ದಕ್ಷಿಣ ನೈಜೀರಿಯಾ(Nigeria)ದಲ್ಲಿ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ ಸಂಭವಿಸಿದ್ದು ಇಬ್ಬರು ಗರ್ಭಿಣಿಯರು ಸೇರಿ 37 ಮಂದಿ ಸುಟ್ಟು ಕರಕಲಾಗಿದ್ದಾರೆ ಎಂದು ಸ್ಥಳೀಯ ಭದ್ರತಾ ಅಧಿಕಾರಿ ಮತ್ತು ಸಮುದಾಯದ ಮುಖಂಡರು ಮಂಗಳವಾರ ತಿಳಿಸಿದ್ದಾರೆ. ಮೂವತ್ತೈದು ಜನರು ಬೆಂಕಿಯಲ್ಲಿ ಸಿಲುಕಿಕೊಂಡರು. ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದ ಇಬ್ಬರು ಮಂಗಳವಾರ ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿಕರು ಸಂತ್ರಸ್ತರಲ್ಲಿ ಕೆಲವರನ್ನು ಗುರುತಿಸಿ ಅಂತ್ಯಕ್ರಿಯೆಗೆ ಕರೆದೊಯ್ದಿದ್ದಾರೆ ಎಂದು ಅವರು ಹೇಳಿದರು.
ನೈಜೀರಿಯಾ ಹಲವಾರು ವರ್ಷಗಳಿಂದ ಅಕ್ರಮ ಕಚ್ಚಾ ತೈಲ ಸಂಸ್ಕರಣಾಗಾರಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದೆ, ಸ್ವಲ್ಪ ಯಶಸ್ವಿಯಾಗಿದೆ, ಏಕೆಂದರೆ ಪ್ರಬಲವಾಗಿ ಸಂಪರ್ಕ ಹೊಂದಿದ ರಾಜಕಾರಣಿಗಳು ಮತ್ತು ಭದ್ರತಾ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಪರಿಸರ ಗುಂಪುಗಳು ಹೇಳುತ್ತವೆ.
ಮತ್ತಷ್ಟು ಓದಿ: ಇಂಡೋನೇಷ್ಯಾದ ಬೃಹತ್ ತೈಲ ಸಂಸ್ಕರಣಾಗಾರದಲ್ಲಿ ಅಗ್ನಿ ಅವಘಡ: ಸುಮಾರು 1000 ಸ್ಥಳೀಯರ ಸ್ಥಳಾಂತರ
ಸುಟ್ಟ ತಾಳೆ ಮರಗಳು, ಮೋಟಾರ್ಬೈಕ್ಗಳು ಜತೆಗೆ 15 ಅವಶೇಷಗಳನ್ನು ಕೂಡ ಕಂಡಿದ್ದಾಗಿ ಪ್ರತ್ಯಕ್ಷದರ್ಶಿ ರಾಯ್ಟರ್ಸ್ಗೆ ತಿಳಿಸಿದ್ದಾರೆ.
ನೈಜೀರಿಯಾದಲ್ಲಿ ಕಚ್ಚಾತೈಲ ಕಳ್ಳತನ, ಪೈಪ್ನಲ್ಲಿ ಹಾಳು ಮಾಡವುದು, ತೈಲ ಸೋರಿಕೆ ಸೇರಿದಂತೆ ಹಲವು ತೊಂದರೆಗಳನ್ನು ಜನರು ಎದುರಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ