AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನಸಿಕ ಸ್ಥಿತಿ ಕಳೆದುಕೊಂಡವರ ಜೊತೆ ಮಾತನಾಡಲು ಇಷ್ಟವಿಲ್ಲ; ಎಲಾನ್ ಮಸ್ಕ್ ಬಗ್ಗೆ ಟ್ರಂಪ್ ಆಕ್ರೋಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ದ್ವೇಷದ ನಂತರ ಎಲಾನ್ ಮಸ್ಕ್ ಅವರ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್ 'ಮನಸ್ಸು ಸ್ಥಿಮಿತದಲ್ಲಿ ಇಲ್ಲದ ವ್ಯಕ್ತಿಯೊಂದಿಗೆ ಮಾತನಾಡಲು ಆಸಕ್ತಿ ಇಲ್ಲ' ಎಂದಿದ್ದಾರೆ. ನೀತಿ ಭಿನ್ನಾಭಿಪ್ರಾಯಗಳು ಮತ್ತು ವೈಯಕ್ತಿಕ ಕುಂದುಕೊರತೆಗಳ ಬಗ್ಗೆ ಉದ್ವಿಗ್ನತೆ ಹೆಚ್ಚುತ್ತಿರುವಾಗ ಡೊನಾಲ್ಡ್ ಟ್ರಂಪ್ ಎಲಾನ್ ಮಸ್ಕ್ ಅವರೊಂದಿಗಿನ ದ್ವೇಷವನ್ನು ತಳ್ಳಿಹಾಕಿದರು. ಎಲಾನ್ ಮಸ್ಕ್ "ಮನಸ್ಸಿನ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿ" ಎಂದು ಹೇಳಿದ್ದಾರೆ.

ಮಾನಸಿಕ ಸ್ಥಿತಿ ಕಳೆದುಕೊಂಡವರ ಜೊತೆ ಮಾತನಾಡಲು ಇಷ್ಟವಿಲ್ಲ; ಎಲಾನ್ ಮಸ್ಕ್ ಬಗ್ಗೆ ಟ್ರಂಪ್ ಆಕ್ರೋಶ
Trump-Elon Musk
ಸುಷ್ಮಾ ಚಕ್ರೆ
|

Updated on: Jun 06, 2025 | 8:08 PM

Share

ವಾಷಿಂಗ್ಟನ್, ಜೂನ್ 6: ಇಷ್ಟು ದಿನ ಆಪ್ತ ಸ್ನೇಹಿತರಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಈಗ ಶತ್ರುಗಳಾಗಿದ್ದಾರೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಎಲಾನ್ ಮಸ್ಕ್ ಜೊತೆ ನಡೆದ ಬಿಸಿ ವಿನಿಮಯದ ನಂತರ, ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಅವರೊಂದಿಗೆ ನನಗೆ ಯಾವ ದ್ವೇಷವೂ ಇಲ್ಲ. ಆದರೆ, ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಜೊತೆ ಮಾತನಾಡಲು ನನಗೆ ಆಸಕ್ತಿ ಇಲ್ಲ. ಈ ದಿನದ ನಂತರ ಎಲಾನ್ ಮಸ್ಕ್ ಅವರೊಂದಿಗೆ ಮಾತುಕತೆ ನಡೆಸುವುದರ ಬಗ್ಗೆ ಕೇಳಿದಾಗ, “ನೀವು ಮನಸಿನ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯ ಬಗ್ಗೆ ಕೇಳುತ್ತಿದ್ದೀರಾ?” ಎಂದು ಟೀಕಿಸಿದರು.

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಒನ್ ಬಿಗ್ ಬ್ಯೂಟಿಫುಲ್ ಮಸೂದೆಯನ್ನು ಟೀಕಿಸಿದ ನಂತರ ಟ್ರಂಪ್ ಮತ್ತು ಮಸ್ಕ್ ನಡುವಿನ ಬಿರುಕು ಭುಗಿಲೆದ್ದಿತು. ಗುರುವಾರ ಈ ಉದ್ವಿಗ್ನತೆ ಹೊಸ ಎತ್ತರವನ್ನು ತಲುಪಿತು. ಅಮೆರಿಕ ಅಧ್ಯಕ್ಷ ಟ್ರಂಪ್ 2024ರ ಚುನಾವಣಾ ಗೆಲುವಿನಲ್ಲಿ ತಮ್ಮ ಪಾತ್ರವನ್ನು ಒಪ್ಪಿಕೊಳ್ಳದಿದ್ದಕ್ಕಾಗಿ ಎಲಾನ್ ಮಸ್ಕ್ ಟ್ರಂಪ್ ಅವರನ್ನು “ಕೃತಘ್ನ” ಎಂದು ಆರೋಪಿಸಿದರು. “ನಾನು ಇಲ್ಲದಿದ್ದರೆ ಟ್ರಂಪ್ ಚುನಾವಣೆಯಲ್ಲಿ ಸೋಲುತ್ತಿದ್ದರು” ಎಂದು ಮಸ್ಕ್ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಟ್ರಂಪ್ ಜೊತೆಗಿನ ಮುನಿಸಿನ ಬೆನ್ನಲ್ಲೇ ಹೊಸ ರಾಜಕೀಯ ಪಕ್ಷದ ಸುಳಿವು ನೀಡಿದ ಎಲಾನ್ ಮಸ್ಕ್

ಇದನ್ನೂ ಓದಿ
Image
ವಿಮಾನಕ್ಕೆ ಹದ್ದು ಡಿಕ್ಕಿಯಾಗಿ ತುರ್ತು ಭೂಸ್ಪರ್ಶ; 175 ಪ್ರಯಾಣಿಕರು ಪಾರು
Image
ರಷ್ಯಾದಿಂದ ಬಾಕಿ ಎಸ್-400 ಕ್ಷಿಪಣಿ ವ್ಯವಸ್ಥೆಗಳು ಭಾರತಕ್ಕೆ 2026ಕ್ಕೆ ಲಭ್ಯ
Image
ಉಕ್ರೇನ್‌ ಡ್ರೋನ್ ದಾಳಿಯಲ್ಲಿ ಯುದ್ಧ ವಿಮಾನ ಪತನದ ಬಗ್ಗೆ ಮೌನ ಮುರಿದ ರಷ್ಯಾ
Image
ಪಾಕಿಸ್ತಾನ ಭಿಕ್ಷಾ ಪಾತ್ರೆ ಹಿಡಿದು ದೇಶಗಳ ಸುತ್ತುತ್ತಿದೆ

“ನಾನು ಎಲಾನ್ ಮಸ್ಕ್ ಬಗ್ಗೆ ತುಂಬಾ ನಿರಾಶೆಗೊಂಡಿದ್ದೇನೆ. ನಾನು ಅವರಿಗೆ ಬಹಳ ಸಹಾಯ ಮಾಡಿದ್ದೆ” ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಎಲಾನ್ ಮಸ್ಕ್, “ಅಮೆರಿಕದಲ್ಲಿ ಹೊಸ ರಾಜಕೀಯ ಪಕ್ಷವನ್ನು ರಚಿಸಲು ಇದು ಸೂಕ್ತ ಸಮಯವೇ?” ಎಂದು ಕೇಳುವ ಸಮೀಕ್ಷೆಯನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ತ್ವರಿತವಾಗಿ ವ್ಯಾಪಕ ಗಮನ ಸೆಳೆಯಿತು. ಟ್ರಂಪ್ ಅವರ ಮಾರ್ಕ್ಯೂ ಖರ್ಚು ಶಾಸನದ ಬಗ್ಗೆ ಮಸ್ಕ್ ತೀವ್ರವಾಗಿ ಟೀಕಿಸಿದ್ದಾರೆ. ಈ ಮಸೂದೆಯನ್ನು ಬೆಂಬಲಿಸಿದವರು ಸಾರ್ವಜನಿಕ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ