ಅಮೆರಿಕದಲ್ಲಿ ಹೊಸ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಎಲಾನ್ ಮಸ್ಕ್
ಅಮೆರಿಕದಲ್ಲಿ ಹೊಸ ರಾಜಕೀಯ ಪಕ್ಷ ಕಟ್ಟುವುದಾಗಿ ಎಲಾನ್ ಮಸ್ಕ್ ಎಚ್ಚರಿಕೆ ನೀಡಿದ್ದಾರೆ. ಒಂದೊಮ್ಮೆ ಅಮೆರಿಕದಲ್ಲಿ ‘ಒನ್ ಬಿಗ್ ಬ್ಯೂಟಿಫುಲ್ ಬಿಲ್’ಗೆ ಅನುಮೋದನೆ ಸಿಕ್ಕರೆ ಮರುದಿನವೇ ಹೊಸ ಪಕ್ಷವನ್ನು ಕಟ್ಟುವುದಾಗಿ ಎಲಾನ್ ಮಸ್ಕ್ ಟ್ರಂಪ್ಗೆ ಎಚ್ಚರಿಕೆ ನೀಡಿದ್ದಾರೆ. ಒಂದು ಕಾಲದಲ್ಲಿ ಡೊನಾಲ್ಡ್ ಟ್ರಂಪ್ ಆಪ್ತಮಿತ್ರ ಮತ್ತು ಸಲಹೆಗಾರರಾಗಿದ್ದ ಬಿಲಿಯನೇರ್ ಎಲಾನ್ ಮಸ್ಕ್ ಈ ಟ್ರಂಪ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ವಾಷಿಂಗ್ಟನ್, ಜೂನ್ 01: ಒಂದೊಮ್ಮೆ ಅಮೆರಿಕದಲ್ಲಿ ‘ಒನ್ ಬಿಗ್ ಬ್ಯೂಟಿಫುಲ್ ಬಿಲ್’ಗೆ ಅನುಮೋದನೆ ಸಿಕ್ಕರೆ ಮರುದಿನವೇ ಹೊಸ ಪಕ್ಷವನ್ನು ಕಟ್ಟುವುದಾಗಿ ಎಲಾನ್ ಮಸ್ಕ್(Elon Musk) ಟ್ರಂಪ್ಗೆ ಎಚ್ಚರಿಕೆ ನೀಡಿದ್ದಾರೆ. ಒಂದು ಕಾಲದಲ್ಲಿ ಡೊನಾಲ್ಡ್ ಟ್ರಂಪ್ ಆಪ್ತಮಿತ್ರ ಮತ್ತು ಸಲಹೆಗಾರರಾಗಿದ್ದ ಬಿಲಿಯನೇರ್ ಎಲಾನ್ ಮಸ್ಕ್ ಈ ಟ್ರಂಪ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಈ ಮಸೂದೆ ತೆರಿಗೆದಾರರ ಮೇಲೆ ಭಾರಿ ಹೊರೆಯಾಗಲಿದೆ ಎಂದು ಮಸ್ಕ್ ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಈ ಬಿಲ್ಗೆ ಅನುಮೋದನೆ ಸಿಕ್ಕರೆ ಜನರ ಹಿತಾಸಕ್ತಿಗಳಿಗೆ ನಿಜವಾಗಿಯೂ ಆದ್ಯತೆ ನೀಡುವ ಹೊಸ ಪಕ್ಷವನ್ನು ರಚಿಸುವುದಾಗಿ ಹೇಳಿದ್ದಾರೆ.
ಈ ಮಸೂದೆಯನ್ನು ಬೆಂಬಲಿಸುವ ಸಂಸದರು ಮುಂದಿನ ವರ್ಷ ಪ್ರಾಥಮಿಕ ಚುನಾವಣೆಯಲ್ಲಿ ಸೋಲನ್ನು ಎದುರಿಸಬೇಕಾಗುತ್ತದೆ ಎಂದು ಮಸ್ಕ್ ಸ್ಪಷ್ಟವಾಗಿ ಹೇಳಿದ್ದಾರೆ. ಶನಿವಾರ ಸೆನೆಟ್ನಲ್ಲಿ ಮಸೂದೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಮಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವುದಾಗಿ ಭರವಸೆ ನೀಡಿ ಈ ಮಸೂದೆಯನ್ನು ಬೆಂಬಲಿಸಿದ ಶಾಸಕರು ನಾಚಿಕೆಪಡಬೇಕು ಎಂದಿದ್ದಾರೆ.
ಮತ್ತಷ್ಟು ಓದಿ: ಮಾನಸಿಕ ಸ್ಥಿತಿ ಕಳೆದುಕೊಂಡವರ ಜೊತೆ ಮಾತನಾಡಲು ಇಷ್ಟವಿಲ್ಲ; ಎಲಾನ್ ಮಸ್ಕ್ ಬಗ್ಗೆ ಟ್ರಂಪ್ ಆಕ್ರೋಶ
ಮಸೂದೆಯನ್ನು ದುಬಾರಿ ಎಂದು ಕರೆದಿರುವ ಮಸ್ಕ್, ಇದನ್ನು ಪೋರ್ಕಿ ಪಿಗ್ ಪಾರ್ಟಿ ಎಂದಿದ್ದಾರೆ ಈ ಪದವನ್ನು ವ್ಯರ್ಥ ವೆಚ್ಚಕ್ಕೆ ಬಳಸಲಾಗುತ್ತದೆ. ಹೊಸ ರಾಜಕೀಯ ಪಕ್ಷದ ಅಗತ್ಯವನ್ನು ಒತ್ತಿ ಹೇಳಿದ ಅವರು, ಈಗ ಸಾರ್ವಜನಿಕರ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವ ಪಕ್ಷವನ್ನು ರಚಿಸುವ ಸಮಯ ಬಂದಿದೆ ಎಂದರು.
If this insane spending bill passes, the America Party will be formed the next day.
Our country needs an alternative to the Democrat-Republican uniparty so that the people actually have a VOICE.
— Elon Musk (@elonmusk) June 30, 2025
ಈ ಮಸೂದೆಯು ರಾಷ್ಟ್ರೀಯ ಸಾಲವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು DOGE ಮೂಲಕ ಮಾಡಿರುವ ಎಲ್ಲಾ ಉಳಿತಾಯವನ್ನು ಹಾಳು ಮಾಡುತ್ತದೆ ಎಂದು ಮಸ್ಕ್ ಹೇಳಿದ್ದಾರೆ. ಆದರೆ ಮಸ್ಕ್ ಮತ್ತು ಟ್ರಂಪ್ ನಡುವಿನ ಈ ವಿವಾದವು 2026 ರ ಮಧ್ಯಂತರ ಚುನಾವಣೆಯಲ್ಲಿ ಬಹುಮತಕ್ಕೆ ಅಡ್ಡಿಯಾಗಬಹುದು ಎಂದು ರಿಪಬ್ಲಿಕನ್ ಪಕ್ಷವು ಭಯಪಡುತ್ತದೆ.
ಒಂದು ಕಾಲದಲ್ಲಿ ಟ್ರಂಪ್ ಅವರ ಆಪ್ತ ಸಲಹೆಗಾರರಾಗಿದ್ದ ಎಲೋನ್ ಮಸ್ಕ್ ಅವರನ್ನು ‘ಸರ್ಕಾರಿ ದಕ್ಷತೆ ಇಲಾಖೆ’ಯ ಮುಖ್ಯಸ್ಥರನ್ನಾಗಿ ಮಾಡಲಾಯಿತು . ಆದರೆ ಶೀಘ್ರದಲ್ಲೇ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಗಾಢವಾಗಲು ಪ್ರಾರಂಭಿಸಿದವು. ತಮ್ಮ ಬೆಂಬಲವಿಲ್ಲದಿದ್ದರೆ ಟ್ರಂಪ್ ಚುನಾವಣೆಯಲ್ಲಿ ಸೋಲುತ್ತಿದ್ದರು ಎಂದು ಮಸ್ಕ್ ಹೇಳಿಕೊಂಡಿದ್ದರು, ಬಳಿಕ ಸರ್ಕಾರದಿಂದ ಹೊರ ನಡೆದಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:11 am, Tue, 1 July 25








