ಬಿಲ್​ ಗೇಟ್ಸ್​-ಮೆಲಿಂಡಾ ಫ್ರೆಂಚ್ 27ವರ್ಷದ ದಾಂಪತ್ಯ ಜೀವನ ಅಂತ್ಯ; ಇಂದು ಅಧಿಕೃತವಾಗಿ ಬೇರ್ಪಟ್ಟ ಜೋಡಿ

| Updated By: Lakshmi Hegde

Updated on: Aug 03, 2021 | 1:22 PM

ಜಗತ್ತಿನ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂಡಾ ಫ್ರೆಂಚ್​ ಗೇಟ್ಸ್ ಇದೀಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ತಾವಿಬ್ಬರೂ ಬೇರೆಯಾಗುತ್ತಿರುವುದಾಗಿ ಮೂರು ತಿಂಗಳ ಹಿಂದೆ ಘೋಷಿಸಿದ್ದರು. ಇದೀಗ ಅಧಿಕೃತವಾಗಿ ಡಿವೋರ್ಸ್​ ಪಡೆಯವ ಮೂಲಕ, 27ವರ್ಷದ ದಾಂಪತ್ಯವನ್ನು ಮುರಿದುಕೊಂಡಿದ್ದಾರೆ. ವಾಷಿಂಗ್ಟನ್​​ನ ಕಿಂಗ್​ಕೌಂಟಿ ಕೋರ್ಟ್​ನಲ್ಲಿ ಇಂದು ಈ ದಂಪತಿಯ ವಿಚ್ಛೇದನಕ್ಕೆ ಸಂಬಂಧಪಟ್ಟ ಅಂತಿಮ ವಿಚಾರಣೆ ಇತ್ತು. ಇವರಿಬ್ಬರೂ ಪರಸ್ಪರರಿಂದ ಯಾವುದೇ ಆರ್ಥಿಕ ಬೆಂಬಲ ಪಡೆಯುವುದಿಲ್ಲ ಮತ್ತು ತಮ್ಮ ಹೆಸರನ್ನೂ ಬದಲಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾಗಿ ಕೋರ್ಟ್ ತಿಳಿಸಿದೆ. ಅಲ್ಲದೆ, ವಿಚ್ಛೇದನ […]

ಬಿಲ್​ ಗೇಟ್ಸ್​-ಮೆಲಿಂಡಾ ಫ್ರೆಂಚ್ 27ವರ್ಷದ ದಾಂಪತ್ಯ ಜೀವನ ಅಂತ್ಯ; ಇಂದು ಅಧಿಕೃತವಾಗಿ ಬೇರ್ಪಟ್ಟ ಜೋಡಿ
ಬಿಲ್​ ಗೇಟ್ಸ್​ ಮತ್ತು ಮೆಲಿಂಡಾ ಫ್ರೆಂಚ್​
Follow us on

ಜಗತ್ತಿನ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂಡಾ ಫ್ರೆಂಚ್​ ಗೇಟ್ಸ್ ಇದೀಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ತಾವಿಬ್ಬರೂ ಬೇರೆಯಾಗುತ್ತಿರುವುದಾಗಿ ಮೂರು ತಿಂಗಳ ಹಿಂದೆ ಘೋಷಿಸಿದ್ದರು. ಇದೀಗ ಅಧಿಕೃತವಾಗಿ ಡಿವೋರ್ಸ್​ ಪಡೆಯವ ಮೂಲಕ, 27ವರ್ಷದ ದಾಂಪತ್ಯವನ್ನು ಮುರಿದುಕೊಂಡಿದ್ದಾರೆ.

ವಾಷಿಂಗ್ಟನ್​​ನ ಕಿಂಗ್​ಕೌಂಟಿ ಕೋರ್ಟ್​ನಲ್ಲಿ ಇಂದು ಈ ದಂಪತಿಯ ವಿಚ್ಛೇದನಕ್ಕೆ ಸಂಬಂಧಪಟ್ಟ ಅಂತಿಮ ವಿಚಾರಣೆ ಇತ್ತು. ಇವರಿಬ್ಬರೂ ಪರಸ್ಪರರಿಂದ ಯಾವುದೇ ಆರ್ಥಿಕ ಬೆಂಬಲ ಪಡೆಯುವುದಿಲ್ಲ ಮತ್ತು ತಮ್ಮ ಹೆಸರನ್ನೂ ಬದಲಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾಗಿ ಕೋರ್ಟ್ ತಿಳಿಸಿದೆ. ಅಲ್ಲದೆ, ವಿಚ್ಛೇದನ ನಿಯಮದಲ್ಲಿ ಉಲ್ಲೇಖ ಆಗಿರುವ ನಿಯಮದ ಅನುಸಾರ ನಿಮ್ಮ ಆಸ್ತಿಯನ್ನು ಬದಲಿಸಿಕೊಳ್ಳಿ ಎಂದು ಬಿಲ್​ ಗೇಟ್ಸ್​ ಮತ್ತು ಮೆಲಿಂಡಾ ಫ್ರೆಂಚ್​ಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ಯುಎಸ್​ ಕಾನೂನಿನ ಪ್ರಕಾರ, ಯಾವುದೇ ಜೋಡಿ ಡಿವೋರ್ಸ್​ಗೆ ಅರ್ಜಿ ಹಾಕಿದರೆ ಅವರು ಸುಮಾರು 90 ದಿನಗಳ ಕಾಲ ಕಾಯಬೇಕು. ಅಂದರೆ ಅಷ್ಟು ದಿನ ಜೋಡಿಗೆ ಕಾಲಾವಕಾಶ ನೀಡಲಾಗುತ್ತದೆ. ಅಂತೆಯೇ ಬಿಲ್​ಗೇಟ್ಸ್​ ಮತ್ತು ಮೆಲಿಂಡಾ ಕೂಡ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿ ಮೂರು ತಿಂಗಳಾಗಿತ್ತು. ಅದು ಇಂದು ಅಂತಿಮ ವಿಚಾರಣೆ ನಡೆದು, ಬೇರ್ಪಟ್ಟಿದ್ದಾರೆ.
ಮೇ ತಿಂಗಳಲ್ಲಿ ಇವರು ತಮ್ಮ ವಿಚ್ಛೇದನ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಗೇಟ್ಸ್​ ಕಾಸ್ಕೇಡ್​ ಇನ್​ವೆಸ್ಟ್​ಮೆಂಟ್​ನಿಂದ 3 ಬಿಲಿಯನ್​ ಡಾಲರ್​ಗೂ ಹೆಚ್ಚು ಮೌಲ್ಯದ ಶೇರುಗಳನ್ನು ಮೆಲಿಂಡಾ ಗೇಟ್ಸ್​ ಹೆಸರಿಗೆ ವರ್ಗಾಯಿಸಲಾಗಿದೆ. ಹಾಗಂತ ಇವರ ಖಾಸಗಿ ಆಸ್ತಿ ಇನ್ನು ಮುಂದೆ ಹೇಗೆ ವಿಭಜನೆ ಆಗಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇನ್ನು ಬ್ಲೂಮ್​ಬರ್ಗ್​ ಬಿಲಿಯನೇರ್ಸ್ ಇಂಡೆಕ್ಸ್​ ಪ್ರಕಾರ, 65 ವರ್ಷದ ಬಿಲ್​ಗೇಟ್ಸ್​ ಆಸ್ತಿ ಮೌಲ್ಯ 150 ಬಿಲಿಯನ್ ಡಾಲರ್​ಗೂ ಅಧಿಕ.

ಇದನ್ನೂ ಓದಿ: ಕೋವಿಡ್ ಬರೋಕೆ ಪದ್ಮನಾಭ ನಗರ ಕ್ಷೇತ್ರದ ಆರ್ ಅಶೋಕ ಕಾರಣ.. ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ

Bill Gates And Melinda Gates Officially Divorced Today