ಫ್ರಾನ್ಸ್​​ನಲ್ಲಿ ಮೋದಿಗೆ ವಿಶೇಷ ಗೌರವ: ಲೌವ್ರೆ ಮ್ಯೂಸಿಯಂನಲ್ಲಿ ಔತಣಕೂಟ, ತ್ರಿವರ್ಣ ಧ್ವಜಕ್ಕೂ ಆದ್ಯತೆ

|

Updated on: Jul 15, 2023 | 1:49 PM

ಕಳೆದ 25 ವರ್ಷಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ಆದರೆ ಫ್ರಾನ್ಸ್ ಮತ್ತು ಭಾರತದ ನಡುವಿನ ಸ್ನೇಹವು ಗಾಢವಾಗಿ ಬೆಳೆಯುತ್ತಲೇ ಇದೆ. ಭಾರತ ಮತ್ತು ಫ್ರಾನ್ಸ್ ಎರಡೂ ದೇಶಗಳ ಕಲ್ಯಾಣಕ್ಕೆ ಮಾತ್ರವಲ್ಲದೆ ವಿಶ್ವ ಶಾಂತಿ ಮತ್ತು ಭದ್ರತೆಗೆ ಕೊಡುಗೆ ನೀಡುತ್ತಿದೆ.ಭಾರತ-ಫ್ರಾನ್ಸ್ ಸಹಭಾಗಿತ್ವವು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಫ್ರಾನ್ಸ್​​ನಲ್ಲಿ ಮೋದಿಗೆ ವಿಶೇಷ ಗೌರವ: ಲೌವ್ರೆ ಮ್ಯೂಸಿಯಂನಲ್ಲಿ ಔತಣಕೂಟ, ತ್ರಿವರ್ಣ ಧ್ವಜಕ್ಕೂ ಆದ್ಯತೆ
ಲೌವ್ರೆ ಮ್ಯೂಸಿಯಂನಲ್ಲಿ ಔತಣಕೂಟಕ್ಕೆ ಆಗಮಿಸಿದ ಮೋದಿ
Follow us on

ಪ್ಯಾರಿಸ್ ಜುಲೈ 15: ಬಾಸ್ಟಿಲ್ ಡೇಯಂದು (Bastille Day) (ಶುಕ್ರವಾರ) ಪ್ಯಾರಿಸ್‌ನ (Parris) ಪ್ರಸಿದ್ಧ ಲೌವ್ರೆ ಮ್ಯೂಸಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron) ಆಯೋಜಿಸಿದ್ದ ಔತಣಕೂಟವು ಹಲವಾರು ವಿಶೇಷತೆಯಿಂದ ಕೂಡಿತ್ತು. ಈ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಜನರ ಪ್ರಕಾರ, ಬಾಸ್ಟಿಲ್ ಡೇಯಂದು ದೇಶಾದ್ಯಂತದ ಫ್ರೆಂಚ್ ಜನರು, ಸಂದರ್ಶಕರು ಮತ್ತು ಪ್ರವಾಸಿಗರು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವುದರಿಂದ ಲೌವ್ರೆ ಸಾಮಾನ್ಯವಾಗಿ ಕಿಕ್ಕಿರಿದು ತುಂಬಿರುತ್ತದೆ. ಆದರೆ ಔತಣಕೂಟವನ್ನು ಆಯೋಜಿಸಲು ಅದನ್ನು ಮುಚ್ಚಲಾಯಿತು. ಕೊನೆಯ ಬಾರಿಗೆ 1953 ರಲ್ಲಿ ರಾಣಿ ಎಲಿಜಬೆತ್‌ಗಾಗಿ ಲೌವ್ರೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಅಂದರೆ ರಾಣಿ ಎಲಿಜಬೆತ್ ಗೆ ಔತಣಕೂಟ ಏರ್ಪಡಿಸಿದಲ್ಲೇ ಮೋದಿಯವರಿಗೆ ಭೋಜನಕೂಟ ಏರ್ಪಡಿಸಿ ಫ್ರಾನ್ಸ್ ವಿಶೇಷ ಗೌರವ ನೀಡಿದೆ.

ಮೆನುವಿನ ಥ್ರೆಡ್ ಕೂಡ ಭಾರತೀಯ ತ್ರಿವರ್ಣವನ್ನು ಒಳಗೊಂಡಿತ್ತು. ಫ್ರಾನ್ಸ್ ನವರು ವಾಗಲೂ ಥ್ರೆಡ್ ಅನ್ನು ಫ್ರೆಂಚ್ ಬಣ್ಣಗಳಲ್ಲಿ ಮಾತ್ರ ಮಾಡುತ್ತಾರೆ ಈ ಮೂಲಕ ಫ್ರಾನ್ಸ್ ಸರ್ಕಾರವು ತನ್ನ ಪ್ರೊಟೋಕಾಲ್ ಉಲ್ಲಂಘಿಸಿದೆ. ಅಷ್ಟೇ ಅಲ್ಲ ಪ್ರಧಾನಮಂತ್ರಿಯವರ ಭೇಟಿಗಾಗಿ ವಿಶೇಷವಾಗಿ ಸಸ್ಯಾಹಾರಿ ಮೆನುವನ್ನು ಕೂಡ ಮಾಡಲಾಗಿತ್ತು.

“ನಾನು ಬಾಸ್ಟಿಲ್ ಡೇಯದು ಫ್ರಾನ್ಸ್ ಜನರನ್ನು ಅಭಿನಂದಿಸುತ್ತೇನೆ. ಫ್ರಾನ್ಸಿನ ಜನರೊಂದಿಗೆ ಬಾಸ್ಟಿಲ್ ದಿನವನ್ನು ಆಚರಿಸುವುದು ನನಗೆ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿತ್ತು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನನಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಪ್ರಶಸ್ತಿಯನ್ನು ನೀಡಿದರು. ಇದು ಭಾರತದ 140 ಕೋಟಿ ಜನರಿಗೆ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ. ಈ ಗೌರವಕ್ಕಾಗಿ ನಾನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರೋನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಶುಕ್ರವಾರ ಔತಣಕೂಟದಲ್ಲಿ ಹೇಳಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.


ಕಳೆದ 25 ವರ್ಷಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ಆದರೆ ಫ್ರಾನ್ಸ್ ಮತ್ತು ಭಾರತದ ನಡುವಿನ ಸ್ನೇಹವು ಗಾಢವಾಗಿ ಬೆಳೆಯುತ್ತಲೇ ಇದೆ. ಭಾರತ ಮತ್ತು ಫ್ರಾನ್ಸ್ ಎರಡೂ ದೇಶಗಳ ಕಲ್ಯಾಣಕ್ಕೆ ಮಾತ್ರವಲ್ಲದೆ ವಿಶ್ವ ಶಾಂತಿ ಮತ್ತು ಭದ್ರತೆಗೆ ಕೊಡುಗೆ ನೀಡುತ್ತಿದೆ.ಭಾರತ-ಫ್ರಾನ್ಸ್ ಸಹಭಾಗಿತ್ವವು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: PM Modi France Visit: ಲಾಂಗ್ ಲಿವ್ ಫ್ರೆಂಡ್ಶಿಪ್, ಮೋದಿ ಜತೆಗೆ ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್ ಸೆಲ್ಫಿ

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಮೋದಿಯವರಿಗೆ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಮತ್ತು ಮಿಲಿಟರಿ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್‌ನ ಅನ್ನು ನೀಡಿ ಗೌರವಿಸಿದ್ದಾರೆ.  “ವಿಶ್ವ ಇತಿಹಾಸದಲ್ಲಿ ಬಹುದೊಡ್ಡ, ಭವಿಷ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಕಾರ್ಯತಂತ್ರದ ಪಾಲುದಾರ, ಸ್ನೇಹಿತ. ಜುಲೈ 14 ರ ಪರೇಡ್‌ನಲ್ಲಿ ನಮ್ಮ ಗೌರವಾನ್ವಿತ ಅತಿಥಿಯಾಗಿ ಭಾರತವನ್ನು ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ, ”ಎಂದು ಪ್ರಧಾನಿ ಮೋದಿಯವರೊಂದಿಗೆ ಬಾಸ್ಟಿಲ್ ಡೇ ಆಚರಣೆ ಮತ್ತು ಮಿಲಿಟರಿ ಪರೇಡ್‌ನ ಅಧ್ಯಕ್ಷತೆ ವಹಿಸಿದ ನಂತರ ಮ್ಯಾಕ್ರನ್ ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ