟ್ಟಾರೆಯಾಗಿ, ಅವರು 1.93 ಕೋಟಿ ಟಾಕಾ. ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಹೊಂದಿದ್ದಾರೆ. ಇದರಲ್ಲಿ ಷೇರುಗಳಿಂದ ಬರುವ ಭಾರಿ ಆದಾಯವೂ ಸೇರಿದೆ.
ತಾರೊಕ್ ಅವರ ಬಳಿ 31 ಲಕ್ಷ 58 ಸಾವಿರ ಟಾಕ್ ಬ್ಯಾಂಕ್ ಠೇವಣಿ ಮತ್ತು ನಗದು ಇದೆ. ಅವರ ಬಳಿ 68 ಲಕ್ಷ ಒಂದೂವರೆ ಟಾಕಾ ಮೌಲ್ಯದ ಷೇರುಗಳಿವೆ.
ಅವರ ಬಳಿ 90 ಲಕ್ಷ 24 ಸಾವಿರ ಮೌಲ್ಯದ ಸ್ಥಿರ ಠೇವಣಿಗಳಿವೆ. 1 ಲಕ್ಷ 20 ಸಾವಿರ ಟಾಕಾ ಮೌಲ್ಯದ ಇತರ ಠೇವಣಿಗಳಿವೆ. ಪೀಠೋಪಕರಣಗಳ ಮೌಲ್ಯ ಸುಮಾರು 1 ಲಕ್ಷ 80 ಸಾವಿರ ಟಾಕಾ. ತಾರಿಕ್ ರೆಹಮಾನ್ ಅಪಾರ ಪ್ರಮಾಣದ ರಿಯಲ್ ಎಸ್ಟೇಟ್ ಹೊಂದಿದ್ದಾರೆ. ಅವರು ಎರಡು ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿದ್ದಾರೆ, ಅದನ್ನು ಖರೀದಿಸುವ ಸಮಯದಲ್ಲಿ 345,000 ಟಾಕಾಗಳಿಗೆ ಖರೀದಿಸಲಾಗಿತ್ತು. ತಾರಿಕ್ ರೆಹಮಾನ್ ಮತ್ತು ಅವರ ಪತ್ನಿ ಮತ್ತು ಮಗಳು ಯಾವುದೇ ಸಾಲವನ್ನು ಹೊಂದಿಲ್ಲ. ಅವರು 2025-26 ರ ಹಣಕಾಸು ವರ್ಷದಲ್ಲಿ 1 ಲಕ್ಷ 1 ಸಾವಿರ 453 ಟಾಕಾ ಆದಾಯ ತೆರಿಗೆಯನ್ನು ಪಾವತಿಸಿದ್ದಾರೆ.
ಮತ್ತೊಂದೆಡೆ, ತಾರಿಕ್ ರೆಹಮಾನ್ ವಿರುದ್ಧ ಪ್ರಸ್ತುತ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. 2004 ರಿಂದ ಅವರ ವಿರುದ್ಧ ದಾಖಲಾಗಿರುವ ಎಲ್ಲಾ 77 ಪ್ರಕರಣಗಳನ್ನು ಹಂತ ಹಂತವಾಗಿ ಪರಿಹರಿಸಲಾಗಿದೆ. ಕೆಲವರಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ, ಕೆಲವು ಪ್ರಕರಣಗಳಲ್ಲಿ ಹಿಂಪಡೆಯಲಾಗಿದೆ ಅಥವಾ ಕೆಲವು ಪ್ರಕರಣಗಳಲ್ಲಿ ವಜಾಗೊಳಿಸಲಾಗಿದೆ. ತಾರಿಕ್ ಅವರನ್ನು ಹಲವಾರು ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಗಿದೆ.
ಮತ್ತಷ್ಟು ಓದಿ: ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್‌ಪಿ ಐತಿಹಾಸಿಕ ಗೆಲುವು ಸಾಧಿಸಿದರೂ ಖುಷಿಯ ಮೆರವಣಿಗೆಯೇ ಇಲ್ಲ
ಹೆಚ್ಚಿನ ಪ್ರಕರಣಗಳು 2004, 2007, 2014 ಮತ್ತು 2015 ರಲ್ಲಿ ದಾಖಲಾಗಿವೆ. ಮಾರ್ಚ್ 2007 ರಲ್ಲಿ ಹೊರಡಿಸಲಾದ ತುರ್ತು ಅಧಿಕಾರ ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಒಂದು ಪ್ರಕರಣವನ್ನು ವಜಾಗೊಳಿಸಲಾಯಿತು ಮತ್ತು ಏಪ್ರಿಲ್ 16, 2009 ರಂದು ಖುಲಾಸೆಗೊಳಿಸಲಾಯಿತು.
ಅಫಿಡವಿಟ್ ಪ್ರಕಾರ, ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ತಾರಿಕ್ ರೆಹಮಾನ್ 42 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದರು. 2014 ರಲ್ಲಿ ಒಂದು ಪ್ರಕರಣ, 2015 ರಲ್ಲಿ ಮೂರು, 2016 ರಲ್ಲಿ ಎಂಟು, 2017 ರಲ್ಲಿ ಆರು, 2018 ರಲ್ಲಿ ನಾಲ್ಕು, 2019 ರಲ್ಲಿ ಐದು, 2020 ರಲ್ಲಿ ಒಂದು, 2021 ರಲ್ಲಿ ಒಂದು ಮತ್ತು 2022 ರಲ್ಲಿ ಐದು ಪ್ರಕರಣಗಳಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ