AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟ್ಯಾಧಿಪತಿಗಳೇ ಇರಬಾರದು ಎಂದ ಮಮ್ದಾನಿ; ಮೀರಾ ನಾಯರ್ ಪುತ್ರ ಹಾಗೂ ನ್ಯೂಯಾರ್ಕ್ ಮೇಯರ್ ಅಭ್ಯರ್ಥಿ ಹೇಳಿಕೆ

Zohran Mamdani says billionaires shouldn't exist: ಅಮೆರಿಕದ ನ್ಯೂಯಾರ್ಕ್ ಸಿಟಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿರುವ ಭಾರತ ಮೂಲದ ಜೋಹ್ರಾನ್ ಮಮ್ದಾನಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್ಥಿಕ ಅಸಮಾನತೆ ವಿಚಾರದ ಬಗ್ಗೆ ಮಾತನಾಡುತ್ತಾ ಅಸಮಾಧಾನ ವ್ಯಕ್ತಪಡಿಸಿದ ಅವರು ಬಿಲಿಯನೇರ್​​ಗಳೇ ಇರಬಾರದು ಎಂದಿದ್ದಾರೆ. ಮಮ್ದಾನಿ ಅವರು ಭಾರತದ ಮಹಮೂದ್ ಮಮ್ದಾನಿ ಹಾಗೂ ಮೀರಾ ನಾಯರ್ ದಂಪತಿಯ ಮಗ.

ಕೋಟ್ಯಾಧಿಪತಿಗಳೇ ಇರಬಾರದು ಎಂದ ಮಮ್ದಾನಿ; ಮೀರಾ ನಾಯರ್ ಪುತ್ರ ಹಾಗೂ ನ್ಯೂಯಾರ್ಕ್ ಮೇಯರ್ ಅಭ್ಯರ್ಥಿ ಹೇಳಿಕೆ
ಜೋಹ್ರಾನ್ ಮಮ್ದಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 30, 2025 | 6:46 PM

Share

ನ್ಯೂಯಾರ್ಕ್, ಜೂನ್ 30: ಅಮೆರಿಕದ ಅತಿದೊಡ್ಡ ನಗರ ಎನಿಸಿದ ನ್ಯೂಯಾರ್ಕ್ ಸಿಟಿಯ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿರುವ ಭಾರತ ಮೂಲದ ಜೋಹ್ರಾನ್ ಮಮ್ದಾನಿ (Zohran Mamdani) ಅವರು ಆರ್ಥಿಕ ಅಸಮಾನತೆ (wealth inequality) ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಎನ್​​ಬಿಸಿ ವಾಹಿನಿಯ ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ 33 ವರ್ಷದ ಜೋಹ್ರಾಮ್ ಮಮ್ದಾನಿ ಅವರು ಬಿಲಿಯನೇರ್​​ಗಳೇ ಇಲ್ಲದಂತಹ ಪರಿಸ್ಥಿತಿ ಇರಬೇಕು ಎಂದು ಹೇಳಿದ್ದಾರೆ.

‘ಬಿಲಿಯನೇರ್​​ಗಳು ಇರಬೇಕು ಅಂತ ನನಗೆ ಅನಿಸುವುದಿಲ್ಲ. ಅವರ ಬಳಿ ಇಷ್ಟು ಹಣ ಶೇಖರಣೆ ಆಗಿರುವುದರಿಂದ ಈ ಅಸಮಾನತೆ ನೆಲಸಿದೆ. ಅಂತಿಮವಾಗಿ ನಮ್ಮ ನಗರ, ರಾಜ್ಯ ಹಾಗೂ ದೇಶಾದ್ಯಂತ ನಮಗೆ ಬೇಕಿರುವುದು ಸಮಾನತೆ’ ಎಂದು ಮಮ್ದಾನಿ ಹೇಳಿದ್ದಾರೆ.

ತಾನು ಮೇಯರ್ ಆಗಿ ಆಯ್ಕೆಯಾದರೆ ನ್ಯೂಯಾರ್ಕ್ ನಗರವನ್ನು ಎಲ್ಲರಿಗೂ ಬೇಕಾಗುವ ರೀತಿಯಲ್ಲಿ ಎಲ್ಲರೊಂದಿಗೂ ಕೆಲಸ ಮಾಡಲು ಸಿದ್ಧನಿದ್ದೇನೆ. ಬಿಲಿಯನೇರ್​​ಗಳ ಜೊತೆಗೂ ಕೆಲಸ ಮಾಡಲು ಸಿದ್ಧ ಎಂದು ಡೆಮಾಕ್ರಾಟ್ ಪಕ್ಷದ ಜೋಹ್ರಾನ್ ಮಮ್ದಾನಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಪಿಆರ್; ನ್ಯೂಯಾರ್ಕ್ ಮೇಯರ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ವಿರುದ್ಧ ಕಾಂಗ್ರೆಸ್, ಬಿಜೆಪಿ ವಾಗ್ದಾಳಿ

ಮೀರಾ ನಾಯರ್ ಮಗ ಮಮ್ದಾನಿ

33 ವರ್ಷದ ಜೋಹ್ರಾನ್ ಮಮ್ದಾನಿ ಅವರು ಭಾರತ ಮೂಲದವರಾದರೂ ಹುಟ್ಟಿದ್ದು ಉಗಾಂಡ ದೇಶದಲ್ಲಿ. ಖ್ಯಾತ ಚಿತ್ರ ತಯಾರಕಿ ಮೀರಾ ನಾಯರ್ ಹಾಗೂ ಗುಜರಾತ್ ಮೂಲದ ಇತಿಹಾಸಕಾರ ಮಹಮೂದ್ ಮಮ್ದಾನಿ ಅವರ ಮಗನಾದ ಜೊಹ್ರಾನ್ ಮಮ್ದಾನಿ ಅಪ್ಪಟ ಸೋಷಿಯಲಿಸ್ಟ್ ಸಿದ್ಧಾಂತಿ ಹೌದು. ಅಂತೆಯೇ ಅವರು ಅಮೆರಿಕದ ಉದಾರ ಧೋರಣೆಯ ಡೆಮಾಕ್ರಾಟ್ ಪಕ್ಷದ ರಾಜಕಾರಣಿಯಾಗಿದ್ದಾರೆ.

ಡೆಮಾಕ್ರಾಟ್ ಪಕ್ಷದಿಂದ ಅಚ್ಚರಿ ಮೇಯರ್ ಅಭ್ಯರ್ಥಿಯಾದ ಮಮ್ದಾನಿ

ಜೋಹ್ರಾನ್ ಮಮ್ದಾನಿ ಅವರು ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಅಭ್ಯರ್ಥಿಯಾಗಲು ಪಕ್ಷದೊಳಗೆ ನಡೆದ ಸ್ಪರ್ಧೆಯಲ್ಲಿ ಅಚ್ಚರಿ ರೀತಿಯಲ್ಲಿ ಗೆಲುವು ಸಾಧಿಸಿದ್ದಾರೆ. ಹಾಲಿ ಮೇಯರ್ ಆಗಿರುವ ಎರಿಕ್ ಅಡಮ್ಸ್ ಹಾಗೂ ಅನುಭವಿ ರಾಜಕಾರಣಿ, ಮಾಜಿ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕುವೋಮೋ ಅವರಂತಹ ದಿಗ್ಗಜರನ್ನು ಸೋಲಿಸಿ ಡೆಮಾಕ್ರಾಟ್ ಮೇಯರ್ ಅಭ್ಯರ್ಥಿಯಾಗಿದ್ದಾರೆ ಮಮ್ದಾನಿ.

ಮೇಯರ್ ಸ್ಥಾನ ಗೆಲ್ಲಬಲ್ಲರಾ ಮಮ್ದಾನಿ?

ನ್ಯೂಯಾರ್ಕ್ ನಗರ ಬಹುತೇಕ ಡೆಮಾಕ್ರಾಟ್ ಪಕ್ಷದ ಭದ್ರಕೋಟೆ ಎನಿಸಿದೆ. ಇಲ್ಲಿ ರಿಪಬ್ಲಿಕನ್ ಪಕ್ಷ ಮೇಯರ್ ಗದ್ದುಗೆ ಹಿಡಿದಿದ್ದು ಬಹಳ ಕಡಿಮೆ. 2005ರಲ್ಲಿ ಮಿಕೇಲ್ ಬ್ಲೂಮ್​ಬರ್ಗ್ ಅವರು ಗೆದ್ದಿದ್ದು ಬಿಟ್ಟರೆ ಕಳೆದ 20 ವರ್ಷಗಳಿಂದ ಮೇಯರ್ ಗದ್ದುಗೆ ಡೆಮಾಕ್ರಾಟ್ ಪಕ್ಷದ ಬಳಿಯೇ ಇದೆ.

ಇದನ್ನೂ ಓದಿ: ಭಯೋತ್ಪಾದನೆಯನ್ನು ಹೋರಾಟವೆಂದು ಕರೆದು ಮತ್ತೆ ಭಾರತದ ವಿರುದ್ಧ ವಿಷ ಕಾರಿದ ಆಸಿಮ್ ಮುನೀರ್

ಆದರೆ, ಈ ಬಾರಿ ಮಮ್ದಾನಿ ಅವರಿಗೆ ಗೆಲುವು ಅಷ್ಟು ಸುಲಭವಿದ್ದಂತಿಲ್ಲ. ಡೆಮಾಕ್ರಾಟ್ ಪಕ್ಷದ ಇಬ್ಬರು ಘಟಾನುಘಟಿಗಳು ರೆಬೆಲ್ ಆಗಿ ಸ್ಪರ್ಧಿಸಿದ್ದಾರೆ. ಅಂದರೆ ಪಕ್ಷೇತರ ಅಭ್ಯರ್ಥಿಯಾಗಿ ಮೇಯರ್ ಚುನಾವಣೆಯಲ್ಲಿ ನಿಂತಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಕರ್ಟಿಸ್ ಸಿಲ್ವಾ ಇದ್ದಾರೆ. ಡೆಮಾಕ್ರಾಟ್ ಪಕ್ಷಕ್ಕೆ ಬರುವ ಮತಗಳು ಹಂಚಿಹೋಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಜೋಹ್ರಾನ್ ಮಮ್ದಾನಿ ಗೆಲುವು ಅಷ್ಟು ಸುಲಭವಲ್ಲ.

ಭಾರತ ವಿರೋಧಿ ಹೇಳಿಕೆಗಳ ವಿವಾದ ಹುಟ್ಟುಹಾಕಿರುವ ಮಮ್ದಾನಿ…

ಜೋಹ್ರಾನ್ ಮಮ್ದಾನಿ ಅವರು ಕೆಲವಾರು ವರ್ಷಗಳಿಂದ ಭಾರತ ವಿರೋಧಿ ನಿಲುವು ತಳೆದಿದ್ದಾರೆ. 2002ರ ಗುಜರಾತ್ ಗಲಭೆ ಘಟನೆಯನ್ನು ಮುಸ್ಲಿಮರ ನರಮೇಧ ಎಂದು ಅವರು ಬಣ್ಣಿಸಿದ್ದಿದೆ. ನ್ಯೂಯಾರ್ಕ್ ನಗರದಲ್ಲಿ ನಡೆದ ಹಿಂದೂ ವಿರೋಧಿ ಪ್ರತಿಭಟನೆಗಳಲ್ಲಿ ಅವರು ಪಾಲ್ಗೊಂಡಿದ್ದರು. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಪರ ಮಾತನಾಡಿದ್ದಿದೆ.

ವಿದೇಶ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್