ಬಿಲ್​ ಗೇಟ್ಸ್​ – ಮಿಲಿಂದಾ ಗೇಟ್ಸ್​ ಅವರ 27 ವರ್ಷದ ದಾಂಪತ್ಯ ಅಂತ್ಯ

ಬಿಲ್​ ಗೇಟ್ಸ್​ - ಮಿಲಿಂದಾ ಗೇಟ್ಸ್​ ಅವರ 27 ವರ್ಷದ ದಾಂಪತ್ಯ ಅಂತ್ಯ
ಡೈವೋರ್ಸ್​: ಬಿಲ್​ ಗೇಟ್ಸ್​ - ಮಿಲಿಂದಾ ಗೇಟ್ಸ್​ ಅವರ 27 ವರ್ಷದ ದಾಂಪತ್ಯ ಅಂತ್ಯ

Bill Gates and Melinda Gates Divorced: ಬಿಲ್​ ಗೇಟ್ಸ್​ ಮತ್ತು ಮಿಲಿಂದಾ ಗೇಟ್ಸ್​ ದಂಪತಿ 27 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ವಿಶ್ವದ ಅತ್ಯಧಿಕ ಧನಿಕರಾದ ಗೇಟ್ಸ್​ ದಂಪತಿ ತಾವು ಗಳಿಸಿದ್ದ ಅಪಾರ ಧನವನ್ನು ದಾನ ಧರ್ಮಗಳ ಮೂಲಕ ಜಗತ್ತಿಗೆ ಹಂಚಿದ್ದರು. ಆ ಮಹತ್ಕಾರ್ಯಕ್ಕಾಗಿಯೇ Bill and Melinda Gates Foundation ಸಂಸ್ಥೆಯನ್ನು ಹುಟ್ಟುಹಾಕಿ, ಅಹಿರ್ನಿಷಿ ದುಡಿದಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ.

sadhu srinath

| Edited By: Apurva Kumar Balegere

May 04, 2021 | 11:40 AM

ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ ಗೇಟ್ಸ್​ ಮತ್ತು ಮಿಲಿಂದಾ ಗೇಟ್ಸ್​ ದಂಪತಿ 27 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಸುಮಾರು ಮೂರು ದಶಕಗಳ ಅನ್ಯೋನ್ಯ, ಅಪರೂಪದ ದಾಂಪತ್ಯ ಜೀವನ ನಡೆಸಿದ್ದ ಬಿಲ್​ ಗೇಟ್ಸ್​ ಮತ್ತು ಮಿಲಿಂದಾ ಗೇಟ್ಸ್​ ದಂಪತಿ ಇಬ್ಬರೂ ಸಹ ಸಮ್ಮತಿಯೊಂದಿಗೆ ಈಗ ಬೇರೆಬೇರೆಯಾಗಿದ್ದಾರೆ. ಇದನ್ನು ಸ್ವತಃ ಬಿಲ್​ ಗೇಟ್ಸ್ ತಮ್ಮ ಟ್ವಿಟ್ಟರ್​ ಖಾತೆ ಮೂಲಕ ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಕಳಕಳಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಅಪಾರ ದಾನಗಳ ಮೂಲಕ ಜಗದ್ವಿಖ್ಯಾತರಾಗಿದ್ದ ಗೇಟ್ಸ್​ ದಂಪತಿ ಇದೀಗ ಬೇರ್ಪಟ್ಟಿರುವುದು ಅವರ ಅಭಿಮಾಇಗಳಿಗೆ ಅರಗಿಸಿಕೊಳ್ಳಲಾರದ ಸುದ್ದಿಯಾಗಿದೆ. ಉದ್ಯಮ ಜಗತ್ತು ಶಾಕ್​ಗೆ ಒಳಗಾಗಿದೆ. ಅದರಲ್ಲೂ ಅರೋಗ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಿಲ್​ ಗೇಟ್ಸ್​ ದಂಪತಿ ಇದೀಗ ಇಡೀ ವಿಶ್ವವನ್ನೇ ಬಾಧಿಸುತ್ತಿರುವ ಕೊರೊನಾ ಸಾಂಕ್ರಾಮಿಕ ವಿಷಮ ಘಳಿಗೆಯಲ್ಲಿ ಹೀಗೆ ಬೇರೆಯಾಗಿರುವುದು ಅನಿರೀಕ್ಷಿತ ಆಘಾತವಾಗಿದೆ.

ವಿಶ್ವದ ಅತ್ಯಧಿಕ ಧನಿಕರಾದ ಇಬ್ಬರೂ ತಮ್ಮೀ ನಿರ್ಧಾರವನ್ನು ಪರಸ್ಪರ ಸಮ್ಮತಿಯೊಂದಿಗೆ ಟ್ವಿಟ್ಟರ್​ ಮೂಲಕ ಘೋಷಿಸಿದ್ದಾರೆ. ದಶಕಗಳ ಕಾಲ ವಿಶ್ವಮಟ್ಟದಲ್ಲಿ ಇಬ್ಬರೂ ಮಿಂಚಿದ್ದರು. ತಾವು ಗಳಿಸಿದ್ದ ಅಪಾರ ಧನವನ್ನು ದಾನ ಧರ್ಮಗಳ ಮೂಲಕ ಜಗತ್ತಿಗೆ ಹಂಚಿದ್ದರು. ಆ ಮಹತ್ಕಾರ್ಯಕ್ಕಾಗಿಯೇ Bill and Melinda Gates Foundation ಸಂಸ್ಥೆಯನ್ನು ಹುಟ್ಟುಹಾಕಿ, ಅಹಿರ್ನಿಷಿ ದುಡಿದಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ.

ಜಗತ್ತಿನ ಮತ್ತೊಬ್ಬ ಶ್ರೀಮಂತ ವ್ಯಕ್ತಿ ಅಮೆಜಾನ್​ ಕಂಪನಿಯ ಸ್ಥಾಪಕ ಜೆಫ್​ ಬೆಜೋಸ್​ ಅವರ ದಾಂಪತ್ಯದಲ್ಲಿ ಬಿರುಕು ಮೂಡಿ, ಎರಡು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರು ಎಂಬುದು ಗಮನಾರ್ಹ.

ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ, 67 ವರ್ಷದ ಬಿಲ್​ ಗೇಟ್ಸ್​ ಬರೆದುಕೊಂಡಿರುವ ಟ್ವಿಟ್ಟರ್ ಸಂದೇಶ ಹೀಗಿದೆ:

ಆಳವಾಗಿ ಯೋಚಿಸಿದ ಬಳಿಕ ನಾವೊಂದು ನಿರ್ಧಾರಕ್ಕೆ ಬಂದಿದ್ದು, ಇಬ್ಬರೂ ದಾಂಪತ್ಯದಲ್ಲಿ ಬೇರೆ ಬೇರೆಯಾಗುತ್ತಿದ್ದೇವೆ. ನಾವು ಸಾರ್ವಜನಿಕ ದತ್ತಿ ಸಂಸ್ಥೆಯೊಂದನ್ನು ಸ್ಥಾಪಿಸಿದ್ದು, ಅದರ ಮೂಲಕ ಇಡೀ ವಿಶ್ವಕ್ಕೆ ತಲುಪುತ್ತಿದ್ದೇವೆ. ಇಂದು ಜಗತ್ತಿಗೆ ಅತ್ಯಗತ್ಯವಾಗಿ ಬೇಕಾಗಿರುವ ಆರೋಗ್ಯ ಕ್ಷೇತ್ರದಲ್ಲಿ Bill and Melinda Gates Foundation ನಮ್ಮನ್ನು ಅರ್ಪಿಸಿಕೊಂಡಿದ್ದೇವೆ. ಆದರೆ ನಾವು ನಮ್ಮ ಜೀವನದ ಮುಂದಿನ ಘಟ್ಟದಲ್ಲಿ ದಂಪತಿಯಾಗಿ ಒಟ್ಟಿಗೇ ಮುಂದುವರಿಯುವುದು ಸಾಧ್ಯವಾಗದು ಎಂದು ಮನಗಂಡು ಈ ತೀರ್ಮಾನಕ್ಕೆ ಬಂದಿದ್ದೇವೆ.

ಗೇಟ್ಸ್​ ದಂಪತಿ ವಿಚ್ಛೇದನದಿಂದ ಮುಂದೇನು?

ವಿಶ್ವದ ಅತ್ಯಧಿಕ ಧನಿಕರಾದ ಅಮೆರಿಕಾದ ಬಿಲ್​ ಗೇಟ್ಸ್​ (67 ವರ್ಷ) ಮತ್ತು ಮಿಲಿಂದಾ ಗೇಟ್ಸ್​ (56 ವರ್ಷ) ದಂಪತಿ ವಿಚ್ಛೇದನದಿಂದ ಮುಂದೇನು ಎಂದು ಪ್ರಶ್ನೆ ಎದುರಾಗಿದೆ. ಇಬ್ಬರೂ ಸೇರಿ ದಾನ ದತ್ತಿಯನ್ನು ಹುಟ್ಟುಹಾಕಿದ್ದರು. ಹಾಗಾಗಿ ಈ ದತ್ತಿಯ ಭವಿಷ್ಯ ಏನಾಗಲಿದೆ ಎಂಬ ಚಿಂತೆ ಈಗ ಎಲ್ಲರಲ್ಲೂ ಮನೆ ಮಾಡಿದೆ. ಬಿಲ್ ಗೇಟ್ಸ್​ ದಂಪತಿ ತಮ್ಮ ಅಷ್ಟೂ ಅಷ್ಟೈಶ್ವರ್ಯವನ್ನು ಇನ್ನೂ Bill and Melinda Gates Foundationಗೆ ಅರ್ಪಿಸಿಲ್ಲ. ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ ಗೇಟ್ಸ್​ ಅವರೊಬ್ಬರೇ, ಫೋರ್ಬ್ಸ್​ ಎಣಿಕೆಯ ಪ್ರಕಾರ 124 ಶತಕೋಟಿ ಡಾಲರ್​ ಸಂಪತ್ತನ್ನು ಹೊಂದಿದ್ದಾರೆ. ಇಬ್ಬರೂ ಸಂಧಿಸಿದ್ದು ಹೇಗೆ?

ಮಿಲಿಂದಾ ಗೇಟ್ಸ್​ 1987ರಲ್ಲಿ ಪ್ರಾಡಕ್ಟ್​ ಮ್ಯಾನೇಜರ್​ ಆಗಿ Microsoft ಸಂಸ್ಥೆಯನ್ನು ಸೇರಿದ್ದರು. ಅದೇ ವೇಳೆ ಕಂಪನಿಯ ಪರವಾಗಿ ಅನೇಕ ಉದ್ಯಮ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ವೇಳೆ ಇಬ್ಬರ ಮಧ್ಯೆ ಪ್ರೇಮ ಮೊಳಕೆಯೊಡೆದು ಹೆಮ್ಮರವಾಗತೊಡಗಿತ್ತು. 1994ರಲ್ಲಿ ಇಬ್ಬರೂ ವಿವಾಹವಾಗಿದ್ದರು.

(richest couple Bill Gates and Melinda Gates getting Divorced announce it through twitter)

Follow us on

Related Stories

Most Read Stories

Click on your DTH Provider to Add TV9 Kannada